ETV Bharat / sports

India vs Australia 3rd ODI: ಆಸ್ಟ್ರೇಲಿಯಾ ವಿರುದ್ಧ ಕ್ಲೀನ್​ ಸ್ವೀಪ್​ ಸಾಧನೆ ಮಾಡುತ್ತಾ ಭಾರತ..?

author img

By ETV Bharat Karnataka Team

Published : Sep 26, 2023, 11:01 PM IST

India vs Australia 3rd ODI
India vs Australia 3rd ODI

ವಿಶ್ವಕಪ್​ ತಂಡ ಬುಧವಾರ ಆಸ್ಟ್ರೇಲಿಯಾ ಪಂದ್ಯದ ವೇಳೆ ಮೈದಾನಕ್ಕಿಳಿಯಲಿದೆ. ಈಗಾಗಲೇ ಬ್ಯಾಟಿಂಗ್​ನಲ್ಲಿ ಬಲಾಢ್ಯವಾಗಿರುವ ತಂಡಕ್ಕೆ ರೋಹಿತ್​ ಮತ್ತು ವಿರಾಟ್​ ಸೇರಿಕೊಳ್ಳಲಿದ್ದಾರೆ.

ರಾಜ್‌ಕೋಟ್‌ (ಗುಜರಾತ್‌): ಭಾರತ ತನ್ನ ಗೆಲುವಿನ ಓಟವನ್ನು ವಿಸ್ತರಿಸುವ ಮತ್ತು ಪ್ರವಾಸಿ ಆಸ್ಟ್ರೇಲಿಯಾದ ಮೇಲೆ ಕ್ಲೀನ್‌ಸ್ವೀಪ್‌ ಸಾಧನೆ ಮಾಡುವ ಗುರಿಯೊಂದಿಗೆ ಬುಧವಾರ ಇಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಮೈದಾನಕ್ಕಿಳಿಯುತ್ತಿದೆ. ಆಸ್ಟ್ರೇಲಿಯಾ ಸರಣಿಯನ್ನು ಕಳೆದುಕೊಂಡಿದೆ. ಆದರೆ ವಿಶ್ವಕಪ್​ಗೂ ಮುನ್ನ ಒಂದು ಪಂದ್ಯದ ಗೆಲುವಿನ ಜೊತೆಗೆ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕಿಳಿಯುವ ಲೆಕ್ಕಾಚಾರದಲ್ಲಿದೆ. ಏಕೆಂದರೆ ಆಸ್ಟ್ರೇಲಿಯಾಕ್ಕೆ ವಿಶ್ವಕಪ್​ನ ಮೊದಲ ಎದುರಾಳಿ ಭಾರತವೇ ಆಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ 178 ಮತ್ತು 122 ರನ್ ಗಳಿಸಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ತಂಡವನ್ನು ಮುನ್ನಡೆಸಿರುವ ಕೆಎಲ್ ರಾಹುಲ್ ಇಲ್ಲಿಯವರೆಗೆ ಅಮೋಘ ಫಾರ್ಮ್ ಪ್ರದರ್ಶಿಸಿ ಮಿಂಚಿದ್ದಾರೆ. ಇದಕ್ಕೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅನುಭವ ಸೇರಿ ನಾಳಿನ ಪಂದ್ಯದಲ್ಲಿ ಇನ್ನಷ್ಟೂ ಬ್ಯಾಟಿಂಗ್​ ಬಲ ಟೀಮ್​ ಇಂಡಿಯಾದ್ದು ಹೆಚ್ಚಾಗಲಿದೆ.

ಇಂದೋರ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಉತ್ತಮ ಸಂಪರ್ಕದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳ ಆಯ್ಕೆಯಲ್ಲಿ ತಂಡದ ಆಡಳಿತವನ್ನು ಇನ್ನೂ ಗೊಂದಲಕ್ಕೆ ಸಿಲುಕಿಸಬಹುದು. ಗಮನಾರ್ಹವೆಂದರೆ, ವಿಶ್ವಕಪ್‌ಗೂ ಮುನ್ನ ತಮ್ಮ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಲು ಭಾರತಕ್ಕೆ ಇದು ಅಂತಿಮ ಅವಕಾಶವಾಗಿದೆ.

ಮೊದಲ ಏಕದಿನದಲ್ಲಿ ವೇಗಿ ಮೊಹಮ್ಮದ್ ಶಮಿ ಉತ್ತಮ ಸ್ಪೆಲ್​ನಿಂದ ಗಮನ ಸೆಳೆದರು. ತಂಡದಲ್ಲಿ ಬ್ಯಾಟಿಂಗ್​ ಬಲ ಹೆಚ್ಚಿಸುವ ಉದ್ದೇಶದಿಂದ ಕೇವಲ ಎರಡು ಪ್ರಮುಖ ವೇಗಿಗಳನ್ನು ಕಣಕ್ಕಿಳಿಸುತ್ತಿದ್ದ ಆಯ್ಕೆದಾರರು ಆಯ್ಕೆಯ ಬಗ್ಗೆ ಈಗ ತಲೆಕೆಡಿಸಿಕೊಳ್ಳ ಬೇಕಾಗುತ್ತದೆ. ಅತ್ತ ಸಿರಾಜ್​, ಬುಮ್ರಾ ಸಹ ಗಮನಾರ್ಹವಾಗಿದ್ದಾರೆ. ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಬಲವಾಗಿದ್ದು, ಮೂರನೇ ಏಕದಿನ ಅವರಿಗೆ ನಿರ್ಣಾಯಕ ಪಂದ್ಯವಾಗಿ ಪರಿಣಮಿಸಬಹುದು. ಏಕೆಂದರೆ ಇದು ವಿಶ್ವಕಪ್‌ಗೆ ಮೊದಲು ಅತ್ಯುತ್ತಮ ಪ್ರದರ್ಶನ ನೀಡಲು ಅವರ ಕೊನೆಯ ಅವಕಾಶವಾಗಿದೆ.

ಮತ್ತೊಂದೆಡೆ, ಸತತ ಎರಡು ಸೋಲು ಕಂಡಿರುವ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್​ ಸುಧಾರಿಸಿಕೊಳ್ಳ ಬೇಕಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಸೇರಿ ಒಟ್ಟು ಐದು ಸೋಲು ಕಂಡಿರುವ ಆಸಿಸ್​ ವಿಶ್ವಕಪ್​ಗೂ ಮುನ್ನ ಲಯಕ್ಕೆ ಮರಳ ಬೇಕಿದೆ. ಆರಂಭಿಕ ಮತ್ತು ಅನುಭವಿ ಡೇವಿಡ್ ವಾರ್ನರ್ ಬ್ಯಾಟ್‌ನೊಂದಿಗೆ ಸ್ಥಿರ ಪ್ರದರ್ಶನ ನೀಡುತ್ತಿದ್ದರೆ. ಸೀನ್ ಅಬಾಟ್ ಬ್ಯಾಟ್‌ನೊಂದಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಉಳಿದಂತೆ ಆಸಿಸ್​ ಬ್ಯಾಟಿಂಗ್​ ಮಂಕಾಗಿದೆ. ಅನುಭವಿ ಸ್ಮಿತ್​ ಸಹ ಭಾರತೀಯ ಪಿಚ್​ಗಳಲ್ಲಿ ರನ್​ ಗಳಿಸುತ್ತಿಲ್ಲ.

ಪಂದ್ಯ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ರಾಜ್​ಕೋಟ್​ನಲ್ಲಿ ಭಾರತೀಯ ಕಾಲಮಾನ 1:30ಕ್ಕೆ ಪಂದ್ಯ ನಡೆಯಲಿದೆ. ಸ್ಪೋರ್ಟ್ಸ್​ 18 ಮತ್ತು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಲಭ್ಯ.

ಇದನ್ನೂ ಓದಿ: World Cup 2023: ಹಸರಂಗ, ಚಾಮೀರ ರಹಿತ ವಿಶ್ವಕಪ್​ ತಂಡ ಪ್ರಕಟಿಸಿದ ಶ್ರೀಲಂಕಾ.. ಸಿಂಹಳೀಯರಿಗೆ ಪ್ರಮುಖ ಆಲ್​ರೌಂಡರ್ ಕೊರತೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.