ETV Bharat / sports

IND vs AUS: ಬ್ಯಾಟಿಂಗ್​ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಕಮ್​ಬ್ಯಾಕ್​.. ನಾಲ್ವರು ಬ್ಯಾಟರ್​ಗಳ ಅರ್ಧಶತಕ.. ಭಾರತಕ್ಕೆ 353 ರನ್​ ಬೃಹತ್​ ಗುರಿ

author img

By ETV Bharat Karnataka Team

Published : Sep 27, 2023, 1:29 PM IST

Updated : Sep 27, 2023, 6:10 PM IST

IND vs AUS 3rd ODI: ಸತತ ಐದು ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯದಿಂದ ಸೋಲು ಕಂಡಿದ್ದ ಆಸ್ಟ್ರೇಲಿಯಾ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಮ್​ಬ್ಯಾಕ್​​ ಮಾಡಿದೆ. ಆಸಿಸ್​ ವಿರುದ್ಧ ಕ್ಲೀನ್​ ಸ್ವೀಪ್​ ಸಾಧಿಸಲು ಭಾರತ 353 ರನ್​ನ ಗುರಿಯನ್ನು ಭೇದಿಸಬೇಕಿದೆ.

IND vs AUS 3rd ODI
IND vs AUS 3rd ODI

ರಾಜ್ ಕೋಟ್ (ಗುಜರಾತ್): ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯನ್​ ಬ್ಯಾಟರ್​​ಗಳು ಕಳೆದೆರಡು ಪಂದ್ಯಕ್ಕಿಂತ ಉತ್ತಮವಾಗಿ ರನ್​ ಕಲೆಹಾಕಿದ್ದಾರೆ. ಮೊದಲ ನಾಲ್ಕು ಬ್ಯಾಟರ್​​ಗಳ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ ಓವರ್​ ಅಂತ್ಯಕ್ಕೆ 7ವಿಕೆಟ್​ ನಷ್ಟಕ್ಕೆ 352 ರನ್​ ಕಲೆಹಾಕಿದೆ. ವಿಶ್ವಕಪ್​ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದು ಭಾರತ ತಂಡಕ್ಕೆ ಅನುಭವಿ ಬ್ಯಾಟರ್​ಗಳಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಮರಳಿದ್ದು, ಆಸಿಸ್​ ನೀಡಿದ 353 ರನ್​ನ ಬೃಹತ್​ ಮೊತ್ತವನ್ನು ಸಾಧಿಸಬೇಕಿದೆ.

ಆಸಿಸ್​ಗೆ ಉತ್ತಮ ಆರಂಭ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಪ್ಯಾಟ್​ ಕಮಿನ್ಸ್​ ನಿರ್ಧಾರವನ್ನು ಆಸಿಸ್​ ಆಟಗಾರರು ಸಮರ್ಥಿಸಿಕೊಂಡಿದ್ದಾರೆ. ಮೂವರು ವೇಗಿಗಳ ಜೊತೆ ಇಂದು ರೋಹಿತ್​ ಪಡೆ ಮೈದಾನಕ್ಕಿಳಿದಿದ್ದು, ನೀರೀಕ್ಷಿತ ಯಶಸ್ಸು ಮೊದಲು ಕಾಣಲಿಲ್ಲ. ಆರಂಭಿಕ ಬ್ಯಾಟರ್​ಗಳಾದ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಜೋಡಿ 78 ರನ್​ನ ಜೊತೆಯಾಟವನ್ನು ಮಾಡಿತು. ಅನುಭವಿ ವಾರ್ನರ್​ ಭಾರತದ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲೂ ಅರ್ಧಶತಕ ಗಳಿಸಿ ತಮ್ಮ ಫಾರ್ಮ್​ನ್ನು ಪ್ರದರ್ಶಿಸಿದ್ದಾರೆ.

ವಾರ್ನರ್​ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್​ ಮಾಡಿದರು. ಲೆಗ್ ಸೈಡ್​ ಬಾಲ್​ಗಳನ್ನು ಲೀಲಾಜಾಲವಾಗಿ ಬೌಂಡರಿಗೆ ಕಳಿಸುತ್ತಾ 32 ಎಸೆತದಲ್ಲಿ 6 ಫೋರ್​ ಮತ್ತು 4 ಸಿಕ್ಸ್​ನಿಂದ 54 ರನ್​ ಕಲೆಹಾಕಿದರು. ನಂತರ ಮೈದಾನಕ್ಕೆ ಬಂದ ಸ್ಟೀವ್​ ಸ್ಮಿತ್​ ಇನ್ನೊಬ್ಬ ಆರಂಭಿಕ ಆಟಗಾರ ಮಾರ್ಷ್​ ಜೊತೆಗೆ ಪಾಲುದಾರಿಕೆಯನ್ನು ಮುಂದುವರೆಸಿದರು.

ಸ್ಮಿತ್ - ಮಾರ್ಷ ಶತಕದ ಜೊತೆಯಾಟ: ಎರಡನೇ ವಿಕೆಟ್​ಗೆ ಈ ಜೋಡಿ 137 ರನ್​ ಪಾಲುದಾರಿಕೆಯನ್ನು ಮಾಡಿತು. ವಾರ್ನರ್​ ವಿಕೆಟ್​ ನಂತರ ಮಾರ್ಷ್​ ರನ್​ನ ವೇಗವನ್ನು ಹೆಚ್ಚಿಸಿದರು. ಭಾರತೀಯ ಬೌಲರ್​ಗಳನ್ನು ದಂಡಿಸಲು ಆರಂಭಿಸಿದರು. ಪವರ್​ ಪ್ಲೇ ನಂತರ ಸ್ಪಿನ್​ಗಳ ಮೂಲಕ ರೋಹಿತ್​ ಶರ್ಮಾ ನಿಯಂತ್ರಣ ಸಾಧಿಸಲು ಪ್ರಯತ್ನಸಿದರೂ ಮಾರ್ಷ ತಮ್ಮ ರನ್​ ಗಳಿಕೆ ಶೈಲಿಯನ್ನು ಬದಲಾಯಿಸಲಿಲ್ಲ. ಮಾರ್ಷ ಶತಕಕ್ಕೆ 4 ರನ್​ ಬೇಕಿದ್ದಾಗ ವಿಕೆಟ್​ ಕೊಟ್ಟರು. ಇದರಿಂದ ಅಂತಾರಾಷ್ಟ್ರೀಯ ಏಕದಿನದ 4ನೇ ಶತಕದಿಂದ ವಂಚಿತರಾದರು. ಇನ್ನಿಂಗ್ಸ್​ನಲ್ಲಿ ಮಾರ್ಷ್​ 84 ಬಾಲ್​ ಆಡಿ 13 ಬೌಂಡರಿ ಮತ್ತು 3 ಸಿಕ್ಸ್​ನಿಂದ 96 ರನ್​ ಕಲೆಹಾಕಿದರು.

ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್​ ಕೊಟ್ಟಿದ್ದ ಸ್ಮಿತ್​ ಇಂದು ರಾಜ್​ ಕೋಟ್​ನಲ್ಲಿ ಯಶಸ್ವಿಯಾಗಿ ರನ್​ ಕಲೆಹಾಕಿದರು. 61 ಬಾಲ್ ಆಡಿದ ಸ್ಮಿನ್​ 8 ಬೌಂಡರಿ ಮತ್ತು 1 ಸಿಕ್ಸ್​ನಿಂದ 74 ರನ್​ ಕಲೆಹಾಕಿದರು. ನಾಲ್ಕನೇ ಕ್ರಮಾಂಕದ ಬ್ಯಾಟರ್​ ಮಾರ್ನಸ್ ಲ್ಯಾಬುಶೇನ್​ ಸಹ ಅರ್ಧಶತಕ ಗಳಿಸಿದರು. ಮಾರ್ನಸ್​ ತಮ್ಮ ಇನ್ನಿಂಗ್ಸ್​ನಲ್ಲಿ 58 ಬಾಲ್​ ಎದುರಿಸಿ 9 ಬೌಂಡರಿಗಳ ಸಹಾಯದಿಂದ 72 ರನ್​ ಕಲೆಹಾಕಿದರು. ಒಂದು ಹಂತದಲ್ಲಿ ಆಸ್ಟ್ರೇಲಿಯನ್ನರು 400ಕ್ಕೂ ಹೆಚ್ಚು ರನ್​ನ ಗುರಿಯನ್ನು ನೀಡುವ ರನ್​ರೇಟ್​ನೊಂದಿಗೆ ಬ್ಯಾಟ್​ ಬೀಸುತ್ತಿದ್ದರು.

ಕೆಳ ಕ್ರಮಾಂಕದಲ್ಲಿ ವೈಫಲ್ಯ: ಆದರೆ ಕೆಳ ಕ್ರಮಾಂಕದ ಬ್ಯಾಟರ್​ಗಳು ಘರ್ಜಿಸಲಿಲ್ಲ. ಅಲೆಕ್ಸ್​ ಕ್ಯಾರಿ (11), ಗ್ಲೆನ್​ ಮ್ಯಾಕ್ಸ್​ (5) ಮತ್ತು ಕ್ಯಾಮರಾನ್​ ಗ್ರೀನ್​ (9) ಬೇಗ ವಿಕೆಟ್​ ಕೊಟ್ಟರು. ಕೊನೆಯಲ್ಲಿ ನಾಯಕ ಪ್ಯಾಟ್​ ಕಮಿನ್ಸ್​ ಮತ್ತು ಮಿಚೆಲ್​ ಸ್ಟಾರ್ಕ್​ ತಂದಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಭಾರತದ ಪರ ಬುಮ್ರಾ 10 ಓವರ್​ಗೆ 80 ರನ್​ ಕೊಟ್ಟು ದುಬಾರಿ ಆದರು. ಆದರೆ ಆಸಿಸ್​ನ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಕುಲ್ದೀಪ್​ ಯಾದವ್​ 2, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್​ ಸಿರಾಜ್​ ತಲಾ 1 ವಿಕೆಟ್​ ಪಡೆದರು.

ಇದನ್ನೂ ಓದಿ: Asian Games 2023: ಟ್ರ್ಯಾಕ್ ಸೈಕ್ಲಿಂಗ್​ನಲ್ಲಿ ಕ್ವಾರ್ಟರ್​ ಫೈನಲ್​ಗೆ ಭಾರತ, 8ನೇ ಸುತ್ತಿನ ಚೆಸ್​ನಲ್ಲಿ ಸಾಧಾರಣ ಪ್ರದರ್ಶನ

Last Updated : Sep 27, 2023, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.