ETV Bharat / business

ಅಂತಾರಾಷ್ಟ್ರೀಯ ಟೀ-ಶರ್ಟ್ ದಿನ: ಜನಪ್ರಿಯತೆಗೆ ಕಾರಣಗಳೇನು? - International T Shirt Day

author img

By ETV Bharat Karnataka Team

Published : Jun 21, 2024, 9:32 AM IST

ಅಂತಾರಾಷ್ಟ್ರೀಯ ಟೀ-ಶರ್ಟ್ ದಿನವನ್ನು ಪ್ರತಿ ಜೂನ್ 21ರಂದು ಆಚರಿಸಲಾಗುತ್ತದೆ.

International T Shirt Day
ಅಂತಾರಾಷ್ಟ್ರೀಯ ಟಿ-ಶರ್ಟ್ ದಿನ (Representational image, ANI)

ಪ್ರತಿ ಜೂನ್ 21ರಂದು ಅಂತಾರಾಷ್ಟ್ರೀಯ ಟೀ-ಶರ್ಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು 2008ರಲ್ಲಿ 'ಸ್ಪ್ರೆಡ್‌ಶರ್ಟ್' ಸಂಸ್ಥೆ ಆರಂಭವಾದಾಗಿನಿಂದ ಆಚರಿಸಲಾಗುತ್ತಿದೆ.

ಟೀ-ಶರ್ಟ್ ಆರಂಭದಲ್ಲಿ ಕೂಪರ್ ಅಂಡರ್‌ವೇರ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿತು. 1904ರಲ್ಲಿ ಈ ಸಂಸ್ಥೆ ಜನಪ್ರಿಯತೆ ಪಡೆಯಿತು. ಟೀ-ಶರ್ಟ್ ಮಾರಾಟ ವಿಸ್ತರಣೆಗೊಂಡು, ಅದೇ ವರ್ಷ ವ್ಯವಹಾರ US$ 180 ಮಿಲಿಯನ್​ಗೆ ತಲುಪಿತು. ಬಿಗ್​ ಸ್ಕ್ರೀನ್​ ವಿಚಾರಕ್ಕೆ ಬಂದರೆ ಮೊದಲ ಬಾರಿಗೆ 1951ರ "ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್" ಸಿನಿಮಾದಲ್ಲಿ ನಟ ಮರ್ಲಾನ್ ಬ್ರ್ಯಾಂಡೋ ಟೀ ಶರ್ಟ್ ಧರಿಸಿ ಜನಪ್ರಿಯಗೊಳಿಸಿದರು. ಆಗ ಟೀ ಶರ್ಟ್ ವ್ಯವಹಾರ ಮತ್ತಷ್ಟು ಉತ್ತಮಗೊಂಡಿತು.

ಟೀ-ಶರ್ಟ್‌ನ ಮೂಲ: ನಮಗೆ ತಿಳಿದಿರುವಂತೆ ಇಂದು ಟೀ-ಶರ್ಟ್ ಒಂದು ಪ್ರಮುಖ ಉಡುಪು. ಟಿ-ಶರ್ಟ್‌ನ ಮೂಲವನ್ನು 19ನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಕೊಳ್ಳಬಹುದು. ಕಾರ್ಮಿಕರು ಬೇಸಿಗೆ ಸಂದರ್ಭ ತಮ್ಮನ್ನು ತಂಪಾಗಿರಿಸಲು ತಮ್ಮ ಜಂಪ್‌ಸೂಟ್‌ಗಳನ್ನು ಅರ್ಧದಷ್ಟು ಕತ್ತರಿಸುತ್ತಾರೆ. 1898ರ ಸ್ಪ್ಯಾನಿಷ್-ಅಮೆರಿಕನ್ ಯುದ್ಧದ ಸಂದರ್ಭ ಟೀ ಶರ್ಟ್ ಅನ್ನು ಕಂಡುಹಿಡಿಯಲಾಯಿತು. 1913ರಲ್ಲಿ ಯುಎಸ್ ನೌಕಾಪಡೆಯು ಅವುಗಳನ್ನು ಪ್ರಮಾಣಿತ ಒಳ ಅಂಗಿಗಳಾಗಿ ವಿತರಿಸಲು ಪ್ರಾರಂಭಿಸಿತು.

ಅದಾಗ್ಯೂ, "ಟೀ-ಶರ್ಟ್" ಎಂಬ ಪದವನ್ನು ಇಂಗ್ಲಿಷ್ ನಿಘಂಟಿನಲ್ಲಿ ಸೇರಿಸಲು 1920ರವರೆಗೆ ಸಮಯ ಹಿಡಿಯಿತು. ಎಫ್​​​ ಸ್ಕಾಟ್ ಫಿಟ್ಜ್‌ಗೆರಾಲ್ಡ್ ತಮ್ಮ 'ದಿಸ್ ಸೈಡ್ ಆಫ್ ಪ್ಯಾರಡೈಸ್‌' ಕಾದಂಬರಿಯಲ್ಲಿ ಈ ಟೀ ಶರ್ಟ್ ಎಂಬ ಪದವನ್ನು ಬಳಸಿದರು. ಇವರು ಟೀ ಶರ್ಟ್ ಹೆಸರನ್ನು ಪ್ರಕಟಿಸಿದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಟೀ-ಶರ್ಟ್‌ಗಳು ಜನಪ್ರಿಯವಾಗಲು ಕಾರಣಗಳೇನು?

 • ಕಂಫರ್ಟ್ ಮುಖ್ಯ: ಟೀ-ಶರ್ಟ್‌ ಕಂಫರ್ಟೆಬಲ್​​ ಉಡುಪು. ಹತ್ತಿಯಿಂದ ಮಾಡಿದ, ಮೃದುವಾದ ಈ ಉಡುಗೆ ಧರಿಸುವುದು ಸುಲಭ ಮತ್ತು ಸರಳತೆಯ ಅನುಭವ ಕೊಡುತ್ತದೆ.
 • ಕೈಗೆಟುಕುವ ಬೆಲೆ: ಟೀ ಶರ್ಟ್‌ಗಳ ಜನಪ್ರಿಯತೆ ಹೆಚ್ಚಿಸಿದ ಪ್ರಮುಖ ಅಂಶವೆಂದರೆ ಅವುಗಳ ಬೆಲೆ. ಟೀ-ಶರ್ಟ್‌ಗಳ ಉತ್ಪಾದನೆ ಅಗ್ಗವಾಗಿದ್ದು, ಎಲ್ಲ ವರ್ಗದ ಜನರು ಖರೀದಿಸಬಹುದಾಗಿದೆ. ಹಾಗಾಗಿ ಪ್ರಪಂಚದಾದ್ಯಂತದ ವಾರ್ಡ್‌ರೋಬ್‌ಗಳಲ್ಲಿ ಟೀ-ಶರ್ಟ್‌ಗಳು ಪ್ರಧಾನವಾಗಿ ಜಾಗ ಗಿಟ್ಟಿಸಿಕೊಂಡಿದೆ.
 • ಹೊಂದಿಕೊಳ್ಳುವಿಕೆ: ಟೀ-ಶರ್ಟ್‌ ವಿವಿಧ ಸ್ಥಳ, ಸಮಾರಂಭಗಳಿಗೆ ಧರಿಸಬಹುದಾದ ಉಡುಗೆಯಾಗಿದೆ. ಎಂಥದ್ದೇ ಸನ್ನಿವೇಶಕ್ಕೂ ಮ್ಯಾಚ್ ಆಗುತ್ತದೆ. ಜೀನ್ಸ್‌ನೊಂದಿಗೆ ಟೀ-ಶರ್ಟ್​​ನ ಕ್ಯಾಶುವಲ್​ ಲುಕ್, ಬ್ಲೇಜರ್‌ನೊಂದಿಗೆ ಸ್ಟೈಲಿಶ್​ ಲುಕ್​​, ಮನೆಯಲ್ಲಿ ಆರಾಮದಾಯಕ ಉಡುಗೆ ಹೀಗೆ ವಿಭಿನ್ನ ಸಮಯಗಳಿಗೆ ಸಲೀಸಾಗಿ ಹೊಂದಿಕೊಳ್ಳುತ್ತದೆ.

ಹೀಗೆ ಟೀ-ಶರ್ಟ್‌ಗಳ ಜನಪ್ರಿಯತೆಯು ಅದರ ಕೈಗೆಟುಕುವ ಬೆಲೆ, ಬಹುಮುಖತೆ ಮತ್ತು ಬದಲಾಗುತ್ತಿರುವ ಫ್ಯಾಷನ್‌ನೊಂದಿಗೆ ಹೊಂದಿಕೊಳ್ಳುವುದು ಒಳಗೊಂಡಂತೆ ವಿವಿಧ ಅಂಶಗಳೊಂದಿಗೆ ಆಗಿದೆ ಎನ್ನಬಹುದು.

ಅಂತಾರಾಷ್ಟ್ರೀಯ ಟೀ-ಶರ್ಟ್ ದಿನದ ಕೆಲ ಸಂಗತಿಗಳು:

 • ಟೀ-ಶರ್ಟ್ ಮೊದಲು 1904ರಲ್ಲಿ ಜನಪ್ರಿಯವಾಯಿತು.
 • ಇದು ಕೂಪರ್ ಅಂಡರ್‌ವೇರ್ ಕಂಪನಿಯ ಮ್ಯಾಗಜೀನ್ ಜಾಹೀರಾತಿನಲ್ಲಿ ಮೊದಲು ಕಾಣಿಸಿಕೊಂಡಿತು.
 • ಈ ಜಾಹೀರಾತು ಇಬ್ಬರು ವ್ಯಕ್ತಿಗಳ ಪ್ರತ್ಯೇಕ ಫೋಟೋಗಳನ್ನೊಳಗೊಂಡಿತ್ತು. ಮೊದಲನೆಯ ಚಿತ್ರದ ವ್ಯಕ್ತಿ ಅನ್​​ ಕಂಫರ್ಟೆಬಲ್ ಆಗಿ ಕಾಣಿಸಿಕೊಂಡಿದ್ದು. ಎರಡನೆಯವನು ಆಧುನಿಕ ಟೀ ಶರ್ಟ್ ಧರಿಸಿ ಕಂಫರ್ಟೆಬಲ್​ ಆಗಿ ಕಾಣಿಸಿಕೊಂಡಿದ್ದ.
 • ಕೂಪರ್ ಅಂಡರ್‌ವೇರ್ ಕಂಪನಿಯು 'ದಿ ಬ್ಯಾಚುಲರ್ ಶರ್ಟ್' ಅನ್ನು ಮುನ್ನಲೆಗೆ ತಂದಿತು. 'ನೋ ಸೇಫ್ಟಿ ಪಿನ್ಸ್-ನೋ ನೀಡಲ್​​-ನೋ ಥ್ರೆಡ್-ನೋ ಬಟನ್ಸ್' ಎಂಬ ಘೋಷಣೆಯೊಂದಿಗೆ ಜಾಹೀರಾತು ನೀಡಿತ್ತು.
 • ಈ ಕಾನ್ಸೆಪ್ಟ್​​ ತ್ವರಿತವಾಗಿ ಎಲ್ಲರನ್ನೂ ಸೆಳೆಯಿತು. ಕೆಲ ಸಮಯದ ನಂತರ ಅಮೆರಿಕ ನೌಕಾಪಡೆಯು ತಮ್ಮ ನಾವಿಕರಿಗೆ ಬಟನ್‌ಗಳಿಲ್ಲದ ಒಳಶರ್ಟ್‌ಗಳನ್ನು ವಿತರಿಸಲು ಪ್ರಾರಂಭಿಸಿತು.
 • 19ನೇ ಶತಮಾನದಲ್ಲಿ ಕ್ರ್ಯೂ ನೆಕ್ ಶೈಲಿ ಹುಟ್ಟಿಕೊಂಡಿತು.
 • ಜಾಹೀರಾತಿನ ಮೂಲಕ ಕ್ರ್ಯೂ ನೆಕ್ ಶೈಲಿ ಜನರ ಚರ್ಚೆಯ ವಿಷಯವಾಯಿತು.
 • ನಂತರದ ವರ್ಷಗಳಲ್ಲಿ, ಈ ಶೈಲಿಯು ಸಾಕಷ್ಟು ಜನಪ್ರಿಯತೆ ಗಳಿಸಿತು. ಮೊದಲ ಬಾರಿಗೆ ಎಫ್​​​ ಸ್ಕಾಟ್ ಫಿಟ್ಜ್‌ಗೆರಾಲ್ಡ್ ತಮ್ಮ 'ದಿಸ್ ಸೈಡ್ ಆಫ್ ಪ್ಯಾರಡೈಸ್‌'ನಲ್ಲಿ ಟೀ-ಶರ್ಟ್ ಪದ ಬಳಸಿದರು.
 • 1951ರಲ್ಲಿ ನಟ ಮರ್ಲಾನ್ ಬ್ರ್ಯಾಂಡೋ 'ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್' ಚಿತ್ರದಲ್ಲಿ ಟೀ-ಶರ್ಟ್ ಧರಿಸುವ ಮೂಲಕ, ಹಿರಿತೆರೆಯಲ್ಲಿ ಮೊದಲ ಬಾರಿಗೆ ಟೀ-ಶರ್ಟ್ ಕಾಣಿಸಿಕೊಂಡಿತು.
 • 1950ರ ದಶಕದಲ್ಲಿ ಪ್ರಿಂಟೆಡ್ ಟಿ-ಶರ್ಟ್‌ಗಳು ಪ್ರಾರಂಭವಾದವು.
 • ಡಿಸ್ನಿಯು ಮಿಕ್ಕಿ ಮೌಸ್ ಮತ್ತು ಇತರ ಡಿಸ್ನಿ ಪಾತ್ರಗಳ ಚಿತ್ರಗಳನ್ನು ಟೀ-ಶರ್ಟ್‌ಗಳ ಮೇಲೆ ಮುದ್ರಿಸಲು ಪ್ರಾರಂಭಿಸಿತು.
 • 1960ರ ದಶಕದಲ್ಲಿ ಟೀ-ಶರ್ಟ್ ಹೆಚ್ಚು ಬಳಕೆಗೆ ಬಂತು. ಜನರು ತಮ್ಮ ಮೆಚ್ಚಿನ ರಾಕ್ ಬ್ಯಾಂಡ್‌ಗಳನ್ನು ಪ್ರದರ್ಶಿಸಲು ಇದು ವೇದಿಕೆಯಾಯಿತು.
 • ಆಲ್ಬಮ್ ಕವರ್‌ಗಳು ಟೀ-ಶರ್ಟ್‌ಗಳ ಮೇಲೆ ಮುದ್ರಿತವಾಯಿತು. ರಾಜಕೀಯ ಚಿತ್ರಗಳನ್ನು ಹಂಚಿಕೊಳ್ಳಲು ಸಹ ಇದು ದಾರಿಯಾಯಿತು.
 • ನಂತರದ ದಿನಗಳಲ್ಲಿ ಟೀ ಶರ್ಟ್ ಹೆಚ್ಚು ವರ್ಣರಂಜಿತವಾಯಿತು.

ಇದನ್ನೂ ಓದಿ: ಸುಂದರವಾಗಿ ಕಾಣಬೇಕಾ?, ಹಾಗಾದರೆ ರಾಗಿ ಸಂಗಟಿ ಕುಡಿಯಿರಿ, ನಿರೋಗಿಯಾಗಿ; ರಾಗಿಯಲ್ಲಿ ಏನೆಲ್ಲಾ ಔಷಧ ಗುಣಗಳಿವೆ ಗೊತ್ತಾ? - HEALTH BENEFITS OF EAT RAGI FOODS

ಕಾರ್ಮಿಕ ವೆಚ್ಚ, ಕಚ್ಛಾ ವಸ್ತಗಳ ವೆಚ್ಚ, ಮೂಲಸೌಕರ್ಯ ಮತ್ತು ನಿಯಮಗಳು ಸೇರಿದಂತೆ ವಿವಿಧ ಅಂಶಗಳು ಟೀ-ಶರ್ಟ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಕಾಂಬೋಡಿಯಾದಂತಹ ಏಷ್ಯಾದ ದೇಶಗಳು ಟೀ-ಶರ್ಟ್ ತಯಾರಿಕೆಗೆ ಜನಪ್ರಿಯ ಆಯ್ಕೆಗಳಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.