ETV Bharat / sports

IND vs AUS: ಕಾಂಗರೂ ಪಡೆಯ ವಿರುದ್ಧ ಶ್ರೇಯಸ್​, ಗಿಲ್ ಅಬ್ಬರದ ಶತಕ.. ವಿಶ್ವಕಪ್​ಗೂ ಮುನ್ನ ಭಾರತದ ಭರ್ಜರಿ ಬ್ಯಾಟಿಂಗ್​​

author img

By ETV Bharat Karnataka Team

Published : Sep 24, 2023, 4:59 PM IST

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ಶುಭಮನ್​ ಗಿಲ್​ ಶತಕವನ್ನು ದಾಖಲಿಸಿದ್ದಾರೆ. ಈ ಜೋಡಿ ಎರಡನೇ ವಿಕೆಟ್​ಗೆ 200 ರನ್​ನ ಜೊತೆಯಾಟ ಮಾಡಿದೆ.

India vs Australia 2 ODI Shreyas Iyer and Shubman Gill got hundred
India vs Australia 2 ODI Shreyas Iyer and Shubman Gill got hundred

ಇಂದೋರ್​ (ಮಧ್ಯಪ್ರದೇಶ): ವಿಶ್ವಕಪ್​ಗೂ ಮುನ್ನ ಭಾರತದ ಬ್ಯಾಟರ್​ಗಳು ತಂಡದ ಮೇಲೆ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗದು. ಶುಭಮನ್​ ಗಿಲ್​ ಮತ್ತು ಶ್ರೇಯಸ್​ ಅಯ್ಯರ್​ ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏದಕದಿನ ಪಂದ್ಯದಲ್ಲಿ ಶತಕವನ್ನು ಗಳಿಸಿ ಸಂಭ್ರಮಿಸಿದರು. ಶ್ರೇಯಸ್​ ಅಯ್ಯರ್​ ತಮ್ಮ ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದರೆ, ಶುಭಮನ್​ ಗಿಲ್​ 6ನೇ ಶತಕವನ್ನು ಗಳಿಸಿದರು.

ಅಯ್ಯರ್​ ಕಮ್​ಬ್ಯಾಕ್​: ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿದ ನಂತರ ಐಪಿಎಲ್​ನ್ನು ಸಹ ಮಿಸ್​​ ಮಾಡಿಕೊಂಡಿದ್ದರು. ವಿದೇಶಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್​ಸಿಎ) ಚೇತರಿಸಿಕೊಂಡರು. ಸಂಪೂರ್ಣ ಫಿಟ್​ ಆಗಿದ್ದ ಅಯ್ಯರ್​​ ಏಷ್ಯಾಕಪ್​ನಲ್ಲಿ ತಂಡಕ್ಕೆ ಮರಳಿದರು.

ಲಂಕಾದಲ್ಲಿ ಒಂದು ಪಂದ್ಯವನ್ನು ಆಡಿದ ಅಯ್ಯರ್​ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದರು. ನಂತರ ಏಷ್ಯಾಕಪ್​ನಲ್ಲಿ ಅವರಿಗೆ ಸಿಕ್ಕಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆದ ಅಯ್ಯರ್​ ಮೊದಲ ಪಂದ್ಯದಲ್ಲಿ 3 ರನ್​ ಗಳಿಸಿದ್ದಾಗ ರನ್​ ಔಟ್​ ಆಗಿ ಪೆವಿಲಿಯನ್​ಗೆ ಮರಳಿದ್ದರು.

ಇಂದಿನ ಇನ್ನಿಂಗ್ಸ್​ನಲ್ಲಿ ಅಯ್ಯರ್​ 86 ಬಾಲ್​ ಎದುರಿಸಿ ಶತಕವನ್ನು ಗಳಿಸಿದರು. ಶತಕದ ನಂತರ ರನ್​ನ ವೇಗ ಹೆಚ್ಚಿಸಲು ಹೋದ ಅಯ್ಯರ್​ ಅಬಾಟ್​ ಬೌಲಿಂಗ್​ನಲ್ಲಿ ವಿಕೆಟ್​ ಕೊಟ್ಟರು. ಇನ್ನಿಂಗ್ಸ್​ನಲ್ಲಿ ಅಯ್ಯರ್​ 90 ಬಾಲ್​ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸ್​ನಿಂದ 105 ರನ್​ ಗಳಿಸಿ ವಿಕೆಟ್​ ಕೊಟ್ಟರು.

6ನೇ ಶತಕ ಗಳಿಸಿದ ಗಿಲ್​: ಶುಭಮನ್​ ಗಿಲ್​ ತಮ್ಮ 6ನೇ ಏಕದಿನ ಶತವನ್ನುಮತ್ತು ಈ ವರ್ಷದ 5ನೇ ಏಕದಿನ ಶತಕವನ್ನು ಗಳಸಿದರು. ಈ ವರ್ಷ ಅವರು ಏಕದಿನ ಕ್ರಿಕೆಟ್​ನಲ್ಲಿ 1200 ರನ್ ಗಡಿ ದಾಟಿದ್ದಾರೆ. ಈ ವರ್ಷ ಗಿಲ್​ ಗೋಲ್ಡನ್​ ಫಾರ್ಮ್​ನಲ್ಲಿದ್ದಾರೆ. ಒಟ್ಟಾರೆ 39 ಅಂತಾರಾಷ್ಟ್ರೀಯ ಇನ್ನಿಂಗ್ಸ್​ನಲ್ಲಿ 7 ಶತಕ ಅವರ ಬ್ಯಾಟ್​​ನಿಂದ ಬಂದಿದೆ. ವಿರಾಟ್​, ಸಚಿನ್​ ರೋಹಿತ್ ರೀತಿ ವರ್ಷದಲ್ಲಿ 5 ಶತಕ ಗಳಿಸಿ ದಾಖಲೆ ಮಾಡಿದ್ದಾರೆ.

ಇನ್ನಿಂಗ್ಸ್​ನಲ್ಲಿ 92 ಬಾಲ್​ ಅಡಿದ ಗಿಲ್​ 6 ಬೌಂಡರಿ ಮತ್ತು 4 ಸಿಕ್ಸ್​ನ ಸಹಾಯದಿಂದ ಶತಕ ಗಳಿಸಿದರು. ಆದರೆ ಶತಕದ ನಂತರ ದೊಡ್ಡ ಹೊಡೆತಕ್ಕೆ ಮುಂದಾದ ಗಿಲ್​ ಟಾಪ್​ ಎಡ್ಜ್​ಗೆ ಬಲಿಯಾದರು. ಇನ್ನಿಂಗ್ಸ್​ ಅಂತ್ಯಕ್ಕೆ 97 ಬಾಲ್​ಗೆ 104 ರನ್​ ಗಳಿಸಿ ವಿಕೆಟ್​ ಕೊಟ್ಟಿದ್ದರು.

ಆಸ್ಟ್ರೇಲಿಯಾ ವಿರುದ್ಧ 4ನೇ ದೊಡ್ಡ ಜೊತೆಯಾಟ: ಆಸ್ಟ್ರೇಲಿಯಾ ವಿರುದ್ಧ ಅಯ್ಯರ್​ ಮತ್ತು ಗಿಲ್​ 200 ರನ್​ನ ಜೊತೆಯಾಟ ಮಾಡಿದರು. ಇದು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ದೊಡ್ಡ ಜೊತೆಯಾಟವಾಗಿದೆ. 2004 ರಲ್ಲಿ ಲಕ್ಷ್ಮಣ್​ ಮತ್ತು ಯುವಿ 213, 2016 ರಲ್ಲಿ ವಿರಾಟ್​ - ಶಿಖರ್​ 212 ಮತ್ತು 2016ರಲ್ಲೇ ವಿರಾಟ್​​ ರೋಹಿತ್​ 207 ರನ್​ನ ಜೊತೆಯಾಟ ಮಾಡಿದ್ದರು.​

ಇದನ್ನೂ ಓದಿ: Asian Games: ಉಜ್ಬೇಕಿಸ್ತಾನ ಮಣಿಸಿ ಹಾಕಿಯಲ್ಲಿ ಶುಭಾರಂಭ ಮಾಡಿದ ಭಾರತ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.