ETV Bharat / sports

Cricket World Cup: ಮೂರನೇ ಗೆಲುವಿಗಾಗಿ ಅಫ್ಘಾನ್ ​- ಶ್ರೀಲಂಕಾ ಮಧ್ಯೆ ಬಿಗ್​​ ಫೈಟ್​.. ಗೆದ್ದವರಿಗೆ ಸೆಮಿ ಕನಸು ಜೀವಂತ

author img

By ETV Bharat Karnataka Team

Published : Oct 30, 2023, 12:29 PM IST

ICC Cricket World Cup 2023  Today match between Afghanistan and Sri Lanka  match between Afghanistan and Sri Lanka in Pune  Afghanistan vs Sri Lanka 30th Match  Maharashtra Cricket Association Stadium Pune  Cricket World Cup  ಅಫ್ಘಾನ್​ ಶ್ರೀಲಂಕಾ ಮಧ್ಯೆ ಬಿಗ್​​ ಫೈಟ್  ಗೆದ್ದವರಿಗೆ ಸೆಮಿ ಕನಸು ಜೀವಂತ  ಮೂರನೇ ಗೆಲುವಿಗಾಗಿ ಕಾದಾಟ  ಉಭಯ ತಂಡಗಳು ಎರಡೆರಡು ಪಂದ್ಯಗಳಲ್ಲಿ ಗೆಲುವು  ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ  ಸತತ ಎರಡು ಗೆಲುವಿನೊಂದಿಗೆ ಪುಟಿದೇಳಿರುವ ಶ್ರೀಲಂಕಾ  ಡಬಲ್ ಆತ್ಮವಿಶ್ವಾಸದಲ್ಲಿರುವ ಲಂಕಾ  ಇಂಗ್ಲೆಂಡ್ ಹಾಗೂ ಪಾಕಿಸ್ತಾನಕ್ಕೆ ತಂಡಗಳಿಗೆ ಶಾಕ್​
ಮೂರನೇ ಗೆಲುವಿಗಾಗಿ ಅಫ್ಘಾನ್​-ಶ್ರೀಲಂಕಾ ಮಧ್ಯೆ ಬಿಗ್​​ ಫೈಟ್​

ಇಂದು ಅಫ್ಘಾನ್​ ಮತ್ತು ಶ್ರೀಲಂಕಾ ನಡುವೆ ಮೂರನೇ ಗೆಲುವಿಗಾಗಿ ಕಾದಾಟ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಎರಡೆರಡು ಪಂದ್ಯಗಳಲ್ಲಿ ಗೆಲುವು ಕಂಡಿವೆ. ಇಂದು ಮಧ್ಯಾಹ್ನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಹೋರಾಟ ನಡೆಸಲು ಉಭಯ ತಂಡಗಳು ಸಜ್ಜಾಗಿವೆ.

ಪುಣೆ, ಮಹಾರಾಷ್ಟ್ರ: ವಿಶ್ವಕಪ್​ನಲ್ಲಿ ಸತತ ಎರಡು ಗೆಲುವಿನೊಂದಿಗೆ ಪುಟಿದೇಳಿರುವ ಶ್ರೀಲಂಕಾ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಈ ತಂಡಗಳ ಸೆಮಿಸ್ ಅವಕಾಶಗಳು ಇನ್ನೂ ಜೀವಂತವಾಗಿವೆ.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಡಬಲ್ ಆತ್ಮವಿಶ್ವಾಸದಲ್ಲಿರುವ ಲಂಕಾ ಫೇವರಿಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದು ಚಿಕ್ಕ ತಂಡವೇ ಆಗಿದ್ದರೂ ಅಫ್ಘಾನಿಸ್ತಾನವನ್ನು ಕಡಿಮೆ ಅಂದಾಜು ಮಾಡುವುದು ತಪ್ಪಾಗುತ್ತದೆ. ಅಫ್ಘಾನಿಸ್ತಾನ ತಂಡ ಯಾವುದೇ ತಂಡವನ್ನು ಸೋಲಿಸಬಹುದು ಎಂದು ಈಗಾಗಲೇ ಸಾಬೀತುಪಡಿಸಿದೆ.

ಇನ್ನು ಅಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಹಾಗೂ ಪಾಕಿಸ್ತಾನಕ್ಕೆ ತಂಡಗಳಿಗೆ ಶಾಕ್​ ನೀಡಿರುವುದು ಗೊತ್ತೇ ಇದೆ. ಪ್ರಮುಖ ವೇಗದ ಬೌಲರ್ ಲಹಿರು ಕುಮಾರ ಗಾಯದ ಸಮಸ್ಯೆಯಿಂದ ಅಲಭ್ಯವಾಗಿರುವುದರಿಂದ ಲಂಕಾಗೆ ಹಿನ್ನಡೆಯಾಗಲಿದೆ. ಮಧ್ಯಾಹ್ನ 1.30ಕ್ಕೆ ಟಾಸ್​ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದ್ದು, ಈ ಪಿಚ್​ ಬ್ಯಾಟಿಂಗ್ ಸ್ನೇಹಿಯಾಗಿದೆ.

ಕುಮಾರ್ ಬದಲಿಗೆ ಚಮೀರಾಗೆ ಅವಕಾಶ: ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಸ್ಟಾರ್ ಆಲ್ ರೌಂಡರ್ ಹಸರಂಗ ಪಂದ್ಯಾವಳಿಗೂ ಮುನ್ನ ಹೊರ ಬಿದ್ದಿರುವ ಸಂಗತಿ ಗೊತ್ತೇ ಇದೆ. ಟೂರ್ನಮೆಂಟ್ ನಡೆಯುತ್ತಿರುವಾಗಲೇ ನಾಯಕ ಸನಕ ಮತ್ತು ವೇಗಿ ಪತಿರಾನ ಸಹ ಗಾಯದ ಸಮಸ್ಯೆಯಿಂದ ಈಗಾಗಲೇ ವಿಶ್ವಕಪ್​ನಿಂದ ಹೊರ ಬಿದ್ದಿದ್ದಾರೆ. ಈಗ ವೇಗಿ ಲಹಿರು ಕುಮಾರ ಸಹ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ವೇಗಿ ದುಷ್ಮಂತ ಚಮೀರಾ ಶ್ರೀಲಂಕಾ ತಂಡವನ್ನು ಸೇರಿಕೊಂಡಿದ್ದಾರೆ.

ಅಭ್ಯಾಸ ನಡೆಸುತ್ತಿದ್ದಾಗ ಲಹಿರು ಕುಮಾರ ಅವರ ಎಡತೊಡೆಗೆ ಗಾಯವಾಗಿತ್ತು. ಇಂದು ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅವರ ಅನುಪಸ್ಥಿತಿ ಲಂಕಾಗೆ ಹೊಡೆತ ನೀಡಲಿದೆ. ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಲಂಕಾ ಗೆಲುವಿನಲ್ಲಿ ಲಹಿರು ಕುಮಾರ್ (3/35) ಪ್ರಮುಖ ಪಾತ್ರ ವಹಿಸಿದರು. ಪತಿರಾನ ಬದಲಿಗೆ ಏಂಜೆಲೊ ಮ್ಯಾಥ್ಯೂಸ್ ಲಂಕಾ ತಂಡದಲ್ಲಿ ಸ್ಥಾನ ಪಡೆದಿರುವ ವಿಷಯ ಗೊತ್ತೇ ಇದೆ.

ಶ್ರೀಲಂಕಾ ಸಂಭಾವ್ಯ 11ರ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ನಾಯಕ ಮತ್ತು ವಿಕೆಟ್​ ಕೀಪರ್​ ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ.

ಅಫ್ಘಾನಿಸ್ತಾನ ಸಂಭಾವ್ಯ 11ರ ಬಳಗ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ನಾಯಕ ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜಾಯ್, ವಿಕೆಟ್​ ಕೀಪರ್​ ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ನವೀನ್ ಉಲ್ ಹಕ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್..

ಓದಿ: Cricket World Cup: ಗ್ಲೆನ್ ಮೆಕ್‌ಗ್ರಾತ್ ಹಿಂದಿಕ್ಕಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲೂ ತಮ್ಮ ಹೆಸರು ಬರೆದ ಹಿಟ್​ ಮ್ಯಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.