ETV Bharat / sports

T20 World cup: ಚುಟುಕು ಕ್ರಿಕೆಟ್​ ಟೂರ್ನಿಯ ವೇಳಾಪಟ್ಟಿ ಸೇರಿ ಮಹತ್ವದ ಮಾಹಿತಿ

author img

By

Published : Oct 17, 2022, 10:26 PM IST

ICC T20 World Cup: Everything you need to know
ICC T20 ವಿಶ್ವಕಪ್ : ಸೂಪರ್​ 12ಕ್ಕೆ ಹೇಗೆ ತಂಡಗಳು ಪ್ರವೇಶ ಪಡೆಯುತ್ತವೆ ?

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ​ಟ್ರೋಫಿಗಾಗಿ ಸೆಣೆಸಲಿದೆ. ಅರ್ಹತಾ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್​ 12ಕ್ಕೆ ಸೇರಲಿದೆ. ಎ ಮತ್ತು ಬಿ ಗುಂಪಿನಲ್ಲಿ 8 ತಂಡಗಳು ಸೂಪರ್​ 12ಗಾಗಿ ಸೆಣಸುತ್ತಿದೆ.

ಹೈದರಾಬಾದ್ : ಟಿ20 ಫೇವರೇಟ್​ ಕ್ಯಾಪ್ಟನ್​ ಆಗಿರುವ ರೋಹಿತ್​ ಶರ್ಮಾ ವಿಶ್ವಕಪ್​ ಗೆಲ್ಲುತ್ತಾರಾ ಎಂಬುದು ಮಿಲಿಯಂನ್​ ಡಾಲರ್​ ಪ್ರಶ್ನೆಯಲ್ಲಿ ಒಂದು. ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡ ನ್ಯೂನತೆ ಮೆಟ್ಟಿನಿಂತು ಎರಡನೇ ಬಾರಿ ಕಪ್ ​ಗೆಲ್ಲುವ ಹಂಬಲದಲ್ಲಿದೆ. ಐಪಿಎಲ್​ನ ಯಶಸ್ವಿ ನಾಯಕ ರೋಹಿತ್ ಇತ್ತೀಚೆಗೆ​ ಏಷ್ಯಾಕಪ್​ ಗೆಲ್ಲುವಲ್ಲಿ ವೈಫಲ್ಯ ಕಂಡರೂ ವಿಶ್ವಕಪ್​ ಮೇಲೆ ಭರವಸೆ ಹೆಚ್ಚಿದೆ.

ಟಿ20 ವಿಶ್ವಕಪ್​ ಆರಂಭವಾದ ವರ್ಷದಲ್ಲಿ ಧೋನಿ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಪ್ರಶಸ್ತಿ​ ಮುಡಿಗೇರಿಸಿಕೊಂಡಿತ್ತು. ನಂತರ 2014ರಲ್ಲಿ ಶ್ರೀಲಂಕಾ ಎದುರು ಸೋಲುಂಡು ರನ್ನರ್​ ಅಪ್​ ಪ್ರಶಸ್ತಿಗೆ ಭಾಜನವಾಯಿತು. 2016ರ ನಂತರ ಕೋವಿಡ್​ ಕಾರಣ 2019ರಲ್ಲಿ ನಡೆಯಬೇಕಿದ ವಿಶ್ವಕಪ್​ 2021ರಲ್ಲಿ ತಟಸ್ಥ ಸ್ಥಳ ಯುಎಇಯಲ್ಲಿ ನಡೆಯಿತು.

ಭಾರತ ತಂಡಕ್ಕೆ ಗಾಯದ ಸಮಸ್ಯೆ: ಇತ್ತೀಚೆಗೆ ಆಸ್ಟ್ರೇಲಿಯಾದ ಎದುರು ಪಂದ್ಯ ಆಡುವ ಮುನ್ನ ರವೀಂದ್ರ ಜಡೇಜ ಮೊಣಕಾಲು ಗಾಯಕ್ಕೆ ಒಳಗಾದರು. ಬೌಲಿಂಗ್​, ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅವರು ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದ ಹೊರಗುಳಿದರು. ನಂತರ ಇಂಡಿಯನ್​ ಟೀಂನ ಟ್ರಂಪ್​ ಕಾರ್ಡ್​ ಬೌಲರ್​ ಜಸ್ಪ್ರೀತ್ ಬುಮ್ರಾ ಕೂಡ ಬೆನ್ನು ನೋವಿನಿಂದ ತಂಡದಿಂದ ಹೊರಗುಳಿಯಬೇಕಾಯಿತು. ದಕ್ಷಿಣ ಆಫ್ರಿಕಾ ಸರಣಿಯಿಂದ ದಿಪಕ್​ ಚಹರ್​ ಗಾಯದ ಸಮಸ್ಯೆ ಎದುರಿಸಿ ಹೊರಗುಳಿದರು.

ಮೂವರೂ ಆಟಗಾರರು ಭಾರತ ವಿಶ್ವಕಪ್​ ತಂಡದ ಭರವಸೆಯ ಆಟಗಾರರಾಗಿದ್ದರು. ಆಲ್​ರೌಂಡರ್​ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯಗೆ ಬಲವಾಗಿ ಜಡೇಜ ಅವರಿಗೆ ಸ್ಥಾನ ಲಭಿಸುವ ಸಾಧ್ಯತೆ ಇತ್ತು. ಬುಮ್ರಾ ತಂಡಕ್ಕೆ ಆಯ್ಕೆ ಆದ ನಂತರ ಗಾಯಕ್ಕೆ ಒಳಗಾದರು. ಅವರ ಸ್ಥಾನವನ್ನು ಮೀಸಲು ಆಟಗಾರ ದೀಪಕ್​ ಚಹರ್​ ತುಂಬಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆಸ್ಟ್ರೇಲಿಯಾದ ಎದುರಿನ ಎರಡನೇ ಟಿ20 ನಂತರ ಗಾಯದ ಸಮಸ್ಯೆ ಚಹರ್​ಗೂ ಕಾಡಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್​ ಸಿಂಗ್. ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.

ಒಂದು ತಿಂಗಳ ಕಾಲ ನಡೆಯುವ ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆರಂಭವಾಗಿದೆ. ನವೆಂಬರ್ 13ರಂದು ಫೈನಲ್ ಪಂದ್ಯಗಳು ನಡೆಯಲಿವೆ.

ತಂಡಗಳು, ಗುಂಪುಗಳು, ಸ್ವರೂಪ: ಪ್ರಸಕ್ತ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಅಗ್ರ ಎಂಟು ತಂಡಗಳು ಈಗಾಗಲೇ ಅರ್ಹತೆ ಪಡೆದಿದ್ದು, ಉಳಿದ ನಾಲ್ಕು ತಂಡಗಳು ಅರ್ಹತಾ ಸುತ್ತಿನ ಮೂಲಕ ಅವಕಾಶ ಪಡೆದುಕೊಳ್ಳಲಿವೆ. ಎ ಮತ್ತು ಬಿ ಗುಂಪಿನ ಎಂಟು ತಂಡಗಳಲ್ಲಿ ವಿನ್ನರ್​ ಮತ್ತು ರನ್ನರ್​ ಅಪ್​ ಆದವರಿಗೆ ಗುಂಪಿಗೆ ಏರುವ ಅವಕಾಶ ಲಭಿಸುತ್ತದೆ. ಅರ್ಹತಾ ಸುತ್ತಿನಲ್ಲಿ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ.

ICC ವಿಶ್ವ T20ನಲ್ಲಿ ಒಟ್ಟು ತಂಡಗಳ ಸಂಖ್ಯೆ: ಶ್ರೀಲಂಕಾ, ನಮೀಬಿಯಾ, ಯುಎಇ, ವೆಸ್ಟ್ ಇಂಡೀಸ್, ನೆದರ್ಲ್ಯಾಂಡ್ಸ್, ಐರ್ಲೆಂಡ್, ಜಿಂಬಾಬ್ವೆ, ಸ್ಕಾಟ್ಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ಥಾನ ಮತ್ತು ಆಸ್ಟ್ರೇಲಿಯಾ.

ಸೂಪರ್ 12 ಗುಂಪು: 1ನೇ ಗುಂಪು : ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗುಂಪು ಎ ವಿಜೇತ ಮತ್ತು ಗುಂಪು B ರನ್ನರ್ ಅಪ್​

2ನೇ ಗುಂಪು : ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಗ್ರೂಪ್ ಬಿ ವಿಜೇತ ಮತ್ತು ಗ್ರೂಪ್ ಎ ರನ್ನರ್ ಅಪ್

ಅರ್ಹತಾ ಸುತ್ತಿನಲ್ಲಿ ಆಡುವ ತಂಡಗಳ ಪಟ್ಟಿ:

ಗುಂಪು ಎ : ಶ್ರೀಲಂಕಾ, ನಮೀಬಿಯಾ, ಯುಎಇ ಮತ್ತು ನೆದರ್ಲ್ಯಾಂಡ್ಸ್

ಗುಂಪು ಬಿ : ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಐರ್ಲೆಂಡ್

ಅರ್ಹತಾ ತಂಡದ ವೇಳಾಪಟ್ಟಿ:

ದಿನಾಂಕ ಪಂದ್ಯತಂಡಗಳುಸ್ಥಳಸಮಯ
16/10/20221ಶ್ರೀಲಂಕಾ vs ನಮೀಬಿಯಾಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ9:30 AM
2ಯುಎಇ vs ನೆದರ್ಲ್ಯಾಂಡ್ಸ್ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ1:30 PM
17/10/20223ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌9:30 AM
4ಜಿಂಬಾಬ್ವೆ vs ಐರ್ಲೆಂಡ್ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌1:30 PM
18/10/20225ನಮೀಬಿಯಾ vs ನೆದರ್‌ಲ್ಯಾಂಡ್ಸ್ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ9:30 AM
6ಶ್ರೀಲಂಕಾ vs ಯುಎಇಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ1:30 PM
19/10/20227ಸ್ಕಾಟ್ಲೆಂಡ್ vs ಐರ್ಲೆಂಡ್ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌9:30 AM
8ವೆಸ್ಟ್ ಇಂಡೀಸ್ vs ಜಿಂಬಾಬ್ವೆಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌1:30 PM
20/10/20229ಶ್ರೀಲಂಕಾ vs ನೆದರ್ಲ್ಯಾಂಡ್ಸ್ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ9:30 AM
10ನಮೀಬಿಯಾ vs ಯುಎಇಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ1:30 PM
21/10/202211ವೆಸ್ಟ್ ಇಂಡೀಸ್ vs ಐರ್ಲೆಂಡ್ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌9:30 AM
12ಸ್ಕಾಟ್ಲೆಂಡ್ vs ಜಿಂಬಾಬ್ವೆಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌1:30 PM

ಸ್ಥಳಗಳು: ಒಟ್ಟು 45 ಪಂದ್ಯಗಳು ನಡೆಯಲಿವೆ. 7 ಸ್ಥಳಗಳಲ್ಲಿ ಅಂದರೆ ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೋಬರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಆಯೋಜನೆಗೊಂಡಿವೆ.

ಸೆಮಿಫೈನಲ್‌ಗಳು ಎಸ್‌ಸಿಜಿ (ಸಿಡ್ನಿ ಕ್ರಿಕೆಟ್ ಗ್ರೌಂಡ್) ನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 13ರಂದು ಐಕಾನಿಕ್ ಎಂಸಿಜಿ (ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್) ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : ಕೊಹ್ಲಿ ಅದ್ಭುತ ಕ್ಯಾಚ್​.. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.