ETV Bharat / sports

ಅವಕಾಶದ ಕೊರತೆ, ಯುಎಸ್​ ತಂಡಕ್ಕೆ ಆಡಲು ಸಜ್ಜಾದ್ರ ಭಾರತಕ್ಕೆ U19 ವಿಶ್ವಕಪ್ ತಂದುಕೊಟ್ಟ ನಾಯಕ!

author img

By

Published : May 9, 2021, 6:46 PM IST

Updated : May 10, 2021, 3:27 PM IST

ಉನ್ಮುಕ್ತ್ ಚಾಂದ್
ಉನ್ಮುಕ್ತ್ ಚಾಂದ್

30-40 ವಿದೇಶಿ ಆಟಗಾರರು ಇತ್ತೀಚೆಗೆ ಅಮೆರಿಕಾಗೆ ಬಂದಿದ್ದಾರೆ. ಅದರಲ್ಲಿ ಉನ್ಮುಕ್ತ್ ಚಾಂದ್, ಸ್ಮಿತ್ ಪಟೇಲ್ ಮತ್ತು ಹರ್ಮಿತ್ ಸಿಂಗ್ ಸೇರಿದಂತೆ ಭಾರತದ ಮಾಜಿ ಅಂಡರ್​ 19 ಆಟಗಾರರು ಸೇರಿದ್ದಾರೆ ಎಂದು ಅಸ್ಲಾಮ್ ಪಾಕ್​ಪ್ಯಾಷನ್​ ಎಂಬ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ..

ಮುಂಬೈ : 2012ರ ವಿಶ್ವಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಾಂದ್​ ಸೇರಿದಂತೆ ಹಲವು ಭಾರತೀಯ ಕ್ರಿಕೆಟಿಗರು ಮತ್ತು 100ಕ್ಕೂ ಹೆಚ್ಚು ಪಾಕಿಸ್ತಾನದ ಕ್ರಿಕೆಟಿಗರು ಭವಿಷ್ಯದಲ್ಲಿ ಅಮೆರಿಕಾ ತಂಡದಲ್ಲಿ ವೃತ್ತಿ ಜೀವನ ಕಂಡುಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಸಮಿ ಅಸ್ಲಾಮ್ ತಿಳಿಸಿದ್ದಾರೆ.

25 ವರ್ಷದ ಸಮಿ ಅಸ್ಲಾಮ್ ತಮ್ಮ ಕಡೆಗಣಿಸಿದ ಕಾರಣಕ್ಕೆ ಪಾಕಿಸ್ತಾನ ತಂಡಕ್ಕೆ ರಾಜೀನಾಮೆ ನೀಡಿ ಯುಎಸ್​ಎಗೆ ತೆರಳಿದ್ದಾರೆ. ಅವರು ಪಾಕಿಸ್ತಾನದ ಪರ 13 ಟೆಸ್ಟ್​ ಪಂದ್ಯಗಳನ್ನಾಡಿದ್ದರು.

ಇದೀಗ ಅದೇ ದಾರಿಯಲ್ಲಿ ಭಾರತ, ಪಾಕಿಸ್ಥಾನ ಮತ್ತು ದಕ್ಷಿಣ ಆಫ್ರಿಕಾದ ಕೆಲವು ಪ್ರಥಮ ದರ್ಜೆ ಆಡಿದ ಅನುಭವವುಳ್ಳ ಕ್ರಿಕೆಟಿಗರೂ ಕೂಡ ತಮ್ಮ ದಾರಿಯನ್ನೇ ಹಿಡಿದಿದ್ದಾರೆ ಎಂದು ಅಸ್ಲಾಮ್ ತಿಳಿಸಿದ್ದಾರೆ.

30-40 ವಿದೇಶಿ ಆಟಗಾರರು ಇತ್ತೀಚೆಗೆ ಅಮೆರಿಕಾಗೆ ಬಂದಿದ್ದಾರೆ. ಅದರಲ್ಲಿ ಉನ್ಮುಕ್ತ್ ಚಾಂದ್, ಸ್ಮಿತ್ ಪಟೇಲ್ ಮತ್ತು ಹರ್ಮಿತ್ ಸಿಂಗ್ ಸೇರಿದಂತೆ ಭಾರತದ ಮಾಜಿ ಅಂಡರ್​ 19 ಆಟಗಾರರು ಸೇರಿದ್ದಾರೆ ಎಂದು ಅಸ್ಲಾಮ್ ಪಾಕ್​ಪ್ಯಾಷನ್​ ಎಂಬ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಕ್ರಿಕೆಟಿಗರು, ನ್ಯೂಜಿಲ್ಯಾಂಡ್​ನ ಮಾಜಿ ಆಲ್​ರೌಂಡರ್​ ಕೋರೆ ಆ್ಯಂಡರ್ಸನ್ ಕೂಡ ಇಲ್ಲಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪಾಕಿಸ್ತಾನ ಕ್ರಿಕೆಟಿಗರಿಂದಲೂ ನಾನು ಕರೆಗಳನ್ನು ಸ್ವೀಕರಿಸಿದ್ದೇನೆ ಎಂದು ಅಸ್ಲಾಮ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ, ಪೃಥ್ವಿ ಶಾ, ಶುಬ್ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅಂಡರ್ 19 ವಿಶ್ವಕಪ್ ಗೆಲ್ಲುತ್ತಿದ್ದಂತೆ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದರು. ಆದರೆ, ಉನ್ಮುಖ್ ಚಾಂದ್​ಗೆ ಆ ಅದೃಷ್ಟ ದೊರೆಯಲಿಲ್ಲ.

ಜೊತೆಗೆ ಅವರ ಫಾರ್ಮ್​ ಕೂಡ ಕೈ ಹಿಡಿಯಲಿಲ್ಲ. ಐಪಿಎಲ್​ನಲ್ಲಿ ಅವಕಾಶ ಪಡೆದರೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದೀಗ 28 ವರ್ಷದ ಚಾಂದ್ ಕ್ರಿಕೆಟ್ ಶಿಸು ಅಮೆರಿಕಾ ಪರ ಹೊಸ ಇನ್ನಿಂಗ್ಸ್​ ಆರಂಭಿಸಲು ಮುಂದಾಗಿದ್ದಾರೆ. ಮುಂಬೈ ರಣಜಿ ತಂಡದಲ್ಲಿ ಆಡಿದ್ದ ಸೌರಭ್ ನೇತ್ರಾವಾಲ್ಕರ್ ಪ್ರಸ್ತುತ ಯುಎಸ್​ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ.

ಆದರೆ ಚಾಂದ್​ ಅಮೆರಿಕಾಕ್ಕೆ ತೆರಳಿರುವುದರ ಬಗ್ಗೆಯಾಗಿರಲಿ ಅಥವಾ ಯುಎಸ್​ಎ ತಂಡ ಅಥವಾ ಲೀಗ್​ಗಳಲ್ಲಿ ಭಾಗವಹಿಸುವ ವಿಚಾರದಲ್ಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಏಕೆಂದರೆ ಬೇರೆ ದೇಶ ಅಥವಾ ಲೀಗ್​ಗಳಲ್ಲಿ ಆಡಬೇಕೆಂದರೆ ಮೊದಲು ಬಿಸಿಸಿಐನಿಂದ ಎನ್​ಒಸಿ ಪಡೆಯಬೇಕಿರುತ್ತದೆ.

ಇದನ್ನು ಓದಿ:ಕೊಹ್ಲಿ ಸದಾ ನಮ್ಮ ಜೊತೆ ಬಾಲ್ಯದ ಗೆಳೆಯನಂತೆ ವರ್ತಿಸುತ್ತಾರೆ : ಮೊಹಮ್ಮದ್ ಶಮಿ

Last Updated :May 10, 2021, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.