ETV Bharat / sports

ನಾಯಕಿ ಹರ್ಮನ್​ಪ್ರೀತ್​ ಕೌರ್​ ಭರ್ಜರಿ ಶತಕ.. ಇಂಗ್ಲೆಂಡ್​ಗೆ ದಾಖಲೆಯ 334 ರನ್​ ಗುರಿ

author img

By

Published : Sep 21, 2022, 11:03 PM IST

england-women-vs-india-women-2nd-odi
ನಾಯಕಿ ಹರ್ಮನ್​ಪ್ರೀತ್​ ಕೌರ್​ ಭರ್ಜರಿ ಶತಕ

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ರ ಭರ್ಜರಿ ಶತಕ ಮತ್ತು ಹರ್ಲಿನ್​ ಡಿಯೋಲ್ಸ್​ರ ಚೊಚ್ಚಲ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ದಾಖಲೆಯ 5 ವಿಕೆಟ್​ ನಷ್ಟಕ್ಕೆ 333 ರನ್​ ಗಳಿಸಿದೆ.

ಕ್ಯಾಂಟರ್​ಬರಿ, ಇಂಗ್ಲೆಂಡ್​: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ರ ಭರ್ಜರಿ ಶತಕ ಮತ್ತು ಹರ್ಲಿನ್​ ಡಿಯೋಲ್ಸ್​ರ ಚೊಚ್ಚಲ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ದಾಖಲೆಯ 5 ವಿಕೆಟ್​ ನಷ್ಟಕ್ಕೆ 333 ರನ್​ ಗಳಿಸಿದೆ.

ಟಾಸ್​ ಸೋತರೂ ಮೊದಲು ಬ್ಯಾಟ್​ ಮಾಡಿದ ಹರ್ಮನ್​ಪ್ರೀತ್​ ಕೌರ್​ ಪಡೆ ಆರಂಭದಲ್ಲಿ ಶೆಫಾಲಿ ವರ್ಮಾರ ವಿಕೆಟ್​ ಬೇಗನೇ ಕಳೆದುಕೊಂಡಿತು. ಬಳಿಕ ಸ್ಮೃತಿ ಮಂಧಾನಾ 40, ಯಾಸ್ತಿಕಾ ಬಾಟಿಯಾ 26 ರನ್​ ಗಳಿಸಿ, 54 ರನ್​ಗಳ ಜೊತೆಯಾಟ ಕಟ್ಟಿದರು.

ನಾಯಕಿ ಕೌರ್​ ಗರಿಷ್ಠ ವೈಯಕ್ತಿಕ ರನ್​: ಯಾಸ್ತಿಕಾ ಭಾಟಿಯಾ ಔಟಾದ ಬಳಿಕ ಕ್ರೀಸ್​ಗೆ ಬಂದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಭರ್ಜರಿ ಬ್ಯಾಟ್​ ಬೀಸಿದರು. 111 ಎಸೆತಗಳಲ್ಲಿ 143 ಬಾರಿಸಿದ ಕೌರ್​ ಇಂಗ್ಲಿಷ್​ ಮಹಿಳೆಯರ ಬೆವರಿಳಿಸಿದರು. ಇವರ ಇನಿಂಗ್ಸ್​ನಲ್ಲಿ 18 ಬೌಂಡರಿಗಳಿದ್ದರೆ, 4 ಭರ್ಜರಿ ಸಿಕ್ಸರ್​ಗಳಿದ್ದವು. ಭಾರತ ತಂಡದ ನಾಯಕಿ ಕೌರ್​ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೂಡ ಇದಾಗಿದೆ.

ಕೌರ್​ಗೆ ಉತ್ತಮ ಸಾಥ್​ ನೀಡಿದ ಹರ್ಲಿನ್​ ಡಿಯೋಲ್​ 58 ರನ್​ ಗಳಿಸಿದರು. ಇದು ಏಕದಿನದಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ. ಲಾರೆನ್​ ಬೆಲ್ಲಾಗೆ ಹರ್ಲಿನ್​ ವಿಕೆಟ್​ ಒಪ್ಪಿಸಿದ ಬಳಿಕ ಬಿರುಸಾಗಿ ಬ್ಯಾಟ್​ ಬೀಸಿದ ಪೂಜಾ ವಸ್ತ್ರಕಾರ್​ 18, ದೀಪ್ತಿ ಶರ್ಮಾ 15 ರನ್​ ಗಳಿಸಿದರು.

ಇಂಗ್ಲೆಂಡ್​ ವಿರುದ್ಧ ಅತ್ಯಧಿಕ ಸ್ಕೋರ್​: ನಾಯಕಿ ಹರ್ಮನ್​ಪ್ರೀತ್​ ಕೌರ್​ರ ಔಟಾಗದೇ 143 ರನ್​ಗಳ ನೆರವಿನಿಂದ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 333 ರನ್​ ಗಳಿಸಿತು. ಇದು ಆಂಗ್ಲ ಮಹಿಳೆಯರ ವಿರುದ್ಧ ದಾಖಲೆಯ ಅತ್ಯಧಿಕ ರನ್​ ಆಗಿದೆ.

ಇನ್ನು ಭಾರತದ ಬೃಹತ್​ ಮೊತ್ತ ಬೆನ್ನತ್ತಿರುವ ಇಂಗ್ಲೆಂಡ್​ ಮಹಿಳೆಯರು 15 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 97 ರನ್​ ಗಳಿಸಿದ್ದಾರೆ. ಟಾಮಿ ಬ್ಯೂಮಾಂಟ್ 6, ಎಮ್ಮಾ ಲಾಂಬಾ 15, ಸೋಪಿಯಾ ಡಂಕ್ಲಿ 1 ರನ್​ಗೆ ಪೆವಿಲಿಯನ್​ ಸೇರಿದರು. ಆಲೀಸಾ ಕ್ಯಾಪ್ಸಿ 38ಮ ಡ್ಯಾನೈಲ್ಲಿ ವ್ಯಾಟ್​ 39 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌- ಭಾರತ 333/5 (ಹರ್ಮನ್‌ಪ್ರೀತ್ ಕೌರ್ 143*, ಹರ್ಲೀನ್ ಡಿಯೋಲ್ 58; ಷಾರ್ಲೆಟ್ ಡೀನ್ 1/39).

ಓದಿ: ಮಿಥಾಲಿ ರಾಜ್​ ದಾಖಲೆ ಉಡೀಸ್​, ವಿರಾಟ್​ ಕೊಹ್ಲಿ ಸಾಲಿಗೆ ಸ್ಮೃತಿ ಮಂಧಾನಾ..ಏನದು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.