ETV Bharat / sports

ಪಿಂಕ್​ ಬಾಲ್​ ಉತ್ತಮವಾಗಿ ಸ್ವಿಂಗ್ ಆದರೆ ನಮ್ಮ ತಂಡಕ್ಕೆ ವರವಾಗಲಿದೆ: ಮಾರ್ಕ್ ವುಡ್

author img

By

Published : Feb 20, 2021, 9:24 AM IST

Mark Wood
ಮಾರ್ಕ್ ವುಡ್

ಫೆಬ್ರವರಿ 24 ರಿಂದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಅಹಿರ್ನಿಶಿ(ಹಗಲು-ರಾತ್ರಿ) ಟೆಸ್ಟ್ ಪಂದ್ಯ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲ ಸಾಧಿಸಿವೆ.

ಅಹಮದಾಬಾದ್: ಜೇಮ್ಸ್ ಆಂಡರ್ಸನ್‌ ಇಂಗ್ಲೆಂಡ್​ ತಂಡದ ಒಬ್ಬ ಅತ್ಯುತ್ತಮ ಸ್ವಿಂಗ್ ಬೌಲರ್​. ಭಾರತದ ವಿರುದ್ಧ ಮೂರನೇ ಡೇ/ನೈಟ್​​ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್​​ನಲ್ಲಿ ಉತ್ತಮ ಸ್ವಿಂಗ್​ ಮಾಡಬಹುದು ಎಂದು ಇಂಗ್ಲೆಂಡ್​ ತಂಡದ ಫಾಸ್ಟ್ ಬೌಲರ್ ಮಾರ್ಕ್ ವುಡ್ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 24 ರಿಂದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಅಹಿರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲ ಸಾಧಿಸಿವೆ.

"ಪಿಂಕ್​ ಬಾಲ್​ ಉತ್ತಮವಾಗಿ ಸ್ವಿಂಗ್​ ಆಗುತ್ತದೆ, ಹಾಗಾಗಿ ಇದು ನಮ್ಮ ತಂಡಕ್ಕೆ ವರವಾಗಲಿದೆ. ನಮ್ಮ ತಂಡದಲ್ಲಿ ಇಬ್ಬರು ಉತ್ತಮ ಸ್ವಿಂಗ್​ ಬೌಲರ್​ಗಳಿದ್ದಾರೆ (ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್) ಇದರಿಂದ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು ಎಂದರು.

" ನಾವು ಬೌಲಿಂಗ್​ ಮಾಡಿದಾಗ ಚೆಂಡು ಸ್ವಿಂಗ್​ ಆದಂತೆ ಚಲಿಸಿದರೆ, ಅದು ಸ್ವಿಂಗ್​ ಬೌಲರ್​ಗಳಿಗೆ ಸ್ನೇಹಿಯಾಗಲಿದೆ. ಇದು ಬೌಲರ್​ಗಳ ವಿಶ್ವಾಸವನ್ನ ಹೆಚ್ಚಿಸುತ್ತದೆ ಎಂದು ವುಡ್ ಹೇಳಿದರು.

ಜಾನಿ ಬೈರ್ಸ್ಟೋವ್ ಜೊತೆಗೆ, ಮಾರ್ಕ್ ವುಡ್ ಮೂರನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ.

ಓದಿ : ಶ್ರೀಲಂಕಾ ಕ್ರಿಕೆಟ್​ ತಂಡದ ಬೌಲಿಂಗ್​ ಕೋಚ್​ ಆಗಿ ಚಮಿಂದಾ​ ವಾಸ್​​​

ಎರಡು ಕೋಟಿ ರೂ. ಮೂಲಬೆಲೆಯೊಂದಿದ್ದ ಮಾರ್ಕ್​ವುಡ್​ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ವುಡ್​ ತಮ್ಮ ಕುಟುಂಬದ ಜೊತೆ ಮನೆಯಲ್ಲಿ ಸಮಯ ಕಳೆಯಲು ಬಯಸಿದ್ದು, ಐಪಿಎಲ್​ನಿಂದ ಹೊರಗುಳಿಯಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಈ ಬಾರಿಯ ಹರಾಜು ಪಟ್ಟಿಯಲ್ಲಿ ಗರಿಷ್ಠ ಮೂಲಬೆಲೆ(2 ಕೋಟಿ) ಪಡೆದಿರುವ 8 ಆಟಗಾರರ ಪಟ್ಟಿಯಲ್ಲಿ ವುಡ್ ಕೂಡ ಒಬ್ಬರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.