ETV Bharat / sports

ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್.. ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಂಗ್ಲರು..

author img

By

Published : Feb 5, 2021, 9:09 AM IST

Updated : Feb 5, 2021, 9:49 AM IST

ನಾಯಕ ಜೋ ರೂಟ್​​ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಅಂದ್ರೇ ರೂಟ್​ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದು, ಕೂಡ ಭಾರತದ ಎದುರೇ.. ಈಗ ನೂರನೇ ಪಂದ್ಯವನ್ನೂ ಟೀಂ ಇಂಡಿಯಾ ಎದುರೇ ಆಡುತ್ತಿದ್ದಾರೆ..

India and England first Test match
ಭಾರತ ಮತ್ತು ಇಂಗ್ಲೆಂಡ್​ ಮೊದಲ ಟೆಸ್ಟ್

ಹೈದರಾಬಾದ್ : ಭಾರತ ಮತ್ತು ಇಂಗ್ಲೆಂಡ್​ ಮೊದಲ ಟೆಸ್ಟ್ ಪಂದ್ಯ ಎಂ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿದೆ. ಟಾಸ್​​ ಗೆದ್ದ ರೂಟ್​​ ನೇತೃತ್ವದ ಆಂಗ್ಲ​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ.

  • We win the toss and will bat first! 🦁🦁🦁#INDvENG

    — England Cricket (@englandcricket) February 5, 2021 " class="align-text-top noRightClick twitterSection" data=" ">

ಕೋವಿಡ್​-19ನಿಂದಾಗಿ ಒಂದು ವರ್ಷ ಸುದೀರ್ಘ ವಿರಾಮದ ನಂತರ ಭಾರತದಲ್ಲಿ ಆಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೊದಲ ಸರಣಿ ಇದಾಗಿದೆ. ಹಾಗಾಗಿ, ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಸರಣಿ ಎಲ್ಲಾ ಸರಣಿಗಿಂತಲೂ ದೊಡ್ಡದಾಗಿರಲಿದೆ ಅಂತಾ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಹೀಗಾಗಿ, ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ​ ಮತ್ತು ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ನೇತೃತ್ವದ ತಂಡಗಳ ನಡುವೆ ರೋಚಕತೆ ಸೃಷ್ಟಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಂತರ ಮತ್ತೊಂದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಈಚೆಗೆಷ್ಟೇ ಲಂಕಾದ ಎದುರು ಅದ್ಭುತ ಪ್ರದರ್ಶನ ತೋರಿ 2-0 ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್​ ವಿರುದ್ಧ ಇಂದು ತಮ್ಮ ಹೋರಾಟ ಆರಂಭಿಸಲಿದೆ.

ಇತ್ತ ನಾಯಕ ಜೋ ರೂಟ್​​ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಅಂದ್ರೇ ರೂಟ್​ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದು, ಕೂಡ ಭಾರತದ ಎದುರೇ.. ಈಗ ನೂರನೇ ಪಂದ್ಯವನ್ನೂ ಟೀಂ ಇಂಡಿಯಾ ಎದುರೇ ಆಡುತ್ತಿದ್ದಾರೆ.

ಓದಿ : ಯಾರಿಗೆ ಡಬ್ಲ್ಯೂಟಿಸಿ ಫೈನಲ್​​​ ಟಿಕೆಟ್​? ತವರಿನಲ್ಲಿ ಸೋಲಿಲ್ಲದ ಸರದಾರನಿಗೆ ಆಂಗ್ಲರು ಹಾಕ್ತಾರಾ ಬ್ರೇಕ್​​?

ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ರಿಷಬ್ ಪಂತ್ (ಕೀಪರ್​​), ರವಿಚಂದ್ರನ್ ಅಶ್ವಿನ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಶಹಬಾಜ್ ನದೀಮ್.

ಇಂಗ್ಲೆಂಡ್: ಜೋ ರೂಟ್ (ನಾಯಕ), ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಪೋಪ್, ಡಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್​​), ಜೋಫ್ರಾ ಆರ್ಚರ್, ಜೇಮ್ಸ್ ಆ್ಯಂಡರ್​​ಸನ್, ಡೊಮಿನಿಕ್ ಬೆಸ್, ಜ್ಯಾಕ್ ಲೀಚ್.

Last Updated : Feb 5, 2021, 9:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.