ETV Bharat / sports

265 ಕೋಟಿ ಪ್ಯಾಕೇಜ್​ನಲ್ಲಿ 821 ಆಯ್ಕೆ: ಫುಟ್ಬಾಲ್​​ ಬಿಟ್ಟು ಕ್ರಿಕೆಟ್​ಗೆ ಜೈ ಅಂದ ಬಾರ್ಸಿಲೋನಾ ಜನತೆ

author img

By

Published : May 27, 2021, 8:18 PM IST

ಕ್ರಿಕೆಟ್ ಮೈದಾನ​ ಬೇಕೆಂದ ಯುವತಿಯರು
ಕ್ರಿಕೆಟ್ ಮೈದಾನ​ ಬೇಕೆಂದ ಯುವತಿಯರು

30ಮಿಲಿಯನ್ ಯೂರೋ(265 ಕೋಟಿ ರೂ) ಪ್ಯಾಕೇಜ್​​ನಲ್ಲಿ ಹೊಸದಾದ ವಿಶೇಷ ಯೋಜನೆಯನ್ನು ಮತಗಳ ಮೂಲಕ ಆಯ್ಕೆ ಮಾಡುವ ಅವಕಾಶವನ್ನು ನಗರಾಡಳಿತ ಅಲ್ಲಿ ನಾಗರಿಕರಿಗೆ ಸೂಚಿಸಿತ್ತು. ಬಹುಪಾಲು ಮಂದಿ ಕ್ರಿಕೆಟ್ ಮೈದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬಾರ್ಸಿಲೋನಾ: ಸ್ಪ್ಯಾನಿಷ್​​​ ಫುಟ್ಬಾಲ್​ ಕೇಂದ್ರ ಹಾಗೂ ಲಿಯೋನೆಲ್ ಮೆಸ್ಸಿ ಆಡುವ ಬಾರ್ಸಿಲೋನಾ ಎಫ್​ಸಿಯ ತವರಿನ ನಿವಾಸಿಗಳು ಇತರ ಮನರಂಜನಾ ಸೌಲಭ್ಯಗಳಿಗಿಂತ ಕ್ರಿಕೆಟ್ ಮೈದಾನಕ್ಕೆ ಹೆಚ್ಚು ಮತ ಚಲಾಯಿಸುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ.

30ಮಿಲಿಯನ್ ಯೂರೋ (265 ಕೋಟಿ ರೂ)ಪ್ಯಾಕೇಜ್​​ನಲ್ಲಿ ಹೊಸದಾದ ವಿಶೇಷ ಯೋಜನೆಯನ್ನು ಮತಗಳ ಮೂಲಕ ಆಯ್ಕೆ ಮಾಡುವ ಅವಕಾಶವನ್ನು ನಗರಾಡಳಿತ ಅಲ್ಲಿನ ನಾಗರಿಕರಿಗೆ ಸೂಚಿಸಿತ್ತು. ಸೈಕಲ್ ಲೇನ್​ ಹಾಗೂ ಇತರ ಆಟದ ಮೈದಾನ ಸೇರಿದಂತೆ ಒಟ್ಟು 821 ಯೋಜನೆಗಳನ್ನು ಆಯ್ಕೆಯಲ್ಲಿ ನೀಡಲಾಗಿತ್ತು. ಆದರೆ, ಅಲ್ಲಿನ ಹೆಚ್ಚು ಮಂದಿ ನಮಗೆ ಕ್ರಿಕೆಟ್ ಮೈದಾನ ಬೇಕೆಂದು ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಯುವತಿಯರ ಗುಂಪಿನ ನೇತೃತ್ವದಲ್ಲಿ ಈ ಅಭಿಯಾನ ನಡೆದಿದ್ದರಿಂದ ಕ್ರಿಕೆಟ್ ಮೈದಾನಕ್ಕೆ ಹೆಚ್ಚಿನ ಮತಗಳು ದೊರೆತಿವೆ ಎಂದು ನಗರಾಡಳಿತ ತಿಳಿಸಿದೆ.

"ಈ ಯೋಜನೆಯ ಹಿಂದಿರುವವರೆಲ್ಲರೂ ಹುಡುಗಿಯರು. ತರಬೇತಿಯು ಮಹಿಳೆಯರಾಗಿ ಸಬಲೀಕರಣಗೊಳ್ಳಲು ನಮಗೆ ಸುರಕ್ಷಿತ ಸ್ಥಳವನ್ನು ನೀಡುತ್ತದೆ ಮತ್ತು ಅಲ್ಲಿ ನಾವು ನಮ್ಮ ಕೌಶಲ್ಯಗಳನ್ನು ಮುಕ್ತವಾಗಿ ಬೆಳೆಸಿಕೊಳ್ಳಬಹುದು. ಅಲ್ಲದೇ ಕ್ಯಾಟಲನ್ ವುಮೆನ್ಸ್​ ಕ್ರಿಕೆಟ್​ ತಂಡವನ್ನು ಕಟ್ಟುವುದು ನಮ್ಮ ಉದ್ದೇಶ " ಮೈದಾನಕ್ಕೆ ಬೇಡಿಕೆ ಇಟ್ಟಿರುವ ಯುವತಿಯರ ಗುಂಪು ತಿಳಿಸಿದೆ.

ಪಾಕಿಸ್ತಾನ ಮತ್ತು ಭಾರತದಿಂದ ವಲಸೆ ಹೋಗಿರುವ ಕುಟುಂಬಗಳಿಗೆ ಸೇರಿದ ಹುಡುಗಿಯರು ಕ್ರಿಕೆಟ್​ ಬಗ್ಗೆ ಸ್ವಲ್ಪ ಜ್ಞಾನ ಹೊಂದಿದ್ದರಿಂದ ಕ್ರಿಕೆಟ್​ ಕ್ಲಬ್​ನಲ್ಲಿ ಸೇರಿದ್ದಾರೆ.

" ಪ್ರಸ್ತುತ ಇಂಡೋರ್​ ಮೈದಾನದಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಕ್ರಿಕೆಟ್​ಗೆ ಸೂಕ್ತವಾದ ಮೈದಾನವಿಲ್ಲ. ಬಿಡುವಿನ ವೇಳೆ ಬೇಸ್​ಬಾಲ್ ಮೈದಾನದಲ್ಲಿ ಆಡುತ್ತೇವೆ. ಇದೀಗ ಬೇಸ್​ಬಾಲ್​ ಸೀಸನ್​ , ನಮಗೆ ಆಡಲು ಸ್ಥಳವಿಲ್ಲ. ನಾವು 11 ಸದಸ್ಯರ ವ್ಯವಸ್ಥಿತ ಕ್ರಿಕೆಟ್​ ಆಡಲು ಬಯಸುತ್ತೇವೆ. ಟೆನಿಸ್​ ಚೆಂಡಿನ ಬದಲಾಗಿ ಕ್ರಿಕೆಟ್ ಆಡುವ ಹಾರ್ಡ್​ ಬಾಲ್​ನಲ್ಲಿ. ಅದಕ್ಕಾಗಿ ನಮಗೆ ಸರಿಯಾದ ಕ್ರಿಕೆಟ್ ಪಿಚ್ ಅಗತ್ಯವಿದೆ" ಎಂದು ಗುಂಪಿನ ಹಿರಿಯ ಸದಸ್ಯೆ ಹಿಫ್ಸಾ ಬಟ್​ ಹೇಳಿದ್ದಾರೆ.

ಇದನ್ನು ಓದಿ:ಟೆಸ್ಟ್​ ಚಾಂಪಿಯನ್​ಶಿಪ್ 3 ಪಂದ್ಯಗಳ ಫೈನಲ್ ಆಗಿದ್ದರೆ ಸೂಕ್ತವಾಗಿರುತ್ತಿತ್ತು: ಕಪಿಲ್ ದೇವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.