ETV Bharat / sports

13 ವರ್ಷದ ಹಿಂದೆ​ ಮೆಕಲಮ್​ ದಾಖಲಿಸಿದ್ರು ಸ್ಫೋಟಕ ಶತಕ... ಅದೇ ಕೆಕೆಆರ್​ನ ಕೊನೆಯ ಶತಕವೂ ಹೌದು

author img

By

Published : Apr 18, 2020, 4:32 PM IST

2008ರಲ್ಲಿ ಕೆಕೆಆರ್ ಪರ​ ಮೆಕಲಮ್​ ದಾಖಲಿಸಿದ್ರು ಸ್ಪೋಟಕ ಶತಕ
ಕೆಕೆಆರ್​ನ ಕೊನೆಯ ಶತಕ

2008ರಲ್ಲಿ ಆರಂಭವಾಗಿದ್ದ ಚೊಚ್ಚಲ ಲೀಗ್​ನ ಮೊದಲ ಪಂದ್ಯದಲ್ಲೇ ಕೆಕೆಆರ್ ಹಾಗೂ ಆರ್​ಸಿಬಿ ತಂಡಗಳು ಮುಖಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್​ ಸೋತರು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್​ ತಂಡ ಬ್ರೆಂಡನ್​​ ಮೆಕಲಮ್​ (158) ಅವರ ಸ್ಫೋಟಕ ಶತಕದ ನೆರವಿನಿಂದ 222 ರನ್​ ಕಲೆ ಹಾಕಿತ್ತು.

ಮುಂಬೈ: ಟಿ-20 ವಿಶ್ವದ ಶ್ರೀಮಂತ ಕ್ರಿಕೆಟ್​​ ಲೀಗ್​ ಆದ ಐಪಿಎಲ್​ನ ಮೊದಲ ಆವೃತ್ತಿಯ ಮೊದಲ ಪಂದ್ಯದಲ್ಲೇ ಕೆಕೆಆರ್​ ತಂಡದ ಬ್ರೆಂಡನ್ ಮೆಕಲಮ್​ ಆರ್​ಸಿಬಿ ವಿರುದ್ಧ ಸ್ಫೋಟಕ ಶತಕ ದಾಖಲಿಸಿ ಅಬ್ಬರಿಸಿದ್ದರು.

2008ರಲ್ಲಿ ಆರಂಭವಾಗಿದ್ದ ಚೊಚ್ಚಲ ಲೀಗ್​ನ ಮೊದಲ ಪಂದ್ಯದಲ್ಲೇ ಕೆಕೆಆರ್ ಹಾಗೂ ಆರ್​ಸಿಬಿ ತಂಡಗಳು ಮುಖಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್​ ಸೋತರು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್​ ತಂಡ ಬ್ರೆಂಡನ್​​ ಮೆಕಲಮ್​ (158) ಅವರ ಸ್ಫೋಟಕ ಶತಕದ ನೆರವಿನಿಂದ 222 ರನ್​ ಕಲೆಯಾಕಿತ್ತು.

ಸ್ಫೋಟಕ ಶತಕ ದಾಖಲಿಸಿದ್ದ ಮೆಕಲಮ್​ 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್​ ಸಹಿತ 158 ರನ್​ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ್ದರು.

222 ರ ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್​ ಪರ ಕೊಹ್ಲಿ (1) ,ದ್ರಾವಿಡ್​(2), ಜಾಫರ್​(6), ಜಾಕ್​ ಕಾಲೀಸ್​(8),ಕ್ಯಾಮರೋನ್ ವೈಟ್​(6) ಮಾರ್ಕ್​ ಬೌಷರ್​(7)ಅವರ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 82 ರನ್​ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ​ 140 ರನ್​ಗಳ ಅಂತರದಿಂದ ಹೀನಾಯ ಸೋಲು ಕಂಡಿತ್ತು.

ಕೆಕೆಆರ್​ ತಂಡದ ಪರ ಆರಂಭಿಕ ಪಂದ್ಯದಲ್ಲಿ ಶತಕ ದಾಖಲಾದರೂ ಇದುವರೆಗೂ 12 ಐಪಿಎಲ್​ ನಡೆದಿದ್ದು, ಇನ್ನು ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಐಪಿಎಲ್​ನಲ್ಲಿ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ ಎಂಬುದು ವಿಪರಾಸ್ಯವೂ ಹೌದಲ್ವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.