ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ಬ್ರೆಂಡನ್​ ಮೆಕಲಂ ಗುಡ್​ಬೈ

author img

By

Published : Aug 6, 2019, 8:36 AM IST

ಬ್ರೆಂಡನ್​ ಮೆಕಲಂ

ನ್ಯೂಜಿಲೆಂಡ್​​ನ​ ಮಾಜಿ ಸ್ಫೋಟಕ ಬ್ಯಾಟ್ಸ್​​​ಮನ್​ ಬ್ರೆಂಡನ್​ ಮೆಕಲಂ ಗ್ಲೋಬಲ್​​ ಟಿ-20 ಕೆನಡಾ​ ಟೂರ್ನಿಯ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮೆಕಲಂರ 20 ವರ್ಷಗಳ ವೃತ್ತಿ ಬದುಕಿಗೆ ತೆರೆ ಬೀಳಲಿದೆ.

ಹೈದರಾಬಾದ್​: ನ್ಯೂಜಿಲೆಂಡ್​​ನ​ ಮಾಜಿ ಸ್ಫೋಟಕ ಬ್ಯಾಟ್ಸ್​​​ಮನ್​ ಬ್ರೆಂಡನ್​ ಮೆಕಲಂ ಕ್ರಿಕೆಟ್​ಗೆ ಗುಡ್​ಬೈ ಹೇಳಲು ಮುಂದಾಗಿದ್ದಾರೆ. ಮೆಕಲಂ ಇನ್ನು ಮುಂದೆ ಯಾವುದೇ ಟಿ-20 ಲೀಗ್​ಗಳಲ್ಲೂ ಕೂಡ ಆಡುವುದಿಲ್ಲವಂತೆ.

ಸದ್ಯ ನಡೆಯುತ್ತಿರುವ ಗ್ಲೋಬಲ್​​ ಟಿ-20 ಕೆನಡಾ ಟೂರ್ನಿಯ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮೆಕಲಂರ 20 ವರ್ಷಗಳ ವೃತ್ತಿ ಬದುಕಿಗೆ ತೆರೆ ಬೀಳಲಿದೆ. 2016ರಲ್ಲೇ ಟೆಸ್ಟ್​ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ನಿವೃತ್ತಿ ಹೇಳಿದ್ದ ನ್ಯೂಜಿಲೆಂಡ್​ ಮಾಜಿ ನಾಯಕ ಕೆಲ ಟಿ-20 ಲೀಗ್​​ಗಳಲ್ಲಿ ಮಾತ್ರ ಆಡುತ್ತಿದ್ದರು.

ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿದ್ದ ಮೆಕಲಂ 2004ರಿಂದ ನ್ಯೂಜಿಲೆಂಡ್ ಪರ 101 ಟೆಸ್ಟ್, 260 ಏಕದಿನ ಮತ್ತು 71 ಟಿ-20 ಪಂದ್ಯಗಳನ್ನು ಆಡಿದ್ದರು. 20 ವರ್ಷಗಳ ಕ್ರಿಕೆಟ್​​ ಬದುಕಿನಲ್ಲಿ ತುಂಬಾ ಸಾಧನೆ ಮಾಡಿರುವ ಹೆಮ್ಮೆಯಿದೆ. ಇತ್ತೀಚೆಗೆ ಪ್ರದರ್ಶನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾಗುತ್ತಿತ್ತು ಎಂದು ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇನ್ನು 2008ರಲ್ಲಿ ಚೊಚ್ಚಲ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲೇ ಕೋಲ್ಕತ್ತಾ ಪರ ಆಡಿದ್ದ ಮೆಕಲಂ ಆರ್​ಸಿಬಿ ವಿರುದ್ಧ 13 ಸಿಕ್ಸರ್​ ಸಹಿತ 156 ರನ್​ ಸಿಡಿಸಿ ಕ್ರಿಕೆಟ್​ ಜಗತ್ತಿನ ಗಮನ ಸೆಳೆದಿದ್ದರು. ಬಳಿಕ ಅನೇಕ ಲೀಗ್​​ಗಳಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್​ ಮೂಲಕ ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸಿದ್ದಾರೆ.

Intro:Body:

New Zealand superstar Brendon McCullum announces retirement from cricket


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.