ETV Bharat / sports

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಟೀಂ​ ಇಂಡಿಯಾ ಬಾಗಿಲು ತೆರೆಯುತ್ತೆ - ಕರುಣ್​ ನಾಯರ್​

author img

By

Published : Sep 7, 2020, 6:02 PM IST

ಕರುಣ್​ ನಾಯರ್
ಕರುಣ್​ ನಾಯರ್

ಕರುಣ್​ ನಾಯರ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 48ರ ಹಾಗೂ 5 ಟೆಸ್ಟ್​ ಪಂದ್ಯಗಳಿಂದ 62 ಸರಾಸರಿ ಹೊಂದಿದ್ದರೂ ಭಾರತ ತಂಡದಲ್ಲಿ ಅವಕಾಶ ಪಡೆಯಲಾಗುತ್ತಿಲ್ಲ. 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಅವಕಾಶ ಪಡೆದರಾದ್ರೂ ಆಡುವ 11ರ ಬಳಗದಲ್ಲಿ ಕಾಣಿಸಿಲ್ಲ..

ದುಬೈ: ವಿರೇಂದ್ರ ಸೆಹ್ವಾಗ್​ ನಂತರ ಟೆಸ್ಟ್​ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿರುವ ಭಾರತ ತಂಡದ ಏಕೈಕ ಆಟಗಾರ ಕರ್ನಾಟಕದ ಕರುಣ್ ನಾಯರ್​ ಭಾರತ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ತ್ರಿಶತಕ ದಾಖಲಿಸಿದ್ದರು. ಆದರೆ, 2017ರಿಂದ ಅವರು ಭಾರತ ತಂಡದ ಪರ ಯಾವುದೇ ಕ್ರಿಕೆಟ್​ ಪಂದ್ಯವನ್ನಾಡಿಲ್ಲ. 2020ರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಟೀಮ್​ ಇಂಡಿಯಾಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರುಣ್​ ನಾಯರ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 48ರ ಹಾಗೂ 5 ಟೆಸ್ಟ್​ ಪಂದ್ಯಗಳಿಂದ 62 ಸರಾಸರಿ ಹೊಂದಿದ್ದರೂ ಭಾರತ ತಂಡದಲ್ಲಿ ಅವಕಾಶ ಪಡೆಯಲಾಗುತ್ತಿಲ್ಲ. 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಅವಕಾಶ ಪಡೆದರಾದ್ರೂ ಆಡುವ 11ರ ಬಳಗದಲ್ಲಿ ಕಾಣಿಸಿಲ್ಲ. ಇದೀಗ ಕನ್ನಡಿಗ ಕೆ ಎಲ್​ ರಾಹುಲ್​ ನೇತೃತ್ವದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿ ಆಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಕಳೆದ ವರ್ಷ ಕೇವಲ ಒಂದೇ ಪಂದ್ಯವನ್ನಾಡಿದ್ದರು.

"ಭಾರತದ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಐಪಿಎಲ್‌ ಅತ್ಯುತ್ತಮ ವೇದಿಕೆ. ನನಗೆ ಈ ಬಾರಿ ಯಾವುದೇ ಅವಕಾಶ ಸಿಕ್ಕರೂ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸುತ್ತೇನೆ. ನಾನು ಸ್ಥಿರ ಪ್ರದರ್ಶನದಲ್ಲಿ ತೋರಿದರೆ ಖಂಡಿತ ಅವಕಾಶ ಬರುತ್ತದೆ. ಹಾಗಾಗಿ, ಒಂದೇ ಒಂದು ಪಂದ್ಯ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದೇನೆ " ಎಂದು ಕರುಣ್‌ ನಾಯರ್‌ ತಿಳಿಸಿದ್ದಾರೆ. ಅನಿಲ್​ ಕುಂಬ್ಳೆ ಕೋಚ್​ ಆಗಿದ್ದ ಸಂದರ್ಭದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕರುಣ್​, ಮತ್ತೆ ಅವರೇ ಕೋಚ್​ ಆಗಿರುವ ಪಂಜಾಬ್​ ತಂಡದಲ್ಲಿ ಆಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ನಮ್ಮ ಜೊತೆಯಲ್ಲಿ ಅವರು(ಅನಿಲ್​ ಕುಂಬ್ಳೆ) ಇರುವುದು ಖುಷಿ ತಂದಿದೆ. ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ಅವರೇ ಕೋಚ್​ ಆಗಿದ್ದರು. ಆ ಸಂದರ್ಭದಲ್ಲಿ ನಾನು ಉತ್ತಮ ಪ್ರದರ್ಶನ ತೋರಲು ಸಫಲನಾಗಿದ್ದೇನೆ. ಹಾಗಾಗಿ, ನಾನು ಧನಾತ್ಮಕವಾಗಿ ಮಾತನಾಡಲು ಅದು ಕಾರಣವಿದೆ. ಇದೊಂದು ಹೊಸ ವರ್ಷ ಮತ್ತು ಹೊಸ ಆವೃತ್ತಿ ನಮ್ಮ ಮುಂದಿದೆ. ಇದಕ್ಕೆ ಪೂರ್ವ ತಯಾರಿ ಬಹಳ ಮುಖ್ಯವಾಗಿದೆ. ಯಾಕೆಂದರೆ, ನಾವು ದೀರ್ಘಾವಧಿ ವಿಶ್ರಾಂತಿ ಬಳಿಕ ಕ್ರಿಕೆಟ್​ಗೆ ಮರಳಿದ್ದೇವೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.