ETV Bharat / sports

ಬೈರ್ಸ್ಟೋವ್​ ಶತಕದ ಬಲ: ಆಸೀಸ್​ಗೆ 303 ರನ್​ಗಳ ಟಾರ್ಗೆಟ್​​ ನೀಡಿದ ಇಂಗ್ಲೆಂಡ್​

author img

By

Published : Sep 16, 2020, 9:39 PM IST

Eng vs Aus 3rd ODI
ಬೈರ್ಸ್ಟೋವ್​ ಶತಕ

ಸರಣಿ ನಿರ್ಣಾಯಕ ಪಂದ್ಯಲ್ಲಿ ಬೈರ್ಸ್ಟೋವ್​ 112, ಬಿಲ್ಲಿಂಗ್ಸ್​ 57 ಹಾಗೂ ಕ್ರಿಸ್​ ವೋಕ್ಸ್​ ಅವರ 53 ರನ್​ಗಳ ನೆರವಿನಿಂದ ಅತಿಥೇಯ ಇಂಗ್ಲೆಂಡ್​ 50 ಓವರ್​ಗಳಲ್ಲಿ 302 ರನ್​ ದಾಖಲಿಸಿದೆ.

ಮ್ಯಾಂಚೆಸ್ಟರ್: ಸರಣಿ ನಿರ್ಣಾಯಕವಾದ ಪಂದ್ಯದಲ್ಲಿ ಮಿದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್​ ತಂಡ ಆರಂಭಿಕ ಬ್ಯಾಟ್ಸ್​ಮನ್​ ಜಾನಿ ಬೈಸ್ಟೋವ್(112)​ ಅವರ ಭರ್ಜರಿ ಶತಕದ ನೆರವಿನಿಂದ 302 ರನ್​ಗಳ ಬೃಹತ್ ಮೊತ್ತ ಪೇರಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಖಾತೆ ತೆರೆಯುವ ಮುನ್ನವೇ ಸ್ಟಾರ್ಕ್​ ಎಸೆದ ಮೊದಲ ಓವರ್​ನ ಮೊದಲೆರಡು ಎಸೆತಗಳಲ್ಲಿ ಜೇಸನ್ ರಾಯ್​ ಹಾಗೂ ಜೋರ ರೂಟ್​ ಶೂನ್ಯಕ್ಕೆ ಔಟಾದರು.

ಈ ವೇಳೆ 3ನೇ ವಿಕೆಟ್​ಗೆ ಜೊತೆಯಾದ ಬೈರ್ಸ್ಟೋವ್​ ಹಾಗೂ ಮಾರ್ಗನ್​ 67 ರನ್​ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಆ್ಯಡಂ ಜಂಪಾ ಓವರ್​ನಲ್ಲಿ ಮಾರ್ಗನ್​(23) ಸ್ಟಾರ್ಕ್​ಗೆ ಕ್ಯಾಚ್​ ನೀಡಿ ಔಟಾದರು. ನಂತರದ ಬಂದ ಬಟ್ಲರ್​ ಕೂಡ ಜಂಪಾ ಓವರ್​ನಲ್ಲಿಯೇ 8 ರನ್​ಗಳಿಸಿ ಔಟಾದರು.

ತಂಡದ ಮೊತ್ತ 96ಕ್ಕೆ 4 ಸಂಕಷ್ಟದಲ್ಲಿದ್ದಾಗ ಬೈರ್ಸ್ಟೋವ್​ ಜೊತೆ ಸೇರಿದ ಮೊದಲ ಪಂದ್ಯದ ಶತಕ ವೀರ ಸ್ಯಾಮ್​ ಬಿಲ್ಲಿಂಗ್ಸ್​ 5ನೇ ವಿಕೆಟ್​ ಜೊತೆಯಾಟದಲ್ಲಿ 114 ರನ್​ ಸೇರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ತಂದರು. 58 ಎಸೆತಗಳನ್ನು ಎದರುಸಿದ ಬಿಲ್ಲಿಂಗ್ಸ್​ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 57 ರನ್​ಗಳಿಸಿ ಜಂಪಾಗೆ 3 ಬಲಿಯಾದರು. ಬಿಲ್ಲಿಂಗ್ಸ್​ ಔಟಾದ ಬೆನ್ನಲ್ಲೇ 126 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 112 ರನ್​ಗಳಿಸಿದ್ದ ಬೈರ್ಸ್ಟೋವ್​ ಕೂಡ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಬೌಲ್ಡ್​ ಆಗುವ ಮೂಲಕ ತಮ್ಮ ಅದ್ಭುತ ಇನ್ನಿಂಗ್ಸ್​ ಮುಗಿಸಿದರು.

ಆದರೆ ಇನ್ನಿಂಗ್ಸ್​ನ ಕೊನೆಯ ಓವರ್​ಗಳಲ್ಲಿ ಅಬ್ಬರಿಸಿದ ಕ್ರಿಸ್ ವೋಕ್ಸ್​ 39 ಎಸೆತಗಳಲ್ಲಿ 53 ರನ್​ ಪೇರಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿ ಔಟಾಗದೆ ಉಳಿದರು. ಟಾಮ್ ಕರ್ರನ್​ 19 ಹಾಗೂ ರಶೀದ್​ 11 ರನ್​ಗಳಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್​ ಒಟ್ಟಾರೆ 50 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 302 ರನ್​ಗಳಿಸಿತು.

ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 3 , ಮಿಚೆಲ್​ ಸ್ಟಾರ್ಕ್​ ಹಾಗೂ ಪ್ಯಾಟ್​ ಕಮ್ಮಿನ್ಸ್​ ಒಂದು ವಿಕೆಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.