ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್ ಪಡೆಯುವ ಅಭಿಲಾಷೆ ವ್ಯಕ್ತಪಡಿಸಿದ ಜೇಮ್ಸ್​ ಆ್ಯಂಡರ್ಸನ್​

author img

By

Published : Aug 26, 2020, 2:07 PM IST

ಪಂದ್ಯ ಡ್ರಾ ಆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೇಮ್ಸ್​ ಆ್ಯಂಡರ್ಸನ್,​ ತಾವು ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ ಪಡೆಯುವ ಆಸೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಜೇಮ್ಸ್​ ಆ್ಯಂಡರ್ಸನ್​
ಜೇಮ್ಸ್​ ಆ್ಯಂಡರ್ಸನ್​

ಸೌತಾಂಪ್ಟನ್​: ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಪಡೆದ ವಿಶ್ವದಾಖಲೆ ಬರೆದ ಬೆನ್ನಲ್ಲೇ ಜೇಮ್ಸ್​ ಆ್ಯಂಡರ್ಸನ್​ ದೀರ್ಘಾವಧಿಯ ಕ್ರಿಕೆಟ್​ನಲ್ಲಿ 700 ವಿಕೆಟ್​ ಪಡೆಯುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಅಂತ್ಯಗೊಂಡ ಪಾಕಿಸ್ತಾನದ ವಿರುದ್ಧದ ಕೊನೆಯ ಟೆಸ್ಟ್​ನ ಅಂತಿಮ ದಿನ ಪಾಕ್ ನಾಯಕ ಅಜರ್​ ಅಲಿ ವಿಕೆಟ್​ ಪಡೆಯುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ಗಳ ಮೈಲಿಗಲ್ಲನ್ನು ದಾಟಿದ ಮೊದಲ ವೇಗದ ಬೌಲರ್​ ಎಂಬ ದಾಖಲೆಗೆ ಆ್ಯಂಡರ್ಸನ್​ ಪಾತ್ರರಾದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬೌಲರ್​ ಎನಿಸಿಕೊಂಡರು. ಇವರಿಗೂ ಮೊದಲು ಶ್ರೀಲಂಕಾದ ಮುತ್ತಯ್ಯ ಮುರಳೀದರನ್​(800), ಆಸ್ಟ್ರೇಲಿಯಾದ ಶೇನ್ ವಾರ್ನ್​(708) ಹಾಗೂ ಭಾರತದ ಅನಿಲ್ ಕುಂಬ್ಳೆ(619) ವಿಕೆಟ್ ಪಡೆದಿದ್ದಾರೆ.

ಜೇಮ್ಸ್​ ಆ್ಯಂಡರ್ಸನ್​
ಜೇಮ್ಸ್​ ಆ್ಯಂಡರ್ಸನ್​

ಪಂದ್ಯ ಡ್ರಾ ಆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೇಮ್ಸ್​ ಆ್ಯಂಡರ್ಸನ್​, ತಾವು ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ ಪಡೆಯುವ ಆಸೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ನಾನು ಈಗಾಗಲೇ ಈ ಕುರಿತು ಜೋ ರೂಟ್​ ಜೊತೆ ಸಣ್ಣ ಮಾತುಕತೆ ನಡೆಸಿದ್ದೇನೆ. ಅವರು ನನ್ನನ್ನು ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​ ಸರಣಿಯಲ್ಲಿ ಇಂಗ್ಲೆಂಡ್​ ತಂಡದಲ್ಲಿ ಇರಲು ಬಯಸಿದ್ದಾರೆ. ನನ್ನ ಕೈಯಲ್ಲಿ ಆಗುವುದಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ. ನನ್ನ ಎಲ್ಲಾ ಸಮಯದಲ್ಲೂ ಫಿಟ್​ನೆಸ್​ಗಾಗಿ ಕಠಿಣವಾಗಿರುತ್ತೇನೆ. ಆಟದಲ್ಲೂ ಹೆಚ್ಚು ಶ್ರಮಿಸುತ್ತಿದ್ದೇನೆ ಎಂದು ಆ್ಯಂಡರ್ಸನ್​ ಹೇಳಿದ್ದಾರೆ.

ನಾನು ಈ ಸಮ್ಮರ್​ನಲ್ಲಿ ಇಷ್ಟಪಟ್ಟಂತೆ ಬೌಲಿಂಗ್​ ಮಾಡಲಿಲ್ಲ. ಆದರೆ ಈ ಟೆಸ್ಟ್​ನಲ್ಲಿ ನನ್ನ ಆಶಯದ ಮೇಲೆ ಇದ್ದೆ ಮತ್ತು ತಂಡ ಬಯಸಿದ್ದನ್ನು ನಾನು ನೀಡಿದ್ದೇನೆ ಎಂದು ಭಾವಿಸುತ್ತೇನೆ. ಅದೇ ರೀತಿ ಭಾವಿಸುತ್ತಾ ಮುಂದುವರೆಯುತ್ತೇನೆ. ಇಂಗ್ಲೆಂಡ್​ ಕ್ರಿಕೆಟಿಗನಾಗಿ ನನ್ನ ಕೊನೆಯ ಟೆಸ್ಟ್​ ಪಂದ್ಯಗಳನ್ನು ಗೆದ್ದಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಹಾಗಾಗಿ ನಾನು 700 ವಿಕೆಟ್​ ತಲುಪಬಹುದಲ್ಲವೇ? ಏಕೆ ಆಗಲ್ಲ? ಎಂದು ಪ್ರಶ್ನಿಸಿದ್ದಾರೆ.

ನಾವು ಇನ್ನೂ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿದ್ದೇವೆ. ನಮ್ಮ ಮುಂದೆ ಇನ್ನೂ ಅನೇಕ ಟೆಸ್ಟ್​ ಸರಣಿಗಳಿವೆ. ಗೆಲ್ಲಲು ಸಾಕಷ್ಟು ಪಂದ್ಯಗಳಿವೆ. ನನಗೂ ನಿಜವಾಗಿಯೂ ಆಸಕ್ತಿಯಿದೆ. ಅದಕ್ಕಾಗಿ ಪ್ರತಿ ದಿನವೂ ತರಬೇತಿ ಪಡೆಯಲಿದ್ದೇನೆ. ಡ್ರೆಸ್ಸಿಂಗ್​ ರೂಮ್​​ ಹುಡುಗರೊಂದಿಗೆ ಇಂಗ್ಲೆಂಡ್​ ತಂಡಕ್ಕಾಗಿ ಗೆಲುವು ತಂದು ಕೊಡಲು ಪ್ರಯತ್ನಿಸುವೆ ಎಂದು ತಾವು ಇನ್ನೂ ಒಂದೆರಡು ವರ್ಷ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಈ ವೇಳೆ 700 ವಿಕೆಟ್​ ಸಾಧನೆ ಮಾಡಲು ಅವಕಾಶವಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.