ETV Bharat / sports

ಈ ಬೌಲರ್​ ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾಗ್ತಾರೆ: ಆಕಾಶ್​ ಚೊಪ್ರಾ ಭವಿಷ್ಯ

author img

By

Published : Jan 20, 2021, 9:37 PM IST

IPL 2021
IPL 2021

ಕಳೆದ ಐಪಿಎಲ್​ನಿಂದ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ ಎನ್ನಲಾಗುತ್ತಿದೆ. ಅದಕ್ಕಾಗಿ ತಮ್ಮ ತಂಡದಲ್ಲಿ ದುಬಾರಿ ಹಣ ತೆತ್ತು ಏನೂ ಪ್ರಯೋಜನವಾಗದ ಆಟಗಾರರನ್ನು ರಿಲೀಸ್​ ಮಾಡಿಕೊಂಡು ಮಿನಿ ಹರಾಜಿಗೆ ಬಕ ಪಕ್ಷಿಗಳಂತೆ ಕಾಯುತ್ತಿವೆ.

ಮುಂಬೈ: 14ನೇ ಆವೃತ್ತಿಯ ಐಪಿಎಲ್​ಗೆ ಇನ್ನೂ 3 ತಿಂಗಳ ಸಮಯವಿದೆ. ಈಗಾಗಲೇ ತಂಡವನ್ನು ಸುಸಜ್ಜಿತವಾಗಿ ಕಟ್ಟಿಕೊಳ್ಳಲು ಫೆಬ್ರವರಿಯಲ್ಲಿ ಮಿನಿ ಹರಾಜಿಗೆ ಅವಕಾಶ ಮಾಡಿಕೊಡಲಾಗಿದೆ. ಬುಧವಾರ ಎಲ್ಲಾ ಫ್ರಾಂಚೈಸಿಗಳು ಉತ್ತಮ ಪ್ರದರ್ಶನ ತೋರದ ಹಾಗೂ ದುಬಾರಿಯಾಗಿರುವ ಆಟಗಾರರನ್ನು ಕೈಬಿಟ್ಟಿವೆ.

ಕಳೆದ ಐಪಿಎಲ್​ನಿಂದ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ ಎನ್ನಲಾಗುತ್ತಿದೆ. ಅದಕ್ಕಾಗಿ ತಮ್ಮ ತಂಡದಲ್ಲಿ ದುಬಾರಿ ಹಣ ತೆತ್ತು ಏನೂ ಪ್ರಯೋಜನವಾಗದ ಆಟಗಾರರನ್ನು ರಿಲೀಸ್​ ಮಾಡಿಕೊಂಡು ಮಿನಿ ಹರಾಜಿಗೆ ಬಕ ಪಕ್ಷಿಗಳಂತೆ ಕಾಯುತ್ತಿವೆ.

ಮಿಚೆಲ್ ಸ್ಟಾರ್ಕ್​ ಐಪಿಎಲ್​
ಮಿಚೆಲ್ ಸ್ಟಾರ್ಕ್​ ಐಪಿಎಲ್​

ಮಾಜಿ ಕ್ರಿಕೆಟಿಗ ಅಕಾಶ್​ ಚೋಪ್ರಾ ಕೂಡ ಆಸೀಸ್​ ವೇಗಿ ಮಿನಿ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಖರೀದಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದ ಮುಜೀಬ್​ 6-7 ಕೋಟಿ, ಆಸ್ಟ್ರೇಲಿಯಾದ ಆಲ್​ರೌಂಡರ್​ ಕ್ಯಾಮರೋನ್ ಗ್ರೀನ್​ 5-6 ಕೋಟಿ, ಕಿವೀಸ್​ ಆಲ್​ರೌಂಡರ್​ ಜೆಮೀಸನ್​ 5-7, ಇಂಗ್ಲೆಂಡ್ ಓಪನರ್​ ಜೇಸನ್ ರಾಯ್​ 4-6, ಹಾಗೂ ಮ್ಯಾಕ್ಸ್​ವೆಲ್ ಮತ್ತು ನಾಥನ್ ಕೌಲ್ಟರ್ ನೈಲ್ ಮತ್ತೆ ಈಗಿರುವಷ್ಟೇ ಮೊತ್ತವನ್ನು ಪಡೆಯಲಿದ್ದಾರೆ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ದಶಕದ ನಂತರ ಮಾಲಿಂಗನ ಬಿಟ್ಟುಕೊಟ್ಟ ಮುಂಬೈ ಇಂಡಿಯನ್ಸ್​: 18 ಆಟಗಾರರ ರೀಟೈನ್

ಸ್ಟಾರ್ಕ್​ ಮೇಲೆ ಕಣ್ಣಿಟ್ಟಿರುವ ತಂಡಗಳು

ವರದಿಗಳ ಪ್ರಕಾರ ಐಪಿಎಲ್​ನ ಬಲಿಷ್ಠ ತಂಡವಾದ ಮುಂಬೈ ಇಂಡಿಯನ್ಸ್​ ಸ್ಟಾರ್ಕ್​ರನ್ನು ತಮ್ಮ ತಂಡಕ್ಕೆ ಖರೀದಿಸಲು ಯೋಜನೆ ಮಾಡಿದೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ದುಬಾರಿ ಆಲ್​ರೌಂಡರ್ ಕೌಲ್ಟರ್​ ನೈಲ್ ಸೇರಿದಂತೆ ವಿದೇಶಿ ಬೌಲರ್​ ಕೋಟದಲ್ಲಿದ್ದ ಜೇಮ್ ಪ್ಯಾಟಿನ್​ಸನ್​, ಮೆಕ್ಲೆನಗನ್​, ಮಾಲಿಂಗಾ, ರುದರ್​ಫೋರ್ಡ್​ರನ್ನು ರಿಲೀಸ್ ಮಾಡಿದೆ.

ಮಿಚೆಲ್ ಸ್ಟಾರ್ಕ್​ ಐಪಿಎಲ್​
ಮಿಚೆಲ್ ಸ್ಟಾರ್ಕ್​ ಐಪಿಎಲ್​

ಇನ್ನು ಕಳೆದ ಐಪಿಎಲ್​ನಲ್ಲಿ ಬಲಿಷ್ಠ ಬ್ಯಾಟಿಂಗ್​ ಇದ್ದರೂ ಬೌಲಿಂಗ್ ಕೊರತೆಯನುಭವಿಸಿದ್ದ ಕಿಂಗ್ಸ್​ ಇಲೆವೆನ್ ಪಂಜಾಬ್ ಕೂಡ ದುಬಾರಿ ಆಟಗಾರರಾದ ಮ್ಯಾಕ್ಸ್​ವೆಲ್, ಕಾಟ್ರೆಲ್ ಹಾಗೂ ಮುಜೀಬ್​ರನ್ನು ಬಿಡುಗಡೆ ಮಾಡಿದೆ. ಹಾಗಾಗಿ ಸ್ಟಾರ್ಕ್​ ಮೇಲೆ ಪಂಜಾಬ್​ ಕೂಡ ಗಮನ ಹರಿಸಿದೆ ಎನ್ನಲಾಗುತ್ತಿದೆ.

ಇನ್ನುಳಿದಂತೆ ಆರ್​ಸಿಬಿ, ರಾಜಸ್ಥಾನ​ ರಾಯಲ್ಸ್​ ತಂಡಗಳು ಕೂಡ ಸ್ಟಾರ್ಕ್​ ಮೇಲೆ ಆಸಕ್ತಿ ವಹಿಸಿವೆ ಎನ್ನಲಾಗುತ್ತಿದೆ.

ಇದನ್ನು ಓದಿ:RCB ಸೇರಿದ ಆಸ್ಟ್ರೇಲಿಯಾದ ಡೇನಿಯಲ್​ ಸ್ಯಾಮ್ಸ್​, ಹರ್ಷಲ್ ಪಟೇಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.