ETV Bharat / sports

ಪಕ್ಷಿಗಳಿಗೆ ಆಹಾರ ನೀಡಿದ ಧವನ್​ಗೆ ಸಂಕಷ್ಟ... ಕೋರ್ಟ್​ನಲ್ಲಿ ದೂರು ದಾಖಲು!

author img

By

Published : Jan 28, 2021, 7:47 AM IST

Updated : Jan 28, 2021, 8:42 AM IST

ಪಕ್ಷಿಗಳಿಗೆ ಆಹಾರ ನೀಡಿದ ಕ್ರಿಕೆಟಿಗ ಶಿಖರ್​ ಧವನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

complaint filed in varanasi court, complaint filed in varanasi court against cricketer shikhar dhawan, cricketer shikhar dhawan, cricketer shikhar dhawan news, cricketer shikhar dhawan latest news, ವಾರಣಾಸಿ ಕೋರ್ಟ್​ನಲ್ಲಿ ದೂರು ದಾಖಲು, ಕ್ರಿಕೆಟಿಗ ಶಿಖರ್​ ಧವನ್​ ವಿರುದ್ಧ ವಾರಣಾಸಿ ಕೋರ್ಟ್​ನಲ್ಲಿ ದೂರು ದಾಖಲು, ಕ್ರಿಕೆಟಿಗ ಶಿಖರ್​ ಧವನ್, ಕ್ರಿಕೆಟಿಗ ಶಿಖರ್​ ಧವನ್ ಸುದ್ದಿ,
ಪಕ್ಷಿಗಳಿಗೆ ಆಹಾರ ನೀಡಿದ ಶಿಖರ್​ನಿಗೆ ಎದುರಾದ ಮತ್ತೊಂದು ಸಂಕಷ್ಟ

ವಾರಣಾಸಿ (ಉತ್ತರ ಪ್ರದೇಶ): ಕ್ರಿಕೆಟಿಗ ಶಿಖರ್ ಧವನ್ ವಲಸೆ ಹಕ್ಕಿಗಳಿಗೆ ಆಹಾರ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರ ಮೇಲೆ ವಾರಣಾಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಪಕ್ಷಿ ಜ್ವರ ಅಪಾಯ ಗಮನದಲ್ಲಿಟ್ಟುಕೊಂಡು ಜನವರಿ 11 ರಿಂದ ವಲಸೆ ಹಕ್ಕಿಗಳಿಗೆ ಆಹಾರ ನೀಡುವುದನ್ನು ವಾರಣಾಸಿ ಜಿಲ್ಲಾಡಳಿತ ನಿಷೇಧಿಸಿತ್ತು. ಆದರೆ, ಶಿಖರ್ ಧವನ್ ಅವರು ಗಂಗಾ ನದಿಯಲ್ಲಿ ದೋಣಿ ವಿಹಾರಕ್ಕೆ ಹೋದ ಸಮಯದಲ್ಲಿ ವಲಸೆ ಹಕ್ಕಿಗಳಿಗೆ ಆಹಾರವನ್ನು ನೀಡಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್​ ಮಾಡಿದ್ದರು. ಘಟನೆಯನ್ನು ತಿಳಿದ ನಂತರ ವಾರಣಾಸಿ ಜಿಲ್ಲಾಧಿಕಾರಿ ಇದಕ್ಕೆ ನಾವಿಕನನ್ನು ಹೊಣೆಗಾರನನ್ನಾಗಿ ಮಾಡಿದ್ದಾರೆ.

ಧವನ್ ವಲಸೆ ಪಕ್ಷಿಗಳಿಗೆ ಆಹಾರ ನೀಡಿದ ಫೋಟೋ ಜಾಲತಾಣದಲ್ಲಿ ವೈರಲ್ ಆದ ನಂತರ ಶಿಖರ್ ಧವನ್ ಅವರನ್ನು ಕರೆದೊಯ್ದ ನಾವಿಕನ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿದ್ದಾರೆ. ಶಿಖರ್ ಧವನ್ ಪ್ರವಾಸಿಗರಾಗಿ ಇಲ್ಲಿಗೆ ಆಗಮಿಸಿದ್ದಾರೆ. ಪಕ್ಷಿಗಳಿಗೆ ಆಹಾರ ನೀಡುವುದನ್ನು ವಾರಣಾಸಿ ಜಿಲ್ಲಾಡಳಿತ ನಿಷೇಧಿಸಿದ್ದ ಬಗ್ಗೆ ತಿಳಿದಿರಲಿಲ್ಲ. ಆದರೆ, ನಾವಿಕನಿಗೆ ಜಿಲ್ಲಾಡಳಿತದ ಆದೇಶದ ಬಗ್ಗೆ ತಿಳಿದಿತ್ತು. ಅದನ್ನು ತಿಳಿದಿದ್ದರೂ ಸಹ, ಶಿಖರ್ ಧವನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಆದ್ದರಿಂದ ನಾವಿಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಶಿಖರ್​ ಧವನ್​ ವಿರುದ್ಧ ವಾರಣಾಸಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತೃತೀಯ ದಿವಾಕರ್ ಕುಮಾರ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ವಕೀಲರ ಪರವಾಗಿ ಸಲ್ಲಿಸಿದ ದೂರನ್ನು ಆಲಿಸಲು ಫೆಬ್ರವರಿ 6 ರಂದು ನ್ಯಾಯಾಲಯ ನಿರ್ಧರಿಸಿದೆ.

Last Updated : Jan 28, 2021, 8:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.