ETV Bharat / sports

ಇನ್​​ಸ್ಟಾಗ್ರಾಮ್​ ಜನಪ್ರಿಯತೆಯಲ್ಲೂ ಧೋನಿಯ ಚೆನ್ನೈ ಸೂಪರ್​ ಕಿಂಗ್ಸ್​ನದ್ದೇ ಮೇಲುಗೈ ​

author img

By

Published : Jun 20, 2023, 8:09 PM IST

Etv BharatCSK is the most popular sports team in the world
ಇನ್​​ಸ್ಟಾಗ್ರಾಮ್​ ಪಾಪ್ಯುಲಾರಿಟಿಯಲ್ಲೂ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ನದ್ದೇ ಮೇಲುಗೈ ​

ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಜಾಗತಿಕವಾಗಿ ಅತಿ ಹೆಚ್ಚು ಪ್ರಖ್ಯಾತಿ ಪಡೆದ ತಂಡ ಎಂದು ಡಿಪೋರ್ಟ್ಸ್ ಮತ್ತು ಫೈನಾನ್ಸ್ ಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಲ್ಲದೇ ಈಗ ವಿಶ್ವದಲ್ಲೇ ಹೆಚ್ಚು ಗಮನ ಸೆಳೆಯುತ್ತಿರುವ ಕ್ರೀಡೆಯಲ್ಲಿ ಕ್ರಿಕೆಟ್ ಕೂಡಾ ಒಂದು. ಅದರಲ್ಲೂ ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಹೆಚ್ಚಿನ ಆಕರ್ಷಣೆ ಪಡೆಯುತ್ತಿದೆ. ಅನೇಕ ದೇಶದ ಸ್ಟಾರ್​ ಆಟಗಾರರು ಐಪಿಎಲ್​ನಲ್ಲಿ ಆಡುತ್ತಿರುವುದರಿಂದ ಜಾಗತಿಕವಾಗಿಯೂ ಈ ಲೀಗ್​ಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ.

ಭಾರತದಲ್ಲಿ ನಡೆಯುವ ಐಪಿಎಲ್​ನಂತೆ ಇತರ ದೇಶಗಳಲ್ಲೂ ಲೀಗ್​ ಪಂದ್ಯಗಳು ನಡೆಯುತ್ತವೆ. ​ಆದರೆ ಐಪಿಎಲ್​ನಷ್ಟು ಯಾವುದೂ ಯಶಸ್ಸು ಕಂಡಿಲ್ಲ. ಅದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಕ್ರಿಕೆಟ್​ ಬಗ್ಗೆ ಇರುವ ಅಭಿಮಾನ. ಆಟಗಾರ ಮತ್ತು ತಂಡ ಬಗ್ಗೆ ಅಭಿಮಾನಿಗಳು ಭಾರಿ ಪ್ರೀತಿ ವ್ಯಕ್ತಪಡಿಸುತ್ತಾರೆ. 16ನೇ ಆವೃತ್ತಿ ಆಡಿದರೂ ಕಪ್​ ಗೆಲ್ಲದ ಆರ್​ಸಿಬಿಯೇ ಇದಕ್ಕೆ ಅಪ್ಪಟ ಉದಾಹರಣೆ.

ಸಾಮಾಜಿಕ ಜಾಲತಾಣಗಳು ಈಗ ಕ್ರಿಕೆಟ್​ ಕ್ರೇಜ್ ಅ​ನ್ನು ಹೆಚ್ಚು ಮಾಡಿವೆ ಎಂದರೆ ತಪ್ಪಾಗದು. ಇನ್​​ಸ್ಟಾಗ್ರಾಮ್​, ಟ್ವಿಟರ್ ಮತ್ತು ಫೇಸ್​ಬುಕ್​ಗಳಲ್ಲಿ ಅಭಿಮಾನಿಗಳು ಪೋಸ್ಟ್​ಗಳು ಮತ್ತು ಮೀಮ್ಸ್​​ಗಳ ಮೂಲಕ ಎದುರಾಳಿ ತಂಡದ ಕಾಲೆಳೆಯುದಲ್ಲದೇ ಅಪಹಾಸ್ಯಗಳನ್ನೂ ಮಾಡುತ್ತಾರೆ. ಈ ರೀತಿ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ನಲ್ಲಿರುವ ಜಾಗತಿಕ ಸ್ಪೋರ್ಟ್ಸ್‌​​ ತಂಡದ ಬಗ್ಗೆ ಅಧ್ಯಯನದ ವರದಿಯಲ್ಲಿ ಭಾರತದ ಕ್ರಿಕೆಟ್ ಫ್ರಾಂಚೈಸಿ ಟಾಪ್​ ಸ್ಥಾನವನ್ನು ಪಡೆದುಕೊಂಡಿದೆ.

ಚಾಂಪಿಯನ್​ ಚೆನ್ನೈ ಟಾಪ್​: 5ನೇ ಬಾರಿಗೆ ಐಪಿಎಲ್​ ಟ್ರೋಫಿ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಇನ್​ಸ್ಟಾಗ್ರಾಮ್​ನಲ್ಲಿ ಜಾಗತಿಕವಾಗಿ ಹೆಚ್ಚು ಪ್ರಖ್ಯಾತಿ ಪಡೆದ ತಂಡ. ಎಂ.ಎಸ್.​ ಧೋನಿಯ ಆಟ ನೋಡಲು ಜನ ಹೆಚ್ಚು ಇಷ್ಟಪಡುತ್ತಾರೆ ಎಂಬುದು ಈ ಬಾರಿಯ ಐಪಿಎಲ್​ ನೇರಪ್ರಸಾದಲ್ಲಿ ಸಾಬೀತಾಗಿತ್ತು. ಧೋನಿ ಬ್ಯಾಟಿಂಗ್​ ಬಂದಾಗ 2.3 ಕೋಟಿ ವೀಕ್ಷಣೆಯನ್ನು ಜಿಯೋ ಸಿನಿಮಾ ಗಳಿಸಿತ್ತು. ಈಗ 2023ರ ಮೇ ತಿಂಗಳಿನ ಇನ್​ಸ್ಟಾಗ್ರಾಮ್​ ಪಾಪ್ಯುಲರ್​ ಆಗಿದ್ದ ಸ್ಪೋರ್ಟ್ಸ್​ ಟೀಂ​ ಸಿಎಸ್​ಕೆ ಎಂದು ತಿಳಿದು ಬಂದಿದೆ.

ಡಿಪೋರ್ಟ್ಸ್ ಮತ್ತು ಫೈನಾನ್ಸ್​ ಎಂಬ ಸಂಸ್ಥೆ ಜಾಗತಿಕವಾಗಿ ಸಾಮಾಜಿಕ ಜಾಲತಾಣವಾದ ಇನ್​​ಸ್ಟಾಗ್ರಾಮ್​ನಲ್ಲಿ ಪ್ರಖ್ಯಾತಿ ಪಡೆದ ತಂಡಗಳ ಬಗ್ಗೆ ಅಧ್ಯಯನ ಮಾಡಿದೆ. ಅದರಂತೆ ಈ ಜನಪ್ರಿಯ​ ತಂಡಗಳ ಟಾಪ್​ 20ರ ಪಟ್ಟಿಯಲ್ಲಿ ಐಪಿಎಲ್​ನ ಆರು ತಂಡಗಳಿದೆ. ಇದರಿಂದ ಭಾರತದಲ್ಲಿ ಐಪಿಎಲ್​ಗೆ ಎಷ್ಟು ಫ್ಯಾನ್​ಗಳಿದ್ದಾರೆ ಎಂದು ತಿಳಿಯುತ್ತದೆ. ಅಗ್ರಸ್ಥಾನವನ್ನು ಸಿಎಸ್​ಕೆ ಪಡೆದರೆ, ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​, ಐದನೇ ಸ್ಥಾನದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು 7ರಲ್ಲಿ ಗುಜರಾತ್​ ಟೈಟಾನ್ಸ್​ ಇದೆ. 15ರಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು 18 ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಇದೆ.

ಜಾಗತಿಕ ಮಟ್ಟದಲ್ಲಿ ಫುಟ್ಬಾಲ್​ಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಕ್ರಿಕೆಟ್​ ಫ್ಯಾನ್ಸ್​ ಜೋರಾಗಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ರಿಯಲ್ ಮ್ಯಾಡ್ರಿಡ್, ಮೂರಲ್ಲಿ ಎಫ್​​ಸಿ ಬಾರ್ಸಿಲೋನಾ ಕಾಲ್ಚೆಂಡಿನ ಕ್ಲಬ್​ಗಳಿವೆ.

ಇದನ್ನೂ ಓದಿ: BWF Rankings: ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: ಇಂಡೋನೇಷ್ಯಾ ಓಪನ್​ ಗೆದ್ದ ಚಿರಾಗ್, ಸಾತ್ವಿಕ್‌ ಜೋಡಿಗೆ 3ನೇ ಸ್ಥಾನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.