ETV Bharat / sports

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಖೋ ಖೋ ಆಟಗಾರರೆಂದ ಇಶಾನ್​ ಕಿಶನ್!: ವಿಡಿಯೋ ಹಂಚಿಕೊಂಡ ಬಿಸಿಸಿಐ

author img

By ETV Bharat Karnataka Team

Published : Nov 28, 2023, 5:51 PM IST

ವಿರಾಟ್​ ಕೊಹ್ಲಿ ಖೋ ಖೋ ಆಟಗಾರರೆಂದ ಇಶಾನ್​ ಕಿಶನ್
ವಿರಾಟ್​ ಕೊಹ್ಲಿ ಖೋ ಖೋ ಆಟಗಾರರೆಂದ ಇಶಾನ್​ ಕಿಶನ್

ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇಬ್ಬರು ಖೋ ಖೋ ಪ್ಲೇಯರ್ಸ್​ ಎಂದು ಇಶಾನ್​ ಕಿಶನ್​ ಸಂದರ್ಶನದಲ್ಲಿ ಹೇಳಿದ್ದಾರೆ.

ನವದೆಹಲಿ: ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟಿ-20 ಸರಣಿಗಳ ಪಂದ್ಯ ನಡೆಯುತ್ತಿದ್ದು, ಇಂದು ಗುವಾಟಿಯಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಪಂದ್ಯಕ್ಕೂ ಮುನ್ನ ಬಿಸಿಸಿಐ ಇಶಾನ್ ಕಿಶನ್ ಅವರೊಂದಿಗಿನ ತಮಾಷೆಯ ಸಂದರ್ಶನದ ವಿಡಿಯೋವನ್ನು ಹಂಚಿಕೊಂಡಿದೆ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡುವಂತೆ ಕಿಶನ್​ಗೆ ಟಾಸ್ಕ್​ ನೀಡಲಾಗಿತ್ತು. ಅದರಂತೆ ಅವರು ಕೇಳಿದ ಪ್ರಶ್ನೆಗಳಿಗೆ ತಪ್ಪಾದ ಮಾಹಿತಿ ನೀಡಿದ್ದಾರೆ.

ಇಶಾನ್​ ಕಿಶನ್​ಗೆ ಕೇಳಿದ ಪ್ರಶ್ನೆಗಳು ಅದಕ್ಕೆ ಅವರು ನೀಡಿದ ಉತ್ತರಗಳು ಇಲ್ಲಿವೆ.

ಪ್ರಶ್ನೆ: ನಿಮ್ಮ ಹೆಸರು ಏನು?

ಉತ್ತರ: ವಿವಿಎಲ್ ಲಕ್ಷ್ಮಣ್

ಪ್ರಶ್ನೆ: ನಿಮ್ಮ ವಯಸ್ಸು?

ಉತ್ತರ: 82 ವರ್ಷಗಳು

ಪ್ರಶ್ನೆ: ನೀವು ಯಾವ ಭಾಷೆ ಮಾತನಾಡುತ್ತಿದ್ದೀರಿ?

ಉತ್ತರ: ಸ್ಪ್ಯಾನಿಷ್

ಪ್ರಶ್ನೆ: ನೀವು ಯಾವ ಕ್ರೀಡೆ ಆಡುತ್ತೀರಿ?

ಉತ್ತರ: ಫುಟ್ಬಾಲ್

ಪ್ರಶ್ನೆ: ಸೂರ್ಯಕುಮಾರ್ ಯಾದವ್ ಯಾರು?

ಉತ್ತರ: ವಿಕೆಟ್ ಕೀಪರ್, ಬೌಲರ್

ಪ್ರಶ್ನೆ: ವಿರಾಟ್ ಮತ್ತು ರೋಹಿತ್ ಯಾವ ಆಟವನ್ನು ಆಡುತ್ತಾರೆ?

ಉತ್ತರ: ಖೋ-ಖೋ

ಪ್ರಶ್ನೆ: ನಿಮ್ಮ ಕೂದಲಿನ ಬಣ್ಣ ಏನು?

ಉತ್ತರ: ಕಿತ್ತಳೆ

ಪ್ರಶ್ನೆ: ಚೆಂಡು ಬ್ಯಾಟ್‌ಗೆ ಬಡಿದಾಗ ಯಾವ ಶಬ್ದ ಬರುತ್ತದೆ?

ಉತ್ತರ: ಮಿಯಾವ್​

ಪ್ರಶ್ನೆ: ನಿಮ್ಮ ಕಿಟ್ ಬ್ಯಾಗ್‌ನಲ್ಲಿ ಯಾವ ಮೂರು ವಸ್ತುಗಳನ್ನು ಇಟ್ಟುಕೊಂಡಿದ್ದೀರಿ?

ಉತ್ತರ: ಹೆಡ್‌ಫೋನ್‌ಗಳು, ವಾಲೆಟ್, ಐಸ್ ಕ್ರೀಮ್

ಪ್ರಶ್ನೆ: ನೀವು ಜಿಮ್‌ನಲ್ಲಿ ಏನು ಮಾಡುತ್ತೀರಿ?

ಉತ್ತರ: ನಾನು ಆಟವಾಡುತ್ತೇನೆ

ಪ್ರಶ್ನೆ: ನಾವು ಈಗ ಎಲ್ಲಿದ್ದೇವೆ?

ಉತ್ತರ: ಟೋಕಿಯೋ ಎಂದು ಹೀಗೆ ಕೇಳಿದ ಪ್ರಶ್ನೆಗಳಿಗೆ ಕಿಶನ್​ ತಪ್ಪು ಉತ್ತರಗಳನ್ನು ನೀಡಿದ್ದಾರೆ.

ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಭಾರತದ ಟಿ-20 ಸರಣಿಯಲ್ಲಿ ಇಶನ್​ ಕಿಶನ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್​ ಸಮೇತ 58 ರನ್​ ಕಲೆ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯವನ್ನು ಭಾರತ 2 ವಿಕೆಟ್​ಗಳಿಂದ ಜಯ ಗಳಿಸಿತ್ತು. ಎರಡನೇ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್​ ಮಾಡಿದ ಕಿಶನ್ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ ಸಹಾಯದಿಂದ 52 ರನ್​ಗಳ ಕಲೆ ಹಾಕಿ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಸಹಾಯ ಮಾಡಿದ್ದರು. ಈ ಪಂದ್ಯವನ್ನು ಟೀಮ್​ ಇಂಡಿಯಾ 44 ರನ್​ಗಳಿಂದ ಗೆದ್ದಿತ್ತು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ​ ಅತ್ಯಂತ ಕಿರಿಯ ನಾಯಕ: ಪಂತ್, ಗಿಲ್ ಸೇರಿ ಈ ಪಟ್ಟಿಯಲ್ಲಿ ಯಾರಿದ್ದಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.