ETV Bharat / sports

Shreyas Iyer: ಮತ್ತೆ ಗಾಯಕ್ಕೆ ತುತ್ತಾದ ಶ್ರೇಯಸ್​ ಅಯ್ಯರ್​.. ವಿಶ್ವಕಪ್​ ತಂಡದಲ್ಲಿ ಆಗುವುದೇ ಬದಲಾವಣೆ?

author img

By ETV Bharat Karnataka Team

Published : Sep 12, 2023, 4:08 PM IST

Asia Cup 2023: ಶ್ರೇಯಸ್​ ಅಯ್ಯರ್​ ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆಯೇ ಬೆನ್ನಿನ ನೋವಿನಿಂದ ಬಳಲುತ್ತಿದ್ದರು. ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

Shreyas Iyer
Shreyas Iyer

ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್​ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಮತ್ತೆ ಗಾಯದ ಬರೆ ಬಿದ್ದಿದೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಂತರ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಸಂಪೂರ್ಣ ಚೇತರಿಕೆ ಕಂಡು ಫಿಟ್​ನೆಸ್​ ಪರೀಕ್ಷೆ ಪಾಸ್​ ಆಗಿ ಏಷ್ಯಾಕಪ್​ ತಂಡಕ್ಕೆ ಸೇರಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಭಾನುವಾರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದ ಟಾಸ್​ ವೇಳೆ ನಾಯಕ ರೋಹಿತ್​ ಶರ್ಮಾ ಅಯ್ಯರ್​ ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿಯುತ್ತಿದ್ದು, ಕೆಎಲ್​ ರಾಹುಲ್​ ಆಡಲಿದ್ದಾರೆ ಎಂದು ಹೇಳಿದ್ದರು.

ಇಂದು ಶ್ರೀಲಂಕಾದ ವಿರುದ್ಧ ಭಾರತ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಎರಡನೇ ಹಣಾಹಣಿಯನ್ನು ಮಾಡುತ್ತಿದ್ದು, ಈ ವೇಳೆ ಅಯ್ಯರ್​ ತಂಡದೊಂದಿಗೆ ಮೈದಾನಕ್ಕೆ ಪ್ರಯಾಣಿಸುತ್ತಿಲ್ಲ ಎಂದಿ ಬಿಸಿಸಿಐ ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ತಿಳಿಸಿದೆ. ಪೋಸ್ಟ್​ನಲ್ಲಿ "ಶ್ರೇಯಸ್ ಅಯ್ಯರ್ ಅವರು ಉತ್ತಮವಾಗಿದ್ದಾರೆ. ಆದರೆ ಬೆನ್ನು ಸೆಳೆತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಬಿಸಿಸಿಐ ವೈದ್ಯಕೀಯ ತಂಡವು ವಿಶ್ರಾಂತಿಗೆ ಸಲಹೆ ನೀಡಿದೆ. ಅಯ್ಯರ್​ ಅವರು ತಂಡದೊಂದಿಗೆ ಇಂದು ಶ್ರೀಲಂಕಾ ವಿರುದ್ಧ ಭಾರತದ ಸೂಪರ್ 4 ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಪ್ರಯಾಣಿಸಿಲ್ಲ " ಎಂದು ಬರೆದುಕೊಂಡಿದೆ.

  • UPDATE - Shreyas Iyer is feeling better but is yet to fully recover from back spasm. He has been adviced rest by the BCCI Medical Team and has not travelled with the team to the stadium today for India's Super 4 match against Sri Lanka.#AsiaCup2023 pic.twitter.com/q6yyRbVchj

    — BCCI (@BCCI) September 12, 2023 " class="align-text-top noRightClick twitterSection" data=" ">

ಮತ್ತೆ ಮಧ್ಯಮ ಕ್ರಮಾಂಕಕ್ಕೆ ಅಘಾತ: ಕಳೆದ ಒಂದು ವರ್ಷದಿಂದ ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಕೊರತೆ ಕಾಡುತ್ತಿತ್ತು. ರಿಷಬ್​ ಪಂತ್​, ಶ್ರೇಯಸ್​ ಅಯ್ಯರ್​ ಮತ್ತು ಕೆಎಲ್ ​ರಾಹುಲ್​ ಒಮ್ಮೆಗೆ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಮಧ್ಯಮ ಕ್ರಮಾಂಕ ಸಮಸ್ಯೆಗೆ ಒಳಗಾಗಯಿತು. ಈ ಸ್ಥಾನಕ್ಕೆ ಹಲವಾರು ಪ್ರಯೋಗಗಳು ನಡೆದರೂ ಪ್ರಯೋಜನ ಆಗಲಿಲ್ಲ. ವಿಶ್ವಕಪ್​ಗೂ ಮುನ್ನ ರಾಹುಲ್​ ಮತ್ತು ಅಯ್ಯರ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಇದು ಭರವಸೆ ಮೂಡಿಸಿತ್ತು. ಆದರೆ ಈಗ ಮತ್ತೆ ಅಯ್ಯರ್​ ಗಾಯಕ್ಕೆ ತುತ್ತಾಗಿರುವುದು ವಿಶ್ವಕಪ್​ ಹಿನ್ನೆಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಯ್ಯರ್​ ಅವರ ನೋವು ಉಲ್ಬಣವಾದಲ್ಲಿ ಮಧ್ಯಮ ಕ್ರಮಾಂಕಕ್ಕೆ ವಿಕೆಟ್​ ಕೀಪರ್​, ಬ್ಯಾಟರ್​ ಸಂಜು ಸ್ಯಾಮ್ಸನ್​ ಆಯ್ಕೆ ಆಗುವ ಸಾಧ್ಯತೆ ಇದೆ. ಏಷ್ಯಾಕಪ್​ನ ತಂಡದಲ್ಲಿ ಸಂಜು ಮೀಸಲು ಆಟಗಾರರಾಗಿ ಪ್ರಯಾಣಿಸಿದ್ದಾರೆ. ಅಯ್ಯರ್​ಗೆ ನೋವು ಹೆಚ್ಚಾದಲ್ಲಿ ವಿಶ್ವಕಪ್​ ತಂಡದಲ್ಲೂ ಬದಲಾವಣೆ ಸಾಧ್ಯತೆಗಳಿವೆ.

ಏಷ್ಯಕಪ್​ ತಂಡದಲ್ಲಿ ಸ್ಥಾನ ಪಡೆದ ಅಯ್ಯರ್​ಗೆ ಕೇವಲ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿತ್ತು. ಪಾಕಿಸ್ತಾನದ ವಿರುದ್ಧ ಸಿಕ್ಕ ಅವಕಾಶವನ್ನು ಅಯ್ಯರ್​ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಿಲ್ಲ. ನೇಪಾಳದ ವಿರುದ್ಧದ ಪಂದ್ಯದಲ್ಲಿ ಆರಂಭಿಕರೇ ಪಂದ್ಯವನ್ನು ಮುಗಿಸಿದ್ದರಿಂದ ಕೆಳಕ್ರಮಾಂಕಕ್ಕೆ ಬ್ಯಾಟಿಂಗ್​ ಸಿಕ್ಕಿರಲಿಲ್ಲ. ಸೂಪರ್​ ಫೋರ್ ಹಂತದ ಪಾಕಿಸ್ತಾನದ ವಿರುದ್ಧದ​ ಪಂದ್ಯಕ್ಕೆ ಗಾಯದಿಂದ ಹೊರಗುಳಿದುರ. ಇನ್ನು ವಿಶ್ವಕಪ್​ಗೂ ಮುನ್ ಇರುವ ಆಸ್ಟ್ರೇಲಿಯಾ ಸರಣಿಯಲ್ಲಿ ಅಯ್ಯರ್​​ ತಮ್ಮ ಫಿಟ್​ನೆಸ್​ ಸಾಬೀತು ಮಾಡಬೇಕಿದೆ. (ಪಿಟಿಐ)

ಇದನ್ನೂ ಓದಿ: IND vs SL: ಟಾಸ್​ ಗೆದ್ದ ರೋಹಿತ್​ ಬ್ಯಾಟಿಂಗ್ ಆಯ್ಕೆ.. ಅಖಾಡದಲ್ಲಿ​ ತ್ರಿವಳಿ ಸ್ಪಿನ್ನರ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.