ETV Bharat / sports

ಭಾರತದಲ್ಲಿನ ಟಿ-20 ವಿಶ್ವಕಪ್​ ಆಡಲು ಪಾಕ್​ ಕ್ರಿಕೆಟ್​​ ಪ್ಲೇಯರ್ಸ್​ಗೆ ವೀಸಾ : ಜಯ್​ ಶಾ

author img

By

Published : Apr 17, 2021, 4:34 PM IST

ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಭಾರತದಲ್ಲಿ ಆಯೋಜನೆಗೊಂಡಿದ್ದು, ನೆರೆಯ ಪಾಕ್​ ಸಹ ಇದರಲ್ಲಿ ಭಾಗಿಯಾಗಲಿದೆ. ಅವರಿಗೆ ವೀಸಾ ನೀಡುವ ಬಗ್ಗೆ ಸ್ಪಷ್ಟನೆ ನೀಡುವಂತೆ ಪಾಕ್​ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಮನವಿ ಮಾಡಿಕೊಂಡಿತ್ತು. ಇದೀಗ ಆ ವಿಚಾರವಾಗಿ ಜಯ್​ ಶಾ ಮಾತನಾಡಿದ್ದಾರೆ.

Pak team
Pak team

ನವದೆಹಲಿ: ಬಾಬರ್​ ಆಜಮ್​​ ನೇತೃತ್ವದ ಪಾಕ್​ ತಂಡಕ್ಕೆ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ಕ್ರಿಕೆಟ್ ಟೂರ್ನಮೆಂಟ್​​​​ನಲ್ಲಿ ಭಾಗಿಯಾಗಲು ವೀಸಾ ನೀಡಲಾಗುವುದು ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ.

ನಿನ್ನೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಯ್​ ಶಾ ಅಪೆಕ್ಸ್​ ಕೌನ್ಸಿಲ್​ಗೆ ಈ ಮಾಹಿತಿ ನೀಡಿದ್ದು, ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡುವುದಾಗಿ ಈಗಾಗಲೇ ಸರ್ಕಾರ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳಿಗೆ ಗಡಿ ದಾಟಿ ಬರುವ ವಿಚಾರವಾಗಿ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.

ಇದನ್ನೂ ಓದಿ: ಚೆನ್ನೈ ವಿರುದ್ಧ ಹೀನಾಯ ಸೋಲು: ಅಂಜಿಕೆಯಿಲ್ಲದ ಕ್ರಿಕೆಟ್​ ಆಡುವಂತೆ ತಂಡಕ್ಕೆ ರಾಹುಲ್ ಧೈರ್ಯ​!

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಟೂರ್ನಮೆಂಟ್​ ಅಕ್ಟೋಬರ್​ ತಿಂಗಳಲ್ಲಿ ಭಾರತದಲ್ಲಿ ನಡೆಯಲಿದ್ದು, ಅದರಲ್ಲಿ ಪಾಕ್​ ಸಹ ಭಾಗಿಯಾಗಲಿದೆ. ದೇಶದ 9 ಸ್ಥಳಗಳಲ್ಲಿ ಟೂರ್ನಮೆಂಟ್​ ಆಯೋಜನೆ ಮಾಡಲಾಗಿದ್ದು, ಫೈನಲ್​ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತ - ಪಾಕ್​ ನಡುವೆ ಯಾವುದೇ ದ್ವೀಪಕ್ಷೀಯ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿಲ್ಲ ಕೇವಲ ಐಸಿಸಿ ನಿಯೋಜಿತ ಟೂರ್ನಿಗಳಲ್ಲಿ ಭಾಗಿಯಾಗುತ್ತಿವೆ.

ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್​, ಧರ್ಮಶಾಲಾ ಮತ್ತು ಲಖನೌದಲ್ಲಿ ಆಯೋಜನೆಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.