ETV Bharat / sports

‘ಮಂಧಾನ ದೇವತೆ’, ಅವರ ಬ್ಯಾಟಿಂಗ್‌ ನೋಡುವುದು ಚೆಂದ- ಚೀನಾ​ ಅಭಿಮಾನಿ

author img

By ETV Bharat Karnataka Team

Published : Sep 26, 2023, 12:57 PM IST

Asian Games  Mandhana The Goddess  Chinese cricket fan from Beijing  fan from Beijing travels to watch India matches  ಮಂಧಾನ ಒಬ್ಬಳು ದೇವತೆ  ಆಟ ನೋಡುವುದು ನನಗೆ ತುಂಬಾ ಇಷ್ಟ  ಚೈನೀಸ್​ ಅಭಿಮಾನಿ ಬಣ್ಣನೆ  ಮಂಧಾನಾ ದಿ ಗಾಡೆಸ್  ಭಾರತೀಯ ಮಹಿಳಾ ತಂಡದ ಉಪನಾಯಕಿ  ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023  ಭಾರತದ ಮಹಿಳಾ ಕ್ರಿಕೆಟ್ ತಂಡ  ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯ  ಏಷ್ಯನ್ ಗೇಮ್ಸ್​ನಲ್ಲಿ ಭಾರತ ಚಿನ್ನದ ಪದಕ  ಯಾರೀ ಚೈನೀಸ್​ ಅಭಿಮಾನಿ  ಆತ ಮಂಧಾನ ಅವರ ದೊಡ್ಡ ಅಭಿಮಾನಿ  ಚೈನೀಸ್​ ಅಭಿಮಾನಿ ಹೇಳಿದ್ದೇನು  ಸ್ಮೃತಿ ನೋಡಲು ರಾತ್ರಿಯೆಲ್ಲ ಪ್ರಯಾಣ ಮಾಡಿದ್ದ ವೀ
ಚೈನೀಸ್​ ಅಭಿಮಾನಿ ಬಣ್ಣನೆ

'ಮಂಧಾನ ದಿ ಗಾಡೆಸ್' ಎಂಬ ಪೋಸ್ಟರ್ ಹಿಡಿದ ಚೀನಾ ಯುವಕನೊಬ್ಬ ಬಾಯ್ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

ಹ್ಯಾಂಗ್‌ಝೌ (ಚೀನಾ): ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶದ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧಾನ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಅಷ್ಟೇ ಅಲ್ಲ ಚೀನಾದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಹುಟ್ಟು ಹಾಕಿದೆ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ ಅವರನ್ನು ಚೀನಾ ಕ್ರಿಕೆಟ್ ಅಭಿಮಾನಿಯೊಬ್ಬ ‘ದೇವತೆ’ ಎಂದು ಬಣ್ಣಿಸಿದ್ದಾನೆ. ತನ್ನ ಕೈಯಲ್ಲಿ ಆತ 'ಮಂಧಾನ ದಿ ಗಾಡೆಸ್' ಎಂಬ ಪೋಸ್ಟರ್ ಹಿಡಿದುಕೊಂಡಿದ್ದ. ಈ ಚೈನೀಸ್ ಅಭಿಮಾನಿಯ ಹೆಸರು ವೀ ಝೆನ್ಯು.

ಮಂಧಾನ ಅವರ ದೊಡ್ಡ ಅಭಿಮಾನಿ: ಭೌಗೋಳಿಕ ಶಾಸ್ತ್ರ ವಿದ್ಯಾರ್ಥಿಯಾಗಿರುವ ವೀ, ಸ್ಮೃತಿ ಮಂಧಾನಾ ಅವರ ದೊಡ್ಡ ಅಭಿಮಾನಿಯಂತೆ. ಬೀಜಿಂಗ್‌ನಿಂದ 100 ಯುವಾನ್ ಖರ್ಚು ಮಾಡಿ ಮಂಧಾನ ಆಟ ವೀಕ್ಷಿಸಲು ಬಂದಿದ್ದನು. ಚೀನಾದಲ್ಲಿ ಕ್ರಿಕೆಟ್ ವಿಸ್ತರಿಸುವ ಪ್ರಯತ್ನಗಳು ಬಹಳ ಸಮಯದಿಂದ ನಡೆಯುತ್ತಿವೆ. ಆದರೆ ಇಲ್ಲಿಯವರೆಗೆ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಆದರೆ, ಇದರ ಹೊರತಾಗಿ ಟೀಂ ಇಂಡಿಯಾ ಅಭಿಮಾನಿಗಳ ಸಂಖ್ಯೆ ಆ ದೇಶದಲ್ಲಿ ಸಾಕಷ್ಟಿದೆ.

"ನಾನು ಸ್ಮೃತಿಯ ದೊಡ್ಡ ಅಭಿಮಾನಿ. ಅವರು ಫಾರ್ಮ್‌ನಲ್ಲಿರುವಾಗ ಅವರ ಆಟ ನೋಡುವುದು ನನಗೆ ತುಂಬಾ ಇಷ್ಟ. ಅವರಿಗಾಗಿ ನಾನು ಬೀಜಿಂಗ್‌ನಿಂದ ಹ್ಯಾಂಗ್‌ಝೌಗೆ ಬಂದಿದ್ದೇನೆ" ಎಂದು ವೀ ಹೇಳಿದರು.

ಸ್ಮೃತಿ ಮಂಧಾನ ಅವರ ಪಂದ್ಯ ವೀಕ್ಷಿಸಲು ವೀ ರಾತ್ರಿಯೆಲ್ಲ ಪ್ರಯಾಣ ಮಾಡಿದ್ದರಂತೆ. ವೀ ಕ್ರಿಕೆಟ್‌ನ ದೊಡ್ಡ ಅಭಿಮಾನಿಯೂ ಹೌದು. 2019ರ ವಿಶ್ವಕಪ್ ನಂತರ ಬಹಳಷ್ಟು ಕ್ರಿಕೆಟ್ ಆಡಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Smriti Mandhana: ಕಾಮನ್‌ವೆಲ್ತ್‌, ಏಷ್ಯಾಕಪ್, ಏಷ್ಯನ್​ ಗೇಮ್ಸ್​ ಪಂದ್ಯಗಳಲ್ಲಿ ​ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.