ETV Bharat / sports

Asia Cup 2023: ಏಷ್ಯಾಕಪ್ ವೇಳಾಪಟ್ಟಿ ಅಂತಿಮಗೊಳಿಸಿದ ಶಾ - ಅಶ್ರಫ್​: ದಂಬುಲಾದಲ್ಲಿ ಇಂಡೋ-ಪಾಕ್​ ಪಂದ್ಯ ಸಾಧ್ಯತೆ

author img

By

Published : Jul 12, 2023, 5:37 PM IST

ಏಷ್ಯಾಕಪ್
ಏಷ್ಯಾಕಪ್

ಏಷ್ಯಾಕಪ್ ವೇಳಾಪಟ್ಟಿಯನ್ನು ಬಿಸಿಸಿಐ ಕಾರ್ಯದರ್ಶಿ ಮತ್ತು ಪಿಸಿಬಿ ಅಧ್ಯಕ್ಷ ಅಂತಿಮಗೊಳಿಸಿರುವ ಬಗ್ಗೆ​ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್ ಮಾಹಿತಿ ನೀಡಿದ್ದಾರೆ.

ನವದೆಹಲಿ : ಏಷ್ಯಾಕಪ್​ ​ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮಾತ್ರ ಮುಗಿದಿಲ್ಲ. ಈ ಬಾರಿ ಏಷ್ಯಾಕಪ್​ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದು, ಭದ್ರತಾ ನೆಪವೊಡ್ಡಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಬಳಿಕ ನಡೆದ ಚರ್ಚೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (ಪಿಸಿಬಿ) ​ತೆಗೆದುಕೊಂಡ ಪಂದ್ಯಗಳ ವಿತರಣಾ ಒಪ್ಪಿಗೆಯಂತೆ ಇಂಡೋ ಮತ್ತು ಪಾಕ್​ ನಡುವಣ ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್ ಬುಧವಾರ ಖಚಿತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗಿನ ಸಭೆಗಾಗಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿರುವ ಧುಮಾಲ್ ಅವರು, ಏಷ್ಯಾಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ನಾಳೆ ಗುರುವಾರ ಐಸಿಸಿ ಜೊತೆ ಸಭೆಗೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿ ನೂತನ ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ತಿಂಗಳ ಆರಂಭದಲ್ಲಿ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಶ್ರಫ್, ಈ ಹಿಂದೆ ಪಿಸಿಬಿ ಅಧ್ಯಕ್ಷರಾಗಿದ್ದ ನಜಮ್ ಸೇಥಿ ಒಪ್ಪಿಗೆ ಸೂಚಿಸಿರುವ ಹೈಬ್ರಿಡ್ ಕ್ರಿಕೆಟ್​ ಮಾದರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್​ ಪಂದ್ಯಾವಳಿಗಳನ್ನು ಆಯೋಜನೆ ಮಾಡುವ ಹಕ್ಕನ್ನು ಪಿಸಿಬಿ ಹೊಂದಿದೆ. ನಮ್ಮ ಕಾರ್ಯದರ್ಶಿ ಪಿಸಿಬಿ ಮುಖ್ಯಸ್ಥ ಅಶ್ರಫ್ ಭೇಟಿ ಮಾಡಿದ್ದು, ಏಷ್ಯಾ ಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಪಾಕಿಸ್ತಾನದಲ್ಲಿ ಲೀಗ್ ಹಂತದ 4 ಪಂದ್ಯಗಳು ನಡೆಯಲಿವೆ. ನಂತರ ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನ 2 ಪಂದ್ಯ ಸೇರಿದಂತೆ 9 ಪಂದ್ಯಗಳು ನಡೆಯಲಿವೆ. ಒಂದು ವೇಳೆ ಏನಾದರೂ ಫೈನಲ್​ನಲ್ಲಿ ಇಂಡೋ ಮತ್ತು ಪಾಕ್​ ಎದುರಾದರೇ ಅ ಪಂದ್ಯವನ್ನು ಸಹಾ ಶ್ರೀಲಂಕಾದಲ್ಲಿ ಮೂರನೇ ಪಂದ್ಯವಾಗಿ ಆಯೋಜನೆ ಮಾಡಲಾಗುತ್ತದೆ ಎಂದು ಧುಮಾಲ್ ತಿಳಿಸಿದ್ದಾರೆ.

2010 ರ ಆವೃತ್ತಿಯಂತೆಯೇ ಭಾರತ ಮತ್ತು ಪಾಕಿಸ್ತಾನ ಪಂದ್ಯ ದಂಬುಲಾದಲ್ಲಿ ಆಡುವ ಸಾಧ್ಯತೆಯಿದೆ. ಪಾಕಿಸ್ತಾನ ತವರಿನಲ್ಲಿ ಏಕೈಕ ಪಂದ್ಯವನ್ನು ನೇಪಾಳದ ವಿರುದ್ಧ ಆಡಲಿದೆ. ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ, ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮತ್ತು ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 3 ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯುವುದು ಪಕ್ಕಾ ಎನ್ನಲಾಗಿದೆ.

ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಎಂದು ಪಾಕಿಸ್ತಾನ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿರುವಂತೆ ಪಾಕಿಸ್ತಾನ ಮಾಧ್ಯಮಗಳಿಂದ ಹೊರಹೊಮ್ಮುತ್ತಿರುವ ವರದಿಗಳನ್ನು ಧುಮಾಲ್ ತಳ್ಳಿಹಾಕಿದ್ದಾರೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ವೇಳಾಪಟ್ಟಿಯನ್ನು ಮಾತ್ರ ಅಂತಿಮಗೊಳಿಸಲಾಗಿದೆ ಎಂದು ಧುಮಾಲ್ ಹೇಳಿದ್ದಾರೆ.

ಇದನ್ನೂ ಓದಿ : Asia Cup 2023: ಹೈಬ್ರಿಡ್​ ಮಾದರಿಯಲ್ಲಿ ಏಷ್ಯಾಕಪ್​ಗೆ ಎಸಿಸಿ ಒಪ್ಪಿಗೆ ಬಹುತೇಕ ಖಚಿತ.. ಭಾರತಕ್ಕೆ ಲಂಕಾದಲ್ಲಿ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.