ETV Bharat / sports

ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಆಗಸ್ಟ್​ 28ರಂದು ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯ

author img

By

Published : Aug 2, 2022, 5:33 PM IST

15ನೇ ಆವೃತ್ತಿ ಏಷ್ಯಾಕಪ್​ಗೋಸ್ಕರ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್​ 28ರಂದು ಭಾರತ-ಪಾಕಿಸ್ತಾನ ತಂಡಗಳು ಕಣಕ್ಕಿಳಿಯಲಿವೆ.

Etv BharatAsia Cup 2022 Schedule
Etv BharatAsia Cup 2022 Schedule

ಮುಂಬೈ: ಮುಂಬರುವ 15ನೇ ಆವೃತ್ತಿಯ ಏಷ್ಯಾಕಪ್​ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಆಗಸ್ಟ್​ 28ರಂದು ನಡೆಯಲಿರುವ ಹೈ ವೋಲ್ಟೇಜ್​​ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್​ ಎ ವಿಭಾಗದಲ್ಲಿ ಉಭಯ ತಂಡಗಳು ದುಬೈ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಸೆಕ್ರೆಟರಿ ಜಯ್ ಶಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಯಾವ ದಿನಾಂಕದಂದು ಯಾವೆಲ್ಲ ಪಂದ್ಯಗಳು ನಡೆಯಲಿವೆ ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಿಂದ ಏಷ್ಯಾಕಪ್​ ಔಟ್​... ಯುಎಇನಲ್ಲಿ ಟೂರ್ನಿ ಆಯೋಜನೆ ಎಂದ ಸೌರವ್​ ಗಂಗೂಲಿ

ಈ ಸಲದ ಏಷ್ಯಾಕಪ್​​ ಶ್ರೀಲಂಕಾದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಲಂಕಾ ಕ್ರಿಕೆಟ್ ಬೋರ್ಡ್​ ಟೂರ್ನಿ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ, ಯುಎಇನಲ್ಲಿ ಪ್ರಸಕ್ತ ಸಾಲಿನ ಟೂರ್ನಿ​ ನಡೆಯಲಿದೆ. ಮಹತ್ವದ ಸರಣಿಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತೊಂದು ಕ್ವಾಲಿಫೈಯರ್​ ತಂಡವೂ ಭಾಗಿಯಾಗಲಿದೆ. ಆಗಸ್ಟ್​ 27ರಿಂದ ಸರಣಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಆಗಸ್ಟ್​ 27ರಿಂದ ಸೆಪ್ಟೆಂಬರ್​​ 11ರವರೆಗೆ ಟೂರ್ನಿ ನಿಗದಿಯಾಗಿದೆ.

  • The wait is finally over as the battle for Asian supremacy commences on 27th August with the all-important final on 11th September.

    The 15th edition of the Asia Cup will serve as ideal preparation ahead of the ICC T20 World Cup. pic.twitter.com/QfTskWX6RD

    — Jay Shah (@JayShah) August 2, 2022 " class="align-text-top noRightClick twitterSection" data=" ">

ಈ ಟೂರ್ನಿಯಲ್ಲಿ ಭಾರತ ಅತಿ ಹೆಚ್ಚು ಸಲ ಏಷ್ಯಾ ಕಪ್ ಗೆದ್ದಿರುವ ದಾಖಲೆ ಹೊಂದಿದೆ. ಭಾರತ 6 ಬಾರಿ ಏಷ್ಯಾ ಕಪ್ ಗೆದ್ದಿದೆ. ಕಳೆದ ಬಾರಿ ಭಾರತ ಬಾಂಗ್ಲಾದೇಶವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು.

ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ ಇಂತಿದೆ:

  • ಆಗಸ್ಟ್​ 27: ಶ್ರೀಲಂಕಾ ವರ್ಸಸ್​ ಅಫ್ಘಾನಿಸ್ತಾನ
  • ಆಗಸ್ಟ್​ 28: ಭಾರತ ವರ್ಸಸ್ ಪಾಕಿಸ್ತಾನ
  • ಆಗಸ್ಟ್​ 30: ಬಾಂಗ್ಲಾದೇಶ ವರ್ಸಸ್​ ಅಫ್ಘಾನಿಸ್ತಾನ
  • ಆಗಸ್ಟ್​ 31: ಭಾರತ ವರ್ಸಸ್ ಕ್ವಾಲಿಫೈಯರ್
  • ಸೆಪ್ಟೆಂಬರ್​1: ಶ್ರೀಲಂಕಾ ವರ್ಸಸ್​​ ಬಾಂಗ್ಲಾದೇಶ
  • ಸೆಪ್ಟೆಂಬರ್​ 2: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್​
  • ಸೆಪ್ಟೆಂಬರ್ 3 – B1 vs B2 – ಶಾರ್ಜಾ
  • ಸೆಪ್ಟೆಂಬರ್ 4 A1 vs A2 – ದುಬೈ
  • ಸೆಪ್ಟೆಂಬರ್ 6 A1 vs B1 – ದುಬೈ
  • ಸೆಪ್ಟೆಂಬರ್ 7 A2 vs B2 – ದುಬೈ
  • ಸೆಪ್ಟೆಂಬರ್ 8 A1 vs B2 – ದುಬೈ
  • ಸೆಪ್ಟೆಂಬರ್ 9 B1 vs- A2 ದುಬೈ
  • ಸೆಪ್ಟೆಂಬರ್ 11- ಫೈನಲ್ ಪಂದ್ಯ, ದುಬೈ

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪ್ರಾರಂಭವಾಗುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.