ETV Bharat / sports

ಮೆಟ್ಟಿಲುಗಳ ಮೇಲೆ ತಲೆ ತಗ್ಗಿಸಿ ಕುಳಿತಿದ್ದಕ್ಕೆ ಕಾರಣ ತಿಳಿಸಿದ ರಸೆಲ್!

author img

By

Published : Apr 24, 2021, 5:34 PM IST

ಸಿಎಸ್​ಕೆ ವಿರುದ್ಧ ರಸೆಲ್ ಬೌಲ್ಡ್
ಸಿಎಸ್​ಕೆ ವಿರುದ್ಧ ರಸೆಲ್ ಬೌಲ್ಡ್

ನಾನು ಒಮ್ಮೆ ಅಲ್ಲಿದ್ದರೆ ಎಲ್ಲವೂ ಸಾಧ್ಯ ಎಂದು ನಿಮಗೆ ತಿಳಿದಿದೆ. ಹೌದು, ನಾನು ಈ ಹಿಂದೆ ಅಂತಹ ಹಲವಾರು ಸಂದರ್ಭಗಳಲ್ಲಿ ಯಶಸ್ವಿಯಾಗಿದ್ದೇನೆ. ಅಭಿಮಾನಿಗಳಿಗೂ ಗೊತ್ತಿದೆ. 20 ಎಸೆತಗಳಲ್ಲಿ 100 ರನ್ ​ಗಳಿದ್ದರೂ 20 ಸಿಕ್ಸರ್​ ಸಿಡಿಸಬಹುದು ಎಂದು ವಿಂಡೀಸ್ ಆಲ್​ರೌಂಡರ್ ಹೇಳಿದ್ದಾರೆ.

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ 18 ರನ್​ಗಳಿಂದ ಸೋಲು ಕಂಡಿತ್ತು. ಆದರೆ ಆ ಪಂದ್ಯದಲ್ಲಿ ಕೇವಲ 31 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್​​​ 202 ರನ್ ​ಗಳಿಸಿ ಪ್ರಬಲ ಪೈಪೋಟಿ ನೀಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್​ಕೆ ಡುಪ್ಲೆಸಿಸ್(95) ಮತ್ತು ರುತುರಾಜ್ ಗಾಯಕ್ವಾಡ್​(64) ಅರ್ಧಶತಕದ ನೆರವಿನಿಂದ 220 ರನ್ ​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 31 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತ್ತು. ಆದರೆ ಈ ಹಂತದಲ್ಲಿ ಕೆಚ್ಛೆದೆಯ ಪ್ರದರ್ಶನ ತೋರಿದ್ದ ರಸೆಲ್ 22 ಎಸೆತಗಳಲ್ಲಿ​ 54, ದಿನೇಶ್ ಕಾರ್ತಿಕ್​ 24 ಎಸೆತಗಳಲ್ಲಿ 40 ಮತ್ತು ಪ್ಯಾಟ್ ಕಮ್ಮಿನ್ಸ್​ 34 ಎಸೆತಗಳಲ್ಲಿ 66 ರನ್ ​ಗಳಿಸಿ ಸೋಲಿನಲ್ಲೂ ಪ್ರತಿರೋಧ ತೋರಿದ್ದರು.

ಸಿಎಸ್​ಕೆ ವಿರುದ್ಧ ರಸೆಲ್ ಬೌಲ್ಡ್ ಆದ ರೀತಿ
ಸಿಎಸ್​ಕೆ ವಿರುದ್ಧ ರಸೆಲ್ ಬೌಲ್ಡ್ ಆದ ರೀತಿ

ಈ ಪಂದ್ಯದಲ್ಲಿ ಸ್ಯಾಮ್ ಕರ್ರನ್​ ಬೌಲಿಂಗ್​ನಲ್ಲಿ ರಸೆಲ್ ಬೌಲ್ಡ್​ ಆಗಿದ್ದರು. ಸೋಲುವ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದ ಅವರು ಕರ್ರನ್​ ಬೌಲಿಂಗ್​ನಲ್ಲಿ ಲೆಗ್​ಸೈಡ್​ ಚೆಂಡನ್ನು ಆಡಲಾಗದೆ ಬೌಲ್ಡ್​ ಆಗಿದ್ದರು. ಇದೇ ಕಾರಣದಿಂದ ತಮ್ಮ ಡ್ರೆಸ್ಸಿಂಗ್ ರೂಮ್​ಗೆ ತೆರಳದೆ ಮೆಟ್ಟಿಲುಗಳ ಮೇಲೆ ನಿರಾಶೆಯಿಂದ ಕುಳಿತಿದ್ದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಿಳಿಸಿದ್ದಾರೆ.

"ನಾನು ಆ ಸಂದರ್ಭದಲ್ಲಿ ತುಂಬಾ ಭಾವುಕನಾಗಿದ್ದೆ. ನನಗೆ ಡ್ರೆಸ್ಸಿಂಗ್​ ರೂಮಿಗೆ ಹೇಗೆ ಹೋಗಬೇಕೆಂದು ಗೊತ್ತಾಗಲಿಲ್ಲ ಮತ್ತು ಆ ರೀತಿ ಚೆಂಡನ್ನು ಬಿಟ್ಟು ಬೌಲ್ಡ್​ ಆಗಿ ಔಟ್​ ಆಗಿದ್ದರಿಂದ ತಂಡದ ಸಹ ಆಟಗಾರರಿಗೆ ಮುಖ ತೋರಿಸಲು ಸಹಾ ಸಾಧ್ಯವಾಗಲಿಲ್ಲ. ನಿಗಮೆ ಗೊತ್ತಿದೆ ಆ ಸಂದರ್ಭದಲ್ಲಿ ನನ್ನ ಕೆಲಸ ಮುಗಿದಿರಲಿಲ್ಲ. ನಾನು ತಂಡವನ್ನು ಗೆಲುವಿನ ಗಡಿ ದಾಟಿಸಬೇಕೆಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಇದೀಗ ನನ್ನಲ್ಲಿ ಆ ಭಾವನೆ ಮತ್ತಷ್ಟು ಬಲಿಷ್ಠವಾಗಲು ನೆರವಾಗಿದೆ" ಎಂದು ರಸೆಲ್ ತಿಳಿಸಿದ್ದಾರೆ.

ನಾನು ಒಮ್ಮೆ ಅಲ್ಲಿದ್ದರೆ ಎಲ್ಲವೂ ಸಾಧ್ಯ ಎಂದು ನಿಮಗೆ ತಿಳಿದಿದೆ. ಹೌದು, ನಾನು ಈ ಹಿಂದೆ ಅಂತಹ ಹಲವಾರು ಸಂದರ್ಭಗಳಲ್ಲಿ ಯಶಸ್ವಿಯಾಗಿದ್ದೇನೆ. ಅಭಿಮಾನಿಗಳಿಗೂ ಗೊತ್ತಿದೆ. 20 ಎಸೆತಗಳಲ್ಲಿ 100 ರನ್​ಗಳಿದ್ದರೂ 20 ಸಿಕ್ಸರ್​ ಸಿಡಿಸುವ ಸಾಧ್ಯತೆ ಇರುತ್ತದೆ" ಎಂದು ವಿಂಡೀಸ್ ಆಲ್​ರೌಂಡರ್ ಹೇಳಿದ್ದಾರೆ.

ಇದನ್ನು ಓದಿ: ಕೆಕೆಆರ್ VS ಆರ್​ಆರ್​: ಗೆಲುವಿಗಾಗಿ ಎರಡು ತಂಡಗಳ ಮಧ್ಯ ಬಿಗ್​ ಫೈಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.