ETV Bharat / sports

'ಟೆಸ್ಟ್​​ ಕ್ರಿಕೆಟ್​​ನಲ್ಲಿ ನಾನು ನೋಡಿದ ಅತ್ಯುತ್ತಮ ಜೊತೆಯಾಟ': ಪಂತ್​ - ಜಡೇಜಾ ಆಟಕ್ಕೆ ಎಬಿಡಿ ಪ್ರಶಂಸೆ

author img

By

Published : Jul 4, 2022, 4:20 PM IST

AB de Villiers
AB de Villiers

ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಪಂತ್ ಹಾಗೂ ಜಡೇಜಾ ಉತ್ತಮ ಜೊತೆಯಾಟವಾಡಿದ್ದು, ಇದಕ್ಕೆ ಎಬಿ ಡಿವಿಲಿಯರ್ಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​​: ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಹಿಡಿತ ಸಾಧಿಸಿದ್ದು, ಮೊದಲ ಇನ್ನಿಂಗ್ಸ್​​ನಲ್ಲೇ ತಂಡದ ವಿಕೆಟ್ ಕೀಪರ್​ ರಿಷಭ್ ಪಂತ್ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದ್ದಾರೆ. ಇವರ ಆಟಕ್ಕೆ ಈಗಾಗಲೇ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್​ ಎಬಿ ಡಿವಿಲಿಯರ್ಸ್ ಕೂಡ ಟ್ವೀಟ್ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • Haven’t been home and missed most of the Cricket action. Finished watching the highlights now. That counterattack partnership from @RishabhPant17 and @imjadeja is right up there with the best I’ve ever seen in Test Cricket!

    — AB de Villiers (@ABdeVilliers17) July 4, 2022 " class="align-text-top noRightClick twitterSection" data=" ">

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗಿದಿಯಾಗಿರುವ ಐದನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ 98 ರನ್​​ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದ ವೇಳೆ ಒಂದಾದ ಪಂತ್​ - ಜಡೇಜಾ ಜೋಡಿ ದಾಖಲೆಯ 222ರನ್​ಗಳ ಜೊತೆಯಾಟವಾಡಿತು. ಜೊತೆಗೆ ಇಬ್ಬರು ಶತಕ ಸಿಡಿಸಿ ಮಿಂಚಿದ್ದಾರೆ. ಇವರ ಆಟಕ್ಕೆ ಫಿದಾ ಆಗಿರುವ ಎಬಿಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Rishabh Pant and Ravindra Jadeja performance
22ರನ್​​ಗಳ ಜೊತೆಯಾಟವಾಡಿರುವ ಪಂತ್​-ಜಡೇಜಾ

ಇದನ್ನೂ ಓದಿ: Eng vs Ind Test: ಪಂದ್ಯದ ಮೇಲೆ ಭಾರತ ಬಿಗಿ ಹಿಡಿತ; ಸ್ಲೆಡ್ಜ್​ ಮಾಡಿ ವಿರಾಟ್​ ಕೊಹ್ಲಿ ಟ್ರೋಲ್​

ಟೆಸ್ಟ್​ ಕ್ರಿಕೆಟ್​ನಲ್ಲಿ ನಾನು ಇಲ್ಲಿಯವರೆಗೆ ನೋಡಿದ ಅತ್ಯುತ್ತಮ ಜೊತೆಯಾಟ ಇದಾಗಿದೆ ಎಂದಿರುವ ಅವರು, 'ಮನೆಯಲ್ಲಿ ಇಲ್ಲದ ಕಾರಣ ಈ ಟೆಸ್ಟ್​ ನೋಡುವುದನ್ನ ತಪ್ಪಿಸಿಕೊಂಡಿದ್ದೇನೆ. ಆದರೆ, ಇದೀಗ ಹೈಲೈಟ್ಸ್​ ನೋಡಿದ್ದು, ರಿಷಭ್ ಪಂತ್​ ಮತ್ತು ರವೀಂದ್ರ ಜಡೇಜಾ ಜೊತೆಯಾಟ ಟೆಸ್ಟ್​ ಕ್ರಿಕೆಟ್​ನಲ್ಲಿ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್​​ ಆಗಿದೆ' ಎಂದಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪಂತ್​ 146 ರನ್​​ಗಳಿಕೆ ಮಾಡಿದ್ರೆ, ಜಡೇಜಾ 104ರನ್​ಗಳಿಸಿದ್ದಾರೆ. ಈ ಮೂಲಕ ಭಾರತ 416ರನ್​​ಗಳಿಕೆ ಮಾಡಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ 132ರನ್​​​ಗಳ ಮುನ್ನಡೆ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.