ETV Bharat / sports

ಟೋಕಿಯೋ ಒಲಿಂಪಿಕ್ ನನ್ನ ಅಂತಿಮ ಗುರಿ​ ಎಂದ ಚಿನ್ನದ ಬೆಡಗಿ ಸಿಂಧು

author img

By

Published : Aug 27, 2019, 1:55 PM IST

PV Sindhu

24 ವರ್ಷದ ಪಿವಿ ಸಿಂಧು ಜಪಾನ್​ನ ನಜೋಮಿ ಒಕುಹರ ವಿರುದ್ಧ 21-7,21-7 ರ ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ದೇಶಕ್ಕೆ ಕೀರ್ತಿ ತಂದಿದ್ದರು. ಚಿನ್ನ ಗೆದ್ದು ಭಾರತಕ್ಕೆ ಆಗಿಮಿಸಿರುವ ಯು ಆಟಗಾರ್ತಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ದೊರೆತಿದೆ.

ನವದೆಹಲಿ​: ಬ್ಯಾಡ್ಮಿಂಟನ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾದ ಪಿವಿ ಸಿಂಧು ತಮ್ಮ ಮುಂದಿನ ಗುರಿ 2020ರ ಒಲಿಂಪಿಕ್​ ಎಂದು ತಿಳಿಸಿದ್ದಾರೆ.

24 ವರ್ಷದ ಪಿವಿ ಸಿಂಧು ಜಪಾನ್​ ನಜೋಮಿ ಒಕುಹರ ವಿರುದ್ಧ 21-7,21-7 ರ ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ದೇಶಕ್ಕೆ ಕೀರ್ತಿ ತಂದಿದ್ದರು. ಚಿನ್ನ ಗೆದ್ದು ಭಾರತಕ್ಕೆ ಆಗಿಮಿಸಿರುವ ಯು ಆಟಗಾರ್ತಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ದೊರೆತಿದೆ.

ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಸಿಂಧು, ತಮ್ಮ ಸಾಧನೆಗೆ ಕಾರಣವಾದ ಭಾರತ ತಂಡದ ಕೋಚ್​ ಗೋಪಿಚಂದ್​ ಹಾಗೂ ತಮ್ಮ ವೈಯಕ್ತಿಕ ಕೋಚ್​ ಕಿಮ್​ ಜಿ ಹುಯ್ನ್​ಗೆ ಧನ್ಯವಾದ ತಿಳಿಸಿದರು.

ಪಿ ವಿ ಸಿಂಧು

2017 ಹಾಗೂ 2018ರಲ್ಲಿ ಇದೇ ಟೂರ್ನಿಯಲ್ಲಿ ಫೈನಲ್​ ತಲುಪಿದರೂ ನನಗೆ ಚಿನ್ನ ಗೆಲ್ಲಲಾಗಿರಲಿಲ್ಲ. ಆದರೆ, ಈ ಬಾರಿ ಚಾಂಪಿಯನ್​ ಆಗುವ ಮೂಲಕ ನನ್ನ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಒಲಿಂಪಿಕ್​ ಬೆಳ್ಳಿಪದಕ ವಿಜೇತೆ ಸಿಂಧು ಸಂತಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್​ನಲ್ಲಿ ಬೆಳ್ಳಿ ಅಥವಾ ಇದೀಗ ಚಿನ್ನ ಗೆದ್ದಿರುವುದರಲ್ಲಿ ಯಾವುದು ವಿಶೇಷ ಎಂದು ಕೇಳಿದ್ದಕ್ಕೆ, ಸಿಂದು ಹಲವಾರು ಜನರು ನನಗೆ ಇದನ್ನೇ ಕೇಳುತ್ತಾರೆ ಎಂದು ನನಗೆ ತಿಳಿದಿದೆ. ಆದರೆ, ಎಲ್ಲ ಟೂರ್ನಮೆಂಟ್​ಗಳು ಬೇರೆ ಬೇರೆ ರೀತಿಯ ಅನುಭವವಾಗುತ್ತದೆ. ಎರಡು ನನಗೆ ವಿಶೇಷ ಎಂದು ತಿಳಿಸಿದರು.

ಇನ್ನು ನಿಮ್ಮ ಮುಂದಿನ ಗುರಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಹಲವಾರು ಸೂಪರ್​ ಸೀರಿಸ್​ ಟೂರ್ನಮೆಂಟ್​ಗಳು ನನ್ನ ಮುಂದಿವೆ. ಹಂತ ಹಂತವಾಗಿ ಮುಂದುವರಿಯುತ್ತೇನೆ. ಟೋಕಿಯೋ ಒಲಿಂಪಿಕ್​ ನನ್ನ ಅಂತಿಮ ಗುರಿ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.