ETV Bharat / sports

BWF World Tour Finals: ಯಮಗುಚಿಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದ ಸಿಂಧು

author img

By

Published : Dec 4, 2021, 5:29 PM IST

Updated : Dec 5, 2021, 3:12 PM IST

BWF World Tour Finals
ವಿಶ್ವ ಟೂರ್​ ಫೈನಲ್ಸ್​

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಬಲ್ ಒಲಿಂಪಿಕ್ ಮೆಡಲಿಸ್ಟ್​ ಸಿಂಧು, ಯಮಗುಚಿ ವಿರುದ್ಧ ನಡೆದ ರೋಚಕ ಕದನದಲ್ಲಿ 21-15, 15-21, 21-19 ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದರು. ಈ ಗೆಲುವಿನ ಮೂಲಕ ವಿಶ್ವದ 3ನೇ ಶ್ರೇಯಾಂಕದ ಜಪಾನ್ ಆಟಗಾರ್ತಿಯ ವಿರುದ್ಧ 13-8ರಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಂಡರು.

ಬಾಲಿ(ಇಂಡೋನೇಷಿಯಾ):ಭಾರತದ ಸ್ಟಾರ್ ಶಟ್ಲರ್​ ಪಿವಿ ಸಿಂಧು ಜಪಾನ್​ನ ಅಕಾನೆ ಯಮಗುಚಿಗೆ ಸೋಲುಣಿಸಿ BWF ವಿಶ್ವ ಟೂರ್​ ಫೈನಲ್ಸ್​ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಬಲ್ ಒಲಿಂಪಿಕ್ ಮೆಡಲಿಸ್ಟ್​ ಸಿಂಧು, ಯಮಗುಚಿ ವಿರುದ್ಧ ನಡೆದ ರೋಚಕ ಕದನದಲ್ಲಿ 21-15, 15-21, 21-19 ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದರು. ಈ ಗೆಲುವಿನ ಮೂಲಕ ವಿಶ್ವದ 3ನೇ ಶ್ರೇಯಾಂಕದ ಜಪಾನ್ ಆಟಗಾರ್ತಿಯ ವಿರುದ್ಧ 13-8ರಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡರು.

ವರ್ಷದ ಕೊನೆಯಲ್ಲಿ ನಡೆಯುವ ಟೂರ್ನಮೆಂಟ್​ನಲ್ಲಿ ಸಿಂಧುಗೆ ಇದು 3ನೇ ಫೈನಲ್ ಆಗಿದೆ. 2018ರಲ್ಲಿ ಚಾಂಪಿಯನ್ ಆಗುವ ಮೂಲಕ, ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದರು. ಹಾಲಿ ವಿಶ್ವ ಚಾಂಪಿಯನ್​ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಆನ್​ ಸೆಯಾಂಗ್​ ವಿರುದ್ಧ ಕಾದಾಡಲಿದ್ದಾರೆ.

ಟೋಕಿಯೋದಲ್ಲಿ ಪದಕ ಗೆದ್ದ ನಂತರ ಸಿಂಧು ಅದ್ಭುತ ಫಾರ್ಮ್​ನಲ್ಲಿದ್ದಾರೆ. ಅವರು ಫ್ರೆಂಚ್ ಓಪನ್, ಇಂಡೋನೇಷಿಯಾ ಓಪನ್ ಮತ್ತು ಇಂಡೋನೇಷಿಯಾ ಮಾಸ್ಟರ್ಸ್ ಟೂರ್ನಮೆಂಟ್​ಗಳಲ್ಲಿ ಸೆಮಿಫೈನಲ್​ ಪ್ರವೇಶಿಸಿ ಸೋಲು ಕಂಡಿದ್ದರು. ಮಾರ್ಚ್​ನಲ್ಲಿ ಸ್ವಿಸ್​ ಓಪನ್​ನಲ್ಲಿ ರನ್ನರ್​ ಅಪ್​ ಆಗಿದ್ದ ಅವರೂ ಇದೀಗ ಟೂರ್​ ಫೈನಲ್ಸ್ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಳ್ಳುವರೇ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

Last Updated :Dec 5, 2021, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.