ETV Bharat / sports

'ಸುವರ್ಣ' ಸಿಂಧು ನಿವಾಸದಲ್ಲಿ ಹಬ್ಬದ ಸಂಭ್ರಮ... ರಾಷ್ಟ್ರಪತಿ, ಪ್ರಧಾನಿಯಿಂದ ಅಭಿನಂದನೆ

author img

By

Published : Aug 25, 2019, 8:41 PM IST

BWF World Championships: Sindhu creates history

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿರುವ ಶಟ್ಲರ್ ಪಿ.ವಿ.ಸಿಂಧುಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನವದೆಹಲಿ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿರುವ ಶಟ್ಲರ್ ಪಿ.ವಿ.ಸಿಂಧುಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಪ್ರಧಾನಿ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಹೇಳಿದ್ದಾರೆ.

  • Congratulations @Pvsindhu1 for winning the BWF World Championship. This is a proud moment for the entire country.

    Your magic on the court, hardwork and perseverance enthralls and inspires millions. Best wishes World Champion for all your future battles #PresidentKovind

    — President of India (@rashtrapatibhvn) August 25, 2019 " class="align-text-top noRightClick twitterSection" data=" ">

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿರುವ ಸಿಂಧು ಅವರ ಹೈದರಾಬಾದ್​​ನ ನಿವಾಸದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಅವರ ತಾಯಿ ಪಿ.ವಿಜಯಾ ಅವರು ತಮ್ಮ ಕುಟುಂಬ ಸದಸ್ಯರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.

  • The stupendously talented @Pvsindhu1 makes India proud again!

    Congratulations to her for winning the Gold at the BWF World Championships. The passion and dedication with which she’s pursued badminton is inspiring.

    PV Sindhu’s success will inspire generations of players.

    — Narendra Modi (@narendramodi) August 25, 2019 " class="align-text-top noRightClick twitterSection" data=" ">

ಹೈದರಾಬಾದ್​ನಲ್ಲಿ ಸಿಂಧು ತಾಯಿ ಪಿ.ವಿಜಯಾ ಮಾತನಾಡಿ, ಸಿಂಧು ಈ ಟೂರ್ನಿಗಾಗಿ ಸಾಕಷ್ಟು ಶ್ರಮ ಹಾಕಿದ್ದರು. ಈ ಅದ್ಭುತ ಕ್ಷಣಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆವು. ತುಂಬಾ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಂಧುಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಟ್ವಿಟರ್​ ಮೂಲಕ ಮೋದಿ ಪಿ.ವಿ.ಸಿಂಧು ಅವರ ಯಶಸ್ಸು ಯುವ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ. ನಿನ್ನ ಕಠಿಣ ಪರಿಶ್ರಮ ಲಕ್ಷಾಂತರ ಮಂದಿಗೆ ಪ್ರೇರೇಪಣೆ ನೀಡುತ್ತದೆ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೆ, ಆಂಧ್ರದ ಸಿಎಂ ಜಗನ್​ ಮೋಹನ್​ ರೆಡ್ಡಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸಚಿವ ಪ್ರಕಾಶ್​ ಜಾವಡೇಕರ್​ ಟ್ವಿಟರ್​ ಮೂಲಕ ಶುಭಾಶಯ ಕೋರಿದ್ದಾರೆ.

Intro:Body:

national


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.