ETV Bharat / sitara

ಕುತೂಹಲ ಹೆಚ್ಚಿಸಿದ ಬಿಗ್​ಬಾಸ್ ಸ್ಪರ್ಧಿಗಳು: ಪ್ರೋಮೋದಲ್ಲಿ ಕಾಣಿಸಿಕೊಂಡ ತೇಜಸ್ವಿ, ಆಕಾಸಾ

author img

By

Published : Oct 1, 2021, 8:41 AM IST

Tejasswi, Akasa appear in latest 'Bigg Boss 15' promo
ಬಿಗ್​ಬಾಸ್ ಸ್ಪರ್ಧಿಗಳ ಬಗ್ಗೆ ಕುತೂಹಲ: ಪ್ರೋಮೋದಲ್ಲಿ ಕಾಣಿಸಿಕೊಂಡ ತೇಜಸ್ವಿ, ಆಕಾಸಾ

ಹಿಂದಿ ಭಾಷೆಯ 15ನೇ ಆವೃತ್ತಿಯ ಬಿಗ್​ಬಾಸ್​ ಹೊಸ ಸೀಸನ್ ಆರಂಭವಾಗಲಿದ್ದು, ಈಗಾಗಲೇ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ತೇಜಸ್ವಿ, ಗಾಯಕಿ ಆಕಾಸಾ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯ ಬಿಗ್​ಬಾಸ್​ ಹೊಸ ಸೀಸನ್ ಅಕ್ಟೋಬರ್ 2ರಿಂದ ಆರಂಭವಾಗಲಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್​ಬಾಸ್ 15ನೇ ಆವೃತ್ತಿಯ ಪ್ರೋಮೋ ಬಿಡುಗಡೆಯಾಗಿದೆ.

ಬಿಗ್ ಬಾಸ್ ಆರಂಭವಾಗಲು ಕೇವಲ ಎರಡು ದಿನಗಳ ಮೊದಲೇ ವೂಟ್ ಸೆಲೆಕ್ಟ್​​ನಲ್ಲಿ ಪ್ರೋಮೋ ಬಿಡುಗಡೆಯಾಗಿದ್ದು, ಕೆಲವು ಸ್ಪರ್ಧಿಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಪ್ರೋಮೋದಲ್ಲಿ ತೇಜಸ್ವಿ ಮತ್ತು ಅಪ್ಸರಾ ಕಾಣಿಸಿಕೊಂಡಿದ್ದಾರೆ.

ಬಿಗ್​ಬಾಸ್ 15 ಆವೃತ್ತಿಯ ಪ್ರೋಮೋ ಕುರಿತ ಮಾಹಿತಿ

ಕಲರ್ಸ್​ ಚಾನೆಲ್ ಅಕ್ಟೋಬರ್​ 2ರಂದೇ ಎಲ್ಲ ಸ್ಪರ್ಧಿಗಳ ಮಾಹಿತಿ ಬಹಿರಂಗಪಡಿಸಲಿದೆ. ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿದೆ. ಸದ್ಯದ ಮಾಹಿತಿ ಪ್ರಕಾರ, ಕರಣ್​​, ಶಮಿತಾ, ನಿಶಾಂತ್​​, ತೇಜಸ್ವಿನಿ, ಉಮರ್​, ಪ್ರತೀಕ್​, ಸಿಂಬಾ, ಅಫ್ಸಾನ, ಡೋನಾಲ್​, ಆಕಾಸ ಅವರು ದೊಡ್ಡಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಆರಾಮ್ಸೆ ಆಲ್ಬಂ ಹಾಡಿಗೆ ಧ್ವನಿಯಾದ ವಿಜಯ್​​ ಪ್ರಕಾಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.