ETV Bharat / sitara

ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದ್ರು ಇಶಿತಾ

author img

By

Published : Feb 1, 2020, 4:16 AM IST

Updated : Feb 1, 2020, 7:44 AM IST

ishita
ಇಶಿತ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತುತ್ತಾ ಮುತ್ತಾ ಸೀಸನ್ 2 ರಲ್ಲಿ ಸೆಲಬ್ರಿಟಿಗಳು ಬಂದು ಮಸ್ತ್ ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ವಾರ ಅಗ್ನಿಸಾಕ್ಷಿ ಖ್ಯಾತಿಯ ಮಾಯ ತುತ್ತಾಮುತ್ತಾ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಬರುತ್ತಿದ್ದಾರೆ. ​​​​​​​

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತುತ್ತಾ ಮುತ್ತಾ ಸೀಸನ್ 2 ರಲ್ಲಿ ಸೆಲಬ್ರಿಟಿಗಳು ಬಂದು ಮಸ್ತ್ ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ವಾರ ಅಗ್ನಿಸಾಕ್ಷಿ ಖ್ಯಾತಿಯ ಮಾಯ ತುತ್ತಾಮುತ್ತಾ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಬರುತ್ತಿದ್ದಾರೆ.

ishita
ಅಗ್ನಿಸಾಕ್ಷಿ ಮಾಯ ಪಾತ್ರದಲ್ಲಿ ನಟಿಸಿದ್ದ ಇಶಿತ

ಅಗ್ನಿಸಾಕ್ಷಿ ಖ್ಯಾತಿಯ ಮಾಯಪಾತ್ರಕ್ಕೆ ಜೀವ ತುಂಬಿದ್ದ ಇಶಿತ ವರ್ಷ ಕಳೆದ ವರ್ಷ ಕೊರಿಯೋಗ್ರಫರ್ ಮುರುಗನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ನಂತರ ಎಲ್ಲೂ ಕಾಣಿಸಿಕೊಂಡಿರದ ಈ ಜೋಡಿ ಇದೀಗ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇಶಿತ ವರ್ಷ ತಮ್ಮ ಪತಿ ಮುರುಗನ್ ಮತ್ತು ಅಮ್ಮನೊಂದಿಗೆ ತುತ್ತಾ ಮುತ್ತಾ ವೇದಿಕೆಗೆ ಬಂದಿದ್ದು ಸಾಕಷ್ಟು ಎಂಜಾಯ್ ಮಾಡಿದ್ದಾರೆ.

ishita
ಪತಿ ಜೊತೆ ಇಶಿತ

'ತುತ್ತಾ ಮುತ್ತಾ ಒಂದು ಅದ್ಭುತವಾದ ಶೋ ಎಂದರೆ ತಪ್ಪಲ್ಲ. ಮಾತ್ರವಲ್ಲ ನನ್ನ ಪಾಲಿಗೆ ಇದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಶೋ ಕೂಡಾ ಹೌದು. ಮಿಸ್ ಆಗಿದ್ದ ನಾನು ಮಿಸೆಸ್ ಆದ ಮೇಲೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಗಂಡ ಮತ್ತು ಅಮ್ಮನ ಜೊತೆ ತೆರೆ ಮೇಲೆ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಎಲ್ಲದಕ್ಕಿಂತ ಸಂತಸದ ವಿಚಾರವೆಂದರೆ ಸುಮಾರು 8 ವರ್ಷಗಳ ಸುದೀರ್ಘ ಗ್ಯಾಪ್ ನಂತರ ನನ್ನ ಅಮ್ಮ ಕ್ಯಾಮೆರಾ ಮುಂದೆ ಬಂದಿದ್ದಾರೆ. ತುಂಬಾ ಸಂತಸ ವಾಯಿತು' ಎಂದು ಇಶಿತ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ishita
ಅಮ್ಮನೊಂದಿಗೆ ಇಶಿತ
Last Updated :Feb 1, 2020, 7:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.