ETV Bharat / sitara

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ... 'ವಿಕ್ರಾಂತ್ ರೋಣ' ಬಿಡುಗಡೆಗೆ ಮುಹೂರ್ತ ಫಿಕ್ಸ್!

author img

By

Published : Apr 15, 2021, 1:49 PM IST

vikrant-rona-movie-release-date-announced
'ವಿಕ್ರಾಂತ್ ರೋಣ' ಬಿಡುಗಡೆಗೆ ಮುಹೂರ್ತ ಫಿಕ್ಸ್

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ 'ವಿಕ್ರಾಂತ್ ರೋಣ' ಚಿತ್ರ ಬಿಡುಗಡೆ ಯಾವಾಗ ಅಂತಾ ಕಾಯುತ್ತಿದ್ದ ಫ್ಯಾನ್ಸ್​ಗೆ ಸಿಹಿ ಸುದ್ದಿ ಸಿಕ್ಕಿದೆ. ಕೊರೊನಾ ಸಮಸ್ಯೆಯ ನಡುವೆಯೂ ವಿಕ್ರಾಂತ್ ರೋಣ ಚಿತ್ರದ ಆರ್ಭಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಆಗಸ್ಟ್ 19ರಂದು ಬಹುನಿರೀಕ್ಷಿತ ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಅಂತ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕೊರೊನಾ ಲಾಕ್​ಡೌನ್ ಸಾಧ್ಯತೆ ಹಾಗೂ ಚಿತ್ರಮಂದಿರದ ಶೇ.50ರಷ್ಟು ಮಾತ್ರ ಅವಕಾಶವಿರುವ ನಡುವೆಯೂ ಕಿಚ್ಚ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಸಿನಿರಂಗದ ಇತಿಹಾಸದಲ್ಲೇ ಮೊದಲ ZOMBIE ಸಿನಿಮಾ!

'ವಿಕ್ರಾಂತ್ ರೋಣ'ಗೆ ಅನೂಪ್​ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ​ಸಿನಿಮಾದ ಟೈಟಲ್‌ ಪೋಸ್ಟರ್​ ಲಾಂಚ್ ಮಾಡಲಾಗಿತ್ತು. ಕಿಚ್ಚ, ವಿಕ್ರಾಂತ್ ರೋಣನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿ ದೊಡ್ಡ ಕಲಾವಿದರ ಬಳಗ ಈ ಚಿತ್ರದಲ್ಲಿದ್ದಾರೆ

  • After enjoying the process of preparations and it's making,,, its now time for a new excitement.
    We the team of #VikrantRona is all excited and happy to mark August 19th 2021 for its theatrical release.
    🥂🤗 pic.twitter.com/V7Rm5bWv17

    — Kichcha Sudeepa (@KicchaSudeep) April 15, 2021 " class="align-text-top noRightClick twitterSection" data=" ">

ನಿರ್ಮಾಪಕ ಜಾಕ್ ಮಂಜು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ, 3ಡಿ ವರ್ಷನ್ ಕೂಡ ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಇದನ್ನೂ ಓದಿ: 'ನಮ್ಮ ವಿದ್ಯಾರ್ಥಿಗಳಿಗೆ ಸವಾರಿ'..ಸೈಕಲ್​ ಏರಿ ಸಿನಿಮಾ ಶೂಟಿಂಗ್​ಗೆ ಬಂದ ಸೋನು ಸೂದ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.