ETV Bharat / sitara

ಉಪೇಂದ್ರ, ವೇದಿಕಾ ಅಭಿನಯದ 'ಹೋಮ್‌‌ ಮಿನಿಸ್ಟರ್' ಬಿಡುಗಡೆ ದಿನಾಂಕ ಫಿಕ್ಸ್‌

author img

By

Published : Mar 4, 2022, 6:42 PM IST

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಮ್‌‌ ಮಿನಿಸ್ಟರ್ ಚಿತ್ರ ಏಪ್ರಿಲ್​ 1ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Upendra Vidihkia Nataniya Homeminister Movie Release Date Fix
ರಿಯಲ್ ಸ್ಟಾರ್ ಹಾಗು ವೇದಿಕಾ ಅಭಿನಯದ ಹೋಮ್‌‌ ಮಿನಿಸ್ಟರ್ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ 'ಹೋಮ್ ಮಿನಿಸ್ಟರ್' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ಬಿಡುಗಡೆ ದಿನಾಂಕವುಳ್ಳ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಉಪೇಂದ್ರ, ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ಹೋಂ ಮಿನಿಸ್ಟರ್ ಚಿತ್ರ ಗೆಲ್ಲಬೇಕು ಎಂದರು.

Upendra Vidihkia Nataniya Homeminister Movie Release Date Fix

ನಾಯಕಿ ನಟಿ ವೇದಿಕಾ ಮಾತನಾಡಿ, ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ತಂದಿದೆ. ಜರ್ನಲಿಸ್ಟ್​ ಪಾತ್ರವನ್ನು ಸಿನಿಮಾದಲ್ಲಿ ನಿರ್ವಹಿಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸುಜಯ್ ಕೆ ಶ್ರೀಹರಿ ನಿರ್ದೇಶನದ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದಾರೆ. ಕುಂಟುನಿ ಎಸ್. ಕುಮಾರ್ ಛಾಯಾಗ್ರಹಣ ಹಾಗೂ ಅಂಟೋನಿ ಅವರ ಸಂಕಲನ ಚಿತ್ರಕ್ಕಿದೆ. ತೆಲುಗಿನ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವೀರಮಾಚನೆನಿ ನಿರ್ಮಾಣ ಮಾಡಿರುವ ಹೋಮ್‌ ಮಿನಿಸ್ಟರ್ ಏಪ್ರಿಲ್‌‌ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ವಾರ್ಷಿಕ 200 ಚಿತ್ರಗಳಿಗೆ ಬಜೆಟ್‌ನಲ್ಲಿ ಸಹಾಯಧನ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.