ETV Bharat / sitara

ವಕೀಲರ ಅವಹೇಳನ ಆರೋಪ....'ಗಿರಿಗಿಟ್' ತುಳು ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ

author img

By

Published : Sep 12, 2019, 2:59 PM IST

'ಗಿರಿಗಿಟ್'

ಆರ್​​ಜೆ ರೂಪೇಶ್ ಶೆಟ್ಟಿ ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಗಿರಿಗಿಟ್' ಸಿನಿಮಾದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮಂಗಳೂರು 5ನೇ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಸಿನಿಮಾಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು: ರೂಪೇಶ್ ಶೆಟ್ಟಿ, ರಾಕೇಶ್ ಕದ್ರಿ ಜಂಟಿಯಾಗಿ ನಿರ್ದೇಶಿಸಿರುವ ತುಳು ಸಿನಿಮಾ 'ಗಿರಿಗಿಟ್' ಸಿನಿಮಾ ಪ್ರದರ್ಶನಕ್ಕೆ ಮಂಗಳೂರು 5ನೇ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

girigit
'ಗಿರಿಗಿಟ್' ಸಿನಿಮಾ ದೃಶ್ಯ

ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎಂದು ಆರೋಪ ಮಾಡಲಾಗಿದೆ. ಹಾಸ್ಯ ನಟನೋರ್ವ ವಕೀಲರಿಗೆ ಅವಮಾನವಾಗುವಂತೆ ಅಭಿನಯಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ವಕೀಲರ ಸಂಘ ನಿನ್ನೆ ಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ಇಂದು ನ್ಯಾಯಾಧೀಶರು ಸಿನಿಮಾಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ಆರ್​ಜೆ ರೂಪೇಶ್ ಶೆಟ್ಟಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ನವೀನ್ ಡಿ. ಪಡೀಲು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಮಂಜುನಾಥ್ ಅತ್ತಾವರ್ 'ಗಿರಿಗಿಟ್' ಸಿನಿಮಾದ ನಿರ್ಮಾಪಕರು.

Intro:ಮಂಗಳೂರು: ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಆರೋಪದ ಹಿನ್ನೆಲೆಯಲ್ಲಿ ಗಿರಿಗಿಟ್ ತುಳು ಚಲನಚಿತ್ರ ಪ್ರದರ್ಶನಕ್ಕೆ 5ನೇ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಚಲನಚಿತ್ರದಲ್ಲಿ ಹಾಸ್ಯ ನಟನೋರ್ವ
ವಕೀಲರ ಬಗ್ಗೆ ಹೇಳುವ ಅವಹೇಳನಕಾರಿ ಸಂಭಾಷಣೆಯಿಂದ ಗರಂ ಅಗಿದ್ದ ವಕೀಲರು, ವಕೀಲರ ಸಂಘದ ಮೂಲಕ ನ್ಯಾಯಾಲಯದ ಮೆಟ್ಟಿಲೇರಿತ್ತು.

Body:ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸಿನಿಮಾಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಗಿರ್ ಗಿಟ್ ಚಲನಚಿತ್ರ ಇತ್ತೀಚೆಗೆ ಕರಾವಳಿ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶಗೊಳ್ಳುತ್ತಿದೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.