ETV Bharat / sitara

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಆತ್ಮಹತ್ಯೆ ಪ್ರಕರಣಗಳ ಕಾಲಾನುಕ್ರಮ..

author img

By

Published : Sep 30, 2021, 10:22 PM IST

Updated : Oct 1, 2021, 2:07 PM IST

sandalwood-suicide-cases
ಆತ್ಮಹತ್ಯೆ

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ನಟ-ನಟಿಯರು ವೈಯಕ್ತಿಕ ಹಾಗೂ ಹಣಕಾಸಿನ ತೊಂದರೆಗೆ ಸಿಲುಕಿ ಆತ್ಮಹತ್ಯೆಯ ದಾರಿ ತುಳಿದ ಅನೇಕ ನಿದರ್ಶನಗಳಿವೆ. ಈ ದುರಂತ ಘಟನೆಗಳ ಕಾಲಾನುಕ್ರಮ ಇಲ್ಲಿದೆ..

ಇತ್ತೀಚೆಗೆ ಸಾಕಷ್ಟು ತಾರೆಯರು ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಆದರೆ, ಅವರಲ್ಲಿ ಹೆಚ್ಚಿನವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನರಂಜನಾ ಉದ್ಯಮವು ನಿರುದ್ಯೋಗದ ಹೊಡೆತ ಎದುರಿಸಿತು. ಇದು ಕೆಲವರಿಗೆ ಖಿನ್ನತೆಗೂ ಕಾರಣವಾಯಿತು. ಕೊರೊನಾ ಸಮಯದಲ್ಲಿ ಭಯ, ಮಾನಸಿಕ ಆರೋಗ್ಯ, ಪ್ರೀತಿಯ ವೈಫಲ್ಯಗಳು ಆತ್ಮಹತ್ಯೆಗೆ ಕಾರಣವಾಗಿವೆ. ಇಂತಹದ್ದೇ ಕೆಲವು ಪ್ರಕರಣಗಳು ಇಲ್ಲಿವೆ.

ಅಕ್ಟೋಬರ್ 30, 2021:

ಕನ್ನಡ ಕಿರುತೆರೆ ನಟಿ ಸೌಜನ್ಯ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಆಕೆಯ ಮನೆಯಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದ ನಾಲ್ಕು ಪುಟಗಳ ಡೆತ್ ನೋಟ್ ಸಿಕ್ಕಿದೆ. ಹದಗೆಡುತ್ತಿರುವ ಆರೋಗ್ಯ ಮತ್ತು ಉದ್ಯಮದಲ್ಲಿನ ಪ್ರಸ್ತುತ ವಾತಾವರಣದಿಂದಾಗಿ ಅವರು ಕಳೆದ ಹಲವು ದಿನಗಳಿಂದ ತೊಂದರೆಗೀಡಾಗಿದ್ದರು ಎಂಬುದು ಡೆತ್​ನೋಟ್​ನಿಂದ ತಿಳಿದು ಬರುತ್ತದೆ.

Sandalwood suicide cases
ಸೌಜನ್ಯ

ಜನವರಿ 25, 2021:

ಕನ್ನಡದ ನಟಿ ಜಯಶ್ರೀ ರಾಮಯ್ಯ ಜನವರಿ 25, 2021ರಂದು ಶವವಾಗಿ ಪತ್ತೆಯಾದರು. ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ದರು. ಕೌಟುಂಬಿಕ ಸಮಸ್ಯೆಗಳಿಂದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಶಂಕಿಸಲಾಗಿದೆ.

ಮೇ 28, 2020:

29 ವರ್ಷದ ನಟಿ ಚಂದನಾ ಬೆಂಗಳೂರಿನ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇ 28, 2020 ರಂದು ನಡೆದ ಘಟನೆ ಜೂನ್ 1 ರಂದು ವರದಿಯಾಗಿತ್ತು. ಕಳೆದ ಐದು ವರ್ಷಗಳಿಂದ ದಿನೇಶ್ ಎಂಬ ವ್ಯಕ್ತಿ ಜೊತೆ ವಾಸವಾಗಿದ್ದ ಅವರು ಅಸಮಾಧಾನಗೊಂಡಿದ್ದರು ಎಂಬುದು ತಿಳಿದುಬಂದಿದೆ.

ಫೆಬ್ರವರಿ 17, 2020:

ಸ್ಯಾಂಡಲ್‌ವುಡ್ ಸಿಂಗರ್ ಸುಶ್ಮಿತಾ ಫೆಬ್ರವರಿ 17, 2020ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಕಿರುಕುಳದಿಂದ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಆತ್ಮಹತ್ಯೆಗೆ ಶರಣಾಗುವ ಮೊದಲು ತನ್ನ ತಾಯಿಗೆ ಒಂದು ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದರು.

Sandalwood suicide cases
ಸುಶ್ಮಿತಾ

ಜುಲೈ 07, 2020:

ಕನ್ನಡ ನಟ ಸುಶೀಲ್ ಗೌಡ ಜುಲೈ 07, 2020ರಂದು ಆತ್ಮಹತ್ಯೆಯಿಂದ ಮೃತಪಟ್ಟರು. ಒಬ್ಬ ನಟನಲ್ಲದೆ, ಫಿಟ್ನೆಸ್ ತರಬೇತುದಾರರೂ ಆಗಿದ್ದರು. ಸುಶೀಲ್ ಆತ್ಮಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

ಅಕ್ಟೋಬರ್ 9, 2012:

ಕನ್ನಡ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಖ್ಯಾತ ನಟಿ ಹೇಮಾಶ್ರೀ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಸಣ್ಣ ಪರದೆಯ ನಟಿ ಕ್ಲೋರೊಫಾರ್ಮ್‌ಗೆ ಹೆಚ್ಚು ಒಡ್ಡಿಕೊಂಡ ಕಾರಣ ಮೃತಪಟ್ಟರು. ನಟಿ ತನ್ನ ದಾಂಪತ್ಯ ಜೀವನದಲ್ಲಿ ಅತೃಪ್ತಿ ಹೊಂದಿದ್ದರು ಎಂದು ಹೇಳಲಾಗಿದೆ.

Sandalwood suicide cases
ಜಯಶ್ರೀ ರಾಮಯ್ಯ

ಸೆಪ್ಟೆಂಬರ್ 23, 1996:

ನಟಿ ವಿಜಯಲಕ್ಷ್ಮಿ ಅವರು ಸಿಲ್ಕ್ ಸ್ಮಿತಾ ಎಂದು ಪ್ರಸಿದ್ಧರಾಗಿದ್ದರು. ಈ ನಟಿ 23 ಸೆಪ್ಟೆಂಬರ್ 1996 ರಂದು ತನ್ನ ಚೆನ್ನೈ ಅಪಾರ್ಟ್​ಮೆಂಟ್​ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 4 ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಟಿ ಖಿನ್ನತೆಯಿಂದ ಬಳಲುತ್ತಿದ್ದರು. ಸಾಯುವಾಗ ಆಕೆಯ ವಯಸ್ಸು ಕೇವಲ 35 ಆಗಿತ್ತು.

ರಾಜೇಶ್ ಆತ್ಮಹತ್ಯೆ:

ಆರಂಭದಲ್ಲಿ ಹಳ್ಳಿಯಿಂದ ಬಂದ ರಾಜೇಶ್ ರಿಯಾಲಿಟಿ ಶೋ ಗೆದ್ದು ಜನಪ್ರಿಯರಾದರು. ನಂತರ ಇವರನ್ನು ಸ್ಯಾಂಡಲ್ ವುಡ್ ಸೆಳೆಯಿತು. ರಿಯಾಲಿಟಿ ಶೋ ವಿಜೇತರು ಅಂತಿಮವಾಗಿ ಕೆಲವು ಕೊಡುಗೆಗಳನ್ನು ಪಡೆದರು. ಆದರೆ, ರಾಜೇಶ್ ಮಾತ್ರ ಮನೆಯ ಮೂರನೇ ಮಹಡಿಯಲ್ಲಿರುವ ಬಾಲ್ಕನಿಯಿಂದ ಜಿಗಿದು ತಮ್ಮ ಜೀವನವನ್ನು ಕೊನೆಗೊಳಿಸಿದರು. ಘಟನೆಯ ನಂತರ ನಟ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು.

ಮೇ 30, 1979:

ಮಿನುಗು ತಾರೆ ಕಲ್ಪನಾ ಸ್ಯಾಂಡಲ್ ವುಡ್​ನಲ್ಲಿ ಜನಪ್ರಿಯ ನಟಿ. ಇವರು ಮೇ 30, 1979 ರಂದು ನಿಧನರಾದರು. ಆಗ ಅವರಿಗೆ ಕೇವಲ 37 ವರ್ಷ. ನಟಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಮಾನಸಿಕವಾಗಿ ವಿಚಲಿತರಾಗಿದ್ದರು ಎನ್ನಲಾಗಿದೆ.

Sandalwood suicide cases
ಮಿನುಗು ತಾರೆ ಕಲ್ಪನಾ

ಸೆಪ್ಟೆಂಬರ್ 12, 1986:

70 ಮತ್ತು 80 ರ ದಶಕಗಳಲ್ಲಿ ನಟಿ ಮಂಜುಳಾ ಪ್ರಸಿದ್ಧ ಬಹು ಭಾಷೆಯ ನಟಿ. ಅವರು ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ತೂಕದ ಸಮಸ್ಯೆಗಳಿಂದ ಬಳಲುತ್ತಿದ್ದ ನಟಿ ತನ್ನ ಚಲನಚಿತ್ರ ವೃತ್ತಿಜೀವನವನ್ನು ತೊರೆದರು. ಇದು ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಯಿತು. 12 ಸೆಪ್ಟೆಂಬರ್ 1986 ರಂದು ತನ್ನ 35 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಶರಣಾದರು.

ಇದನ್ನೂ ಓದಿ: ಮಲತಂದೆ-ತಾಯಿ ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಗೊತ್ತೇ?

Last Updated :Oct 1, 2021, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.