ETV Bharat / sitara

ಹೊಸ ಚಿತ್ರದ ಟೈಟಲ್‌ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್!

author img

By

Published : Mar 11, 2022, 2:22 PM IST

ಅಭಿಮಾನಿಗಳ ಚಕ್ರವರ್ತಿ ಕರೆಯಿಸಿಕೊಂಡಿರುವ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾವನ್ನ‌ ಘೋಷಣೆ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಚಿತ್ರದ ಟೈಟಲ್​​ನಿಂದಲೇ ಒಂದು ಹೈಪ್ ಕ್ರಿಯೇಟ್ ಮಾಡುವ ಅವರ ಸಿನಿಮಾ ಹೇಗಿದೆ ಗೊತ್ತಾ?

Real Star Upendra Directorial New Movie
ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬುದ್ಧಿವಂತ ನಟ ಕಮ್ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ನಟ. ಸದ್ಯ ಕಬ್ಜ ಸಿನಿಮಾದ ಮಧ್ಯೆ ಉಪೇಂದ್ರ ಅಭಿಮಾನಿಗಳಿಗೆ ಗುಡ್ ನ್ಯೂಸ್ಸ್​ವೊಂದನ್ನು ಕೊಟ್ಟಿದ್ದಾರೆ.

ಅಭಿಮಾನಿಗಳ ಚಕ್ರವರ್ತಿ ಕರೆಯಿಸಿಕೊಂಡಿರುವ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾವನ್ನ‌ ಘೋಷಣೆ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಚಿತ್ರದ ಟೈಟಲ್​​ನಿಂದಲೇ ಒಂದು ಹೈಪ್ ಕ್ರಿಯೇಟ್ ಮಾಡುವ ಅವರ ನಿರ್ದೇಶನದ ಸಿನಿಮಾ ಹೇಗಿದೆ ಗೊತ್ತಾ?

Real Star Upendra Directorial New Movie
ಸಿನಿಮಾ ಟೈಟಲ್‌

ಉಪೇಂದ್ರ ಸಿನಿಮಾದಲ್ಲಿ ನಾನು ಅಂತಿದ್ದ ರಿಯಲ್, ಉಪ್ಪಿ 2 ಚಿತ್ರದಲ್ಲಿ ನೀನು ಅಂತಾ ತಲೆಕೆಳಗಾಗಿ ನಿಲ್ಲುವ ಪೋಸ್ಟರ್​ ಮೂಲಕ ಅಭಿನಿಮಾನಿಗಳಿಗೆ ಕಿಕ್ ಕೊಟ್ಟಿದ್ದರು. ಈಗ ರಿಯಲ್ ಸ್ಟಾರ್ ಇವನು ಅಂತಾ ಟೈಟಲ್ ಇಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ‌.

ತಿರುಪತಿ ನಾಮದ ಆಕಾರದಂತಿರುವ ಪೋಸ್ಟರ್​​ನಲ್ಲಿ, ಉಪೇಂದ್ರ ಕುದುರೆ ಮೇಲೆ ಕುಳಿತುಕೊಂಡು ಅಘೋರಿ ಅವತಾರದಲ್ಲಿ ಕಾಣುತ್ತಿದ್ದಾರೆ. ಪೋಸ್ಟರ್ ಹಿಂದೆ ಚಂದ್ರಯಾನವನ್ನ ಡಿಸೈನ್ ಮಾಡಲಾಗಿದೆ. ಕೆಲವರು ಇದನ್ನು ಕುದುರೆ ಲಾಳದ ಸಿಂಬಲ್​ ಎಂದು ಕರೆಯುತ್ತಿದ್ದಾರೆ.

Real Star Upendra Directorial New Movie
ಉಪೇಂದ್ರ

ಬರೋಬರಿ 7 ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಟಗರು ಹಾಗೂ ಸಲಗ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಲಹರಿ ಆಡಿಯೋ ಮಾಲೀಕರಾದ ಮನೋಹರನ್ ಜೊತೆ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಾಯಕಿ ಯಾರು? ಈ ಸಿನಿಮಾದ ಸಂಗೀತ ನಿರ್ದೇಶಕ ಯಾರು? ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಲ್ಲಿ ಉಪೇಂದ್ರ ನಿರ್ದೇಶನದ ಇವನು ಸಿನಿಮಾ ಮೂಡಿ ಬರಲಿದೆ.

ಇದನ್ನೂ ಓದಿ: 'ಬೆವರು ಹರಿಸಿ ಮುನ್ನಡೆ'.. ಅನುಷ್ಕಾ ಶರ್ಮಾ 'ಚಕ್ಡಾ ಎಕ್ಸ್‌ಪ್ರೆಸ್‌' ಪೂರ್ವ ತಯಾರಿ ಹೀಗಿದೆ..

ಸದ್ಯ ಉಪೇಂದ್ರ ಘೋಷಣೆ ಮಾಡಿರುವ ಸಿನಿಮಾದ ಪೋಸ್ಟರ್ ಸ್ಯಾಂಡಲ್​​ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ. ಹೊಸ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಈವರೆಗಿನ ಸಿನಿ ಜರ್ನಿಯನ್ನು ಸುಂದರವಾಗಿಸಿದ್ದಕ್ಕೆ ಧನ್ಯವಾದ ಸಹ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.