ETV Bharat / sitara

ರಶ್ಮಿಕಾ ಮಂದಣ್ಣ ಹೊಸ ಅವತಾರ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು!

author img

By

Published : Jan 24, 2022, 6:11 PM IST

Rashmika Mandanna trolls
Rashmika Mandanna trolls

Actor Rashmika Mandanna trolls: ಕೊಡಗಿನ ಕುವರಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಧರಿಸಿರುವ ಉಡುಗೆ ವಿಚಾರವಾಗಿ ಇದೀಗ ಟ್ರೋಲ್​​ಗೊಳಗಾಗಿದ್ದಾರೆ.

ಮುಂಬೈ(ಮಹಾರಾಷ್ಟ್ರ): ಕಳೆದ ಕೆಲ ವಾರಗಳ ಹಿಂದೆ ತೆರೆ ಕಂಡು ಯಶಸ್ವಿ ಪ್ರದರ್ಶನ ಕಂಡಿರುವ ಅಲ್ಲು ಅರ್ಜುನ್​ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಹೊಸದೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್​​ಗೊಳಗಾಗಿದ್ದಾರೆ.

ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ನಿನ್ನೆ ರಾತ್ರಿ ಮಹಾರಾಷ್ಟ್ರದ ಏರ್​​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು, ಅವರ ಹಾಕಿಕೊಂಡಿರುವ ಡ್ರೆಸ್​​​ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​​ಗೊಳಗಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹೊಸ ಅವತಾರ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು

ಇದನ್ನೂ ಓದಿರಿ: ತೋತಾಪುರಿ ತೋಟ್ಟು ಕೀಳೋದಿಕ್ಕೆ ರೆಡಿಯಾದ ನವರಸ ನಾಯಕ : ಆಡಿಯೋ ಟೀಸರ್ ಬಿಡುಗಡೆ

ವಿಚಿತ್ರವಾದ ಡ್ರೆಸ್​ ಹಾಕಿಕೊಂಡಿದ್ದಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಟ್ರೋಲ್​ಗೊಳಗಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿವೆ. ಪುಷ್ಪ ಚಿತ್ರದಲ್ಲಿ ನಟನೆ ಮಾಡಿ ಸಿಕ್ಕಾಪಟ್ಟೆ ಯಶಸ್ಸುಗಳಿಸಿರುವ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಇದೀಗ ತಮ್ಮ ಸಂಭಾವನೆ ಸಹ ಹೆಚ್ಚಿಸಿಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.