ETV Bharat / sitara

ಯಶ್​​ಗೆ ಸಲ್ಯೂಟ್​​ ಹೇಳಿ ರಾಜಮೌಳಿಗೆ ಟಾಂಗ್​​ ಕೊಟ್ಟ ಆರ್​​ಜಿವಿ!

author img

By

Published : Jan 15, 2021, 1:00 PM IST

Updated : Jan 15, 2021, 1:38 PM IST

ಯಶ್​​ಗೆ ಸಲ್ಯೂಟ್​​ ಎಂದು ರಾಜಮೌಳಿಗೆ ಟಾಂಗ್​​ ಕೊಟ್ಟ ಆರ್​​ಜಿವಿ!
ಯಶ್​​ಗೆ ಸಲ್ಯೂಟ್​​ ಎಂದು ರಾಜಮೌಳಿಗೆ ಟಾಂಗ್​​ ಕೊಟ್ಟ ಆರ್​​ಜಿವಿ!

ಕಳೆದ ಎರಡು ವರ್ಷದ ಹಿಂದಿನವರೆಗೆ ಭಾರತದಲ್ಲಿ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಚಿತ್ರರಂಗದಲ್ಲೂ ಕೂಡ ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದ್ರೆ ಈಗ ಸ್ಯಾಂಡಲ್​​ವುಡ್​​ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದ ಯಶ್​​ ಮತ್ತು ಪ್ರಶಾಂತ್​ ನೀಲ್​​ಗೆ ಸಲ್ಯೂಟ್ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಯಶ್​​​ ಹಾಗೂ ಪ್ರಶಾಂತ್​ ನೀಲ್​​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಕೆಜಿಎಫ್​​-2 ಟೀಸರ್​​ ಒಂದೇ ವಾರದಲ್ಲಿ ಬರೋಬ್ಬರಿ 149 ಮಿಲಿಯನ್​​ ವೀಕ್ಷಣೆಯಾಗಿ ದಾಖಲೆ ಬರೆದಿದೆ. ಕೆಜಿಎಫ್​ ಸಿನಿಮಾ ಮುಂದೆ ಅದೆಷ್ಟೋ ಸಿನಿಮಾಗಳ ದಾಖಲೆಗಳು ಗಾಳಿಗೆ ತೂರಿ ಹೋಗಿವೆ. ಇದೇ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್​​ಗೋಪಾಲ್​​ ವರ್ಮಾ ರಾಜಮೌಳಿಗೆ ಸಖತ್​ ಟಾಂಗ್​​ ಕೊಟ್ಟಿದ್ದಾರೆ.

ಕಳೆದ ಎರಡು ವರ್ಷದ ಹಿಂದಿನವರೆಗೆ ಭಾರತದಲ್ಲಿ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಚಿತ್ರರಂಗದಲ್ಲೂ ಕೂಡ ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದ್ರೆ ಈಗ ಸ್ಯಾಂಡಲ್​​ವುಡ್​​ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದ ಯಶ್​​ ಮತ್ತು ಪ್ರಶಾಂತ್​ ನೀಲ್​​ಗೆ ಸಲ್ಯೂಟ್ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

  • Until 2 years back let alone BOLLYWOOD even South industry never took KANNADA INDUSTRY seriously ..KUDOS to @prashanth_neel & @TheNameIsYash for putting it on the WORLD MAP #KGF2 🙏🙏🙏

    — Ram Gopal Varma (@RGVzoomin) January 15, 2021 " class="align-text-top noRightClick twitterSection" data=" ">
  • BAHUBALI 2 trailer 11 cr views in 3 YEARS RRR 3.8 cr in 3 MONTHS and KGF 2 14 cr in 3 DAYS.. OUCHH! This is a STOMACH PUNCH delivered by @Prashanth_neel on behalf of all KANNADIGAS into the stomachs of all the other film industries 😬😬😬

    — Ram Gopal Varma (@RGVzoomin) January 15, 2021 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್​​ ಮಾಡಿರುವ ನಿರ್ದೇಶಕ, ಬಾಹುಬಲಿ-2 ಸಿನಿಮಾದ ಟ್ರೈಲರ್ 11 ಕೋಟಿ ವೀಕ್ಷಣೆಯಾಗಲು ಬರೋಬ್ಬರಿ ಮೂರು ವರ್ಷಗಳನ್ನೇ ತೆಗೆದುಕೊಂಡಿದೆ. ಆರ್ ಆರ್ ಆರ್ ಸಿನಿಮಾ ಟೀಸರ್ 3.8 ಕೋಟಿ ವೀಕ್ಷಣೆ ಪಡೆಯಲು 3 ತಿಂಗಳು ತೆಗೆದುಕೊಂಡಿದೆ. ಆದ್ರೆ ಕೆಜಿಎಫ್- 2 ಟೀಸರ್ ಬರೀ ಮೂರು ದಿನದಲ್ಲಿ 14 ಕೋಟಿ ವೀಕ್ಷಣೆ ಕಂಡಿದೆ ಎಂದು ನೇರಾ ನೇರವಾಗಿ ಬಾಹುಬಲಿ ನಿರ್ದೇಶಕ ರಾಜಮೌಳಿಗೆ ರಾಮ್​​​ ಗೋಪಾಲ್​​ವರ್ಮ ಟಾಂಗ್​​ ಕೊಟ್ಟಿದ್ದಾರೆ.

  • " class="align-text-top noRightClick twitterSection" data="">
Last Updated :Jan 15, 2021, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.