ETV Bharat / sitara

ಕೋಟಿಗೊಬ್ಬ-3 ಚಿತ್ರ ಮೂರು ದಿನದಲ್ಲಿ ಮಾಡಿದ ಕಲೆಕ್ಷನ್ ಇಷ್ಟು₹_____ಕೋಟಿ

author img

By

Published : Oct 17, 2021, 10:14 PM IST

Kotigobba -3
ಕೋಟಿಗೊಬ್ಬ-3

ವಾರಾಂತ್ಯ ಹಿನ್ನೆಲೆ ಶನಿವಾರವೂ ಬಹುತೇಕ ಇದೇ ಮೊತ್ತದ ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಇದೆ. ಭಾನುವಾರವೂ ಚಿತ್ರ ಕಳೆದ ಎರಡು ದಿನದ ಜನಪ್ರಿಯತೆಯನ್ನೇ ಉಳಿಸಿಕೊಂಡು ಮುನ್ನಡೆದಿರುವ ಹಿನ್ನೆಲೆಯಲ್ಲಿ ಒಟ್ಟು ಮೂರು ದಿನದಲ್ಲಿ 30 ಕೋಟಿ ರೂ.ಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ..

ಬಿಡುಗಡೆಯಲ್ಲಿ ಕೊಂಚ ವಿಳಂಬ, ಬಿಡುಗಡೆ ನಂತರ ಸಣ್ಣ ವಿವಾದದ ಮೂಲಕ ಸುದ್ದಿಯಾಗಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಅತ್ಯದ್ಭುತ ಕಲೆಕ್ಷನ್ ಮೂಲಕ ಮತ್ತೊಮ್ಮೆ ಸದ್ದು ಮಾಡಿದೆ. ದಸರಾ ಹಬ್ಬ, ವಾರಾಂತ್ಯ ಹಿನ್ನೆಲೆ ಸಾಲು ಸಾಲು ರಜೆಯ ಲಾಭವನ್ನು ಚಿತ್ರ ಪಡೆದಿದೆ.

ದಿನದಿಂದ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿ ಜನಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳು ಅಭಿಮಾನಿಗಳ ಶಿಳ್ಳೆ, ಕೇಕೆಗಳಿಂದ ತುಂಬಿ ಹೋಗಿದ್ದು, ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ನಿರ್ಮಾಪಕರಿಗೆ ಭರ್ಜರಿ ಆದಾಯ ಗಳಿಸಿ ಕೊಡುತ್ತಿದೆ. ಸುದೀಪ್ ಅಭಿಮಾನಿಗಳಿಗಂತೂ ಹಬ್ಬದ ಸವಿಯ ಜೊತೆಗೆ ಚಿತ್ರದ ರಸದೌತಣವೂ ಲಭಿಸಿದೆ.

ಸುದೀಪ್ ಅಭಿನಯದ ಕೋಟಿಗೊಬ್ಬ-2 ಸಹ ಬಾಕ್ಸ್ ಆಫೀಸ್​​ನಲ್ಲಿ ಕಮಾಲ್ ಮಾಡಿದ್ದವು. ಇದೀಗ ಕೋವಿಡ್ 2ನೇ ಅಲೆಯ ಲಾಕ್​ಡೌನ್​​ ಸಂಪೂರ್ಣ ತೆರವಿನ ಬಳಿಕ ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರದ ಪರವಾನಿಗೆ ಸಿಕ್ಕ ಬಳಿಕ ಬಿಡುಗಡೆಯಾಗಿರುವ ಕನ್ನಡ ಚಿತ್ರ ಕೋಟಿಗೊಬ್ಬ-3 ಬಹು ದಿನಗಳಿಂದ ಸಿನಿಮಾ ಪ್ರದರ್ಶನಕ್ಕಾಗಿ ಕಾದು ಕುಳಿತ್ತಿದ್ದ ಪ್ರೇಕ್ಷಕರಿಗೆ ರಸದೌತಣ ಬಡಿಸಿದೆ.

ರಾಜ್ಯಾದ್ಯಂತ ಶುಕ್ರವಾರ ತೆರೆಕಂಡ ಕೋಟಿಗೊಬ್ಬ-3 ಚಿತ್ರ ಮೊದಲ ದಿನವೇ ಬರೋಬ್ಬರಿ 12.50 ಕೋಟಿ ರೂ. ಬಂಪರ್ ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ನೀಡುತ್ತಿರುವ ಮಾಹಿತಿ ಎನ್ನುವುದು ಎಲ್ಲರೂ ಗಮನಿಸಬೇಕಾದ ವಿಚಾರ.

ವಾರಾಂತ್ಯ ಹಿನ್ನೆಲೆ ಶನಿವಾರವೂ ಬಹುತೇಕ ಇದೇ ಮೊತ್ತದ ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಇದೆ. ಭಾನುವಾರವೂ ಚಿತ್ರ ಕಳೆದ ಎರಡು ದಿನದ ಜನಪ್ರಿಯತೆಯನ್ನೇ ಉಳಿಸಿಕೊಂಡು ಮುನ್ನಡೆದಿರುವ ಹಿನ್ನೆಲೆಯಲ್ಲಿ ಒಟ್ಟು ಮೂರು ದಿನದಲ್ಲಿ 30 ಕೋಟಿ ರೂ.ಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ.

ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಚಿತ್ರ ಗುರುವಾರವೆ ಬಿಡುಗಡೆ ಆಗಿದ್ದರೆ ಇನ್ನೂ 7-10 ಕೋಟಿ ರೂ. ಆದಾಯ ಹೆಚ್ಚಾಗಿ ಬರುತ್ತಿತ್ತು. ವಿತರಕರಿಂದಾಗಿ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕೋಟಿಗೊಬ್ಬ 3 ನಿರ್ಮಾಪಕರ ಮೇಲೆ ಕೋಟ್ಯಂತರ ರೂ. ವಂಚನೆ ಆರೋಪ : ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.