ETV Bharat / sitara

'ಪ್ರೇಮ ಕಾಶ್ಮೀರ'.... ಶೂಟಿಂಗ್​ ಮಾಡಲು ಬೇರೆ ದೇಶ ಬೇಡ 'ಕಣಿವೆ'ಯೇ ಸಾಕೆಂದ ಜೋಗಿ ಡೈರೆಕ್ಟರ್​

author img

By

Published : Dec 1, 2020, 5:00 PM IST

Ek love ya cinema shooting in Kashmir
"ಕಾಶ್ಮೀರ ಶೂಟಿಂಗ್​ ಮಾಡಲು ಬೇರೆ ದೇಶಕ್ಕಿಂತಲೂ ಉತ್ತಮ"

ಕಳೆದ ಕೆಲವು ದಿನಗಳ ಹಿಂದೆ ಏಕ್​​​ ಲವ್​​​ ಯಾ ಶೂಟಿಂಗ್​ ಲೊಕೇಶನ್​ ಹುಡುಕಾಟಕ್ಕೆ ಕಾಶ್ಮೀರ, ಲಡಾಕ್, ಗುಜರಾತ್‌, ರಾಜಸ್ಥಾನ ಸೇರಿದಂತೆ ಹಲವು ಕಡೆ ಪ್ರೇಮ್​ ಭೇಟಿ ಕೊಟ್ಟಿದ್ದರು. ಕೊನೆಯದಾಗಿ ಕಾಶ್ಮೀರದಲ್ಲಿ ಶೂಟಿಂಗ್​ ಮಾಡುತ್ತಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಇದೀಗ ಏಕ್​ ಲವ್​​ ಯಾ ಸಿನಿಮಾದಲ್ಲಿ ಫುಲ್​​ ಬ್ಯುಸಿಯಾಗಿದ್ದಾರೆ. ಲಾಕ್​​ಡೌನ್​ ನಂತರ ಮತ್ತೆ ಸಿನಿಮಾ ಶೂಟಿಂಗ್​ಗೆ ಕೈ ಹಾಕಿರುವ ಪ್ರೇಮ್,​​ ಊಟಿಯಲ್ಲಿ ಚಿತ್ರೀಕರಣ ಮಾಡಿದ್ರು. ಇದೀಗ ಕಾಶ್ಮೀರದಲ್ಲಿ ಏಕ್​​ ಲವ್​​ ಯಾ ಚಿತ್ರದ ಹಾಡಿನ ಶೂಟಿಂಗ್​ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಶೂಟಿಂಗ್​ ಲೊಕೇಶನ್​ ಹುಡುಕಾಟಕ್ಕೆ ಕಾಶ್ಮೀರ, ಲಡಾಖ್​, ಗುಜರಾತ್‌, ರಾಜಸ್ಥಾನ ಸೇರಿದಂತೆ ಹಲವು ಕಡೆ ಪ್ರೇಮ್​ ಭೇಟಿ ಕೊಟ್ಟಿದ್ದರು. ಕೊನೆಯದಾಗಿ ಕಾಶ್ಮೀರದಲ್ಲಿ ಶೂಟಿಂಗ್​ ಮಾಡುತ್ತಿದ್ದಾರೆ.

ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್​​ ಚಿತ್ರತಂಡದ ಜೊತೆಗಿನ ಒಂದು ಫೋಟೋವನ್ನು ಸೋಷಿಯಲ್​ ಮೀಡಿದ್ದಲ್ಲಿ ಹಾಕಿ, ನಾನು ಈ ಹಾಡಿನ ಶೂಟಿಂಗ್​ ಮಾಡಲು ಬೇರೆ ದೇಶಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದ್ರೆ ನಿಜವಾಗಿಯೂ ನಮ್ಮ ಕಾಶ್ಮೀರ ಬೇರೆ ದೇಶಕ್ಕಿಂತಲೂ ಅದ್ಭುತವಾಗಿದೆ. ಇಲ್ಲಿ ನಮಗೆ ಸಹಕರಿಸಿದ ಸ್ಥಳೀಯರಿಗೆ, ಜಮ್ಮು ಕಾಶ್ಮೀರ ಪೊಲೀಸರಿಗೆ ಹಾಗೂ ಆರ್ಮಿಗೆ ಧನ್ಯವಾದ ಎಂದಿದ್ದಾರೆ..

ಏಕ್​​​ ಲವ್​​ ಯಾ ಚಿತ್ರದಲ್ಲಿ ಪ್ರೇಮ್​​ ಅಳಿಯ ಅಂದ್ರೆ ರಕ್ಷಿತಾ ಸಹೋದರ ರಾಣಾ ನಾಯಕನ ಪಾತ್ರ ಮಾಡುತ್ತಿದ್ದಾರೆ. ಹಾಗೂ ಡಿಂಪಲ್​​ ಕ್ವೀನ್​ ರಚಿತಾ ರಾಮ್​ ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.