ETV Bharat / sitara

ಪವರ್​ ಸ್ಟಾರ್​ ಪುನೀತ್ ರಾಜ್​ ಕುಮಾರ್ ವೃತ್ತಿ ಜೀವನದ​ 'ದಿ ಬೆಸ್ಟ್'​ ಸಿನಿಮಾಗಳಿವು

author img

By

Published : Oct 29, 2021, 11:46 PM IST

Puneeth rajkumar
ಪುನೀತ್ ರಾಜ್​ ಕುಮಾರ್

ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದ ನಟ ಪುನೀತ್​ ರಾಜ್​ಕುಮಾರ್ ಅನೇಕ ಸೂಪರ್​ ಹಿಟ್​​ ಸಿನಿಮಾಗಳಲ್ಲಿ ನಟನೆ ಮಾಡಿ, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಅವರ ಪ್ರಮುಖ ಸಿನಿಮಾಗಳ ಮಾಹಿತಿ ಇಂತಿದೆ.

ಕನ್ನಡ ಚಿತ್ರರಂಗದಲ್ಲಿ ಪವರ್​ ಸ್ಟಾರ್​​ ಪುನೀತ್​ ರಾಜ್​ ಕುಮಾರ್​ ಸಿನಿಮಾ ಮಾತ್ರವಲ್ಲದೆ ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿದ್ದರು. ದಿಢೀರ್​ ಅನಾರೋಗ್ಯದಿಂದಾಗಿ ಇಂದು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ. ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಅಪ್ಪು ಇನ್ನು ನೆನಪು ಮಾತ್ರ.

ಎರಡು ತಿಂಗಳ ಮಗುವಾಗಿದ್ದಾಗಲೇ ನಟ ಪುನೀತ್​​​ ರಾಜ್​ ಕುಮಾರ್ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. 'ಬೆಟ್ಟದ ಹೂವು' ಪುನೀತ್​​ ಅಭಿನಯದ ಮೊದಲ ಸಿನಿಮಾವಾಗಿದ್ದು, ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದೆ.

abhi
ಅಭಿ

ಹೆಸರಿಗೆ ತಕ್ಕಂತೆ ದೊಡ್ಮನೆ ಮಗನಾಗಿರೋ ಪುನೀತ್ ರಾಜ್ ಕುಮಾರ್ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿಯಿಸಿದ್ದಾರೆ. ಅವರ ವೃತ್ತಿ ಜೀವನದ ದಿ ಬೆಸ್ಟ್​ ಸಿನಿಮಾಗಳಿವು.

2002ರಲ್ಲಿ 'ಅಪ್ಪು' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಾಲ್ಯದಲ್ಲೇ ಉತ್ತಮ ಬಾಲನಟ ಎಂದು ಪ್ರಶಸ್ತಿ ಪಡೆದಿದ್ದ ಪವರ್​ ಸ್ಟಾರ್, ಚೊಚ್ಚಲ ಸಿನಿಮಾದಲ್ಲೇ ಸೆಂಚುರಿ ಬಾರಿಸಿ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾದರು. ಅಪ್ಪು-ರಕ್ಷಿತಾ ಜೋಡಿ ಈ ಚಿತ್ರದ ಮತ್ತೊಂದು ಹೈಲೆಟ್ಸ್ ಆಗಿತ್ತು. ಟಾಲಿವುಡ್ ನಿರ್ದೇಶಕ ಪೂರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

appu
ಅಪ್ಪು

2003ರಲ್ಲಿ ಅಣ್ಣಾವ್ರ ಬ್ಯಾನರ್​​ನಲ್ಲಿ ನಿರ್ಮಾಣವಾದ 'ಅಭಿ' ಸಿನಿಮಾದಲ್ಲಿ ಪುನೀತ್​ ಅಭಿನಯ ಮೋಡಿ ಮಾಡಿತ್ತು. ಪ್ರೇಮ ಕಥೆ ಹೊಂದಿದ್ದ ಸಿನಿಮಾವನ್ನು ಆ ಕಾಲದಲ್ಲಿ 3 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಪುನೀತ್ ಹಾಗೂ ರಮ್ಯಾ ಜೋಡಿ ಪ್ರೇಕ್ಷಕರಿಗೆ ಇಷ್ಟವಾದ್ದರಿಂದ 7 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಅಭಿ ಸಿನಿಮಾ ಪವರ್ ಸ್ಟಾರ್ ದಿ ಬೆಸ್ಟ್ ಸಿನಿಮಾಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ಬಳಿಕ ಮೌರ್ಯ ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡ ಪುನೀತ್​ ಖಡಕ್​​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಪ್ಪು ಜೊತೆ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ರೊಮ್ಯಾನ್ಸ್ ಮಾಡಿದ್ದರು. ಎಸ್​.ನಾರಾಯಣ್ ನಿರ್ದೇಶನದ ಮೌರ್ಯ ಸಿನಿಮಾ 4 ಕೋಟಿ ಬಜೆಟ್​​​ನಲ್ಲಿ ನಿರ್ಮಾಪಕ ರಾಕ್​​​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. 2004ರಲ್ಲಿ ತೆರೆ ಕಂಡಿದ್ದ ಮೌರ್ಯ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ 8 ಕೋಟಿ ಕಲೆಕ್ಷನ್ ಮಾಡಿತ್ತಂತೆ.

Maurya
ಮೌರ್ಯ ಸಿನಿಮಾದಲ್ಲಿ ನಟ ಪುನೀತ್ ರಾಜ್​ಕುಮಾರ್​​

(ಇದನ್ನೂ ಓದಿ:ಕಂಠೀರವ ಸ್ಟುಡಿಯೋದ ಅಪ್ಪನ ಸಮಾಧಿಯ ಪಕ್ಕದಲ್ಲೇ ಅಪ್ಪು ಅಂತ್ಯಕ್ರಿಯೆ..)

ಪ್ರೀತಿ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ನೀಡಿದ್ದ ಸಿನಿಮಾ ಆಕಾಶ್. ನಿರ್ದೇಶಕ ಮಹೇಶ್ ಬಾಬು ಅವರು ಚೊಚ್ಚಲ ನಿರ್ದೇಶನದಲ್ಲಿ ಸಕ್ಸಸ್ ಕಂಡ ಚಿತ್ರ ಇದಾಗಿದೆ. ಈ ಸಿನಿಮಾದವನ್ನು ವಿದೇಶದಲ್ಲಿ ಮೊದಲ ಬಾರಿಗೆ ಶೂಟ್​ ಮಾಡಲಾಗಿತ್ತು. ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಪುನೀತ್ ರಾಜ್ ಕುಮಾರ್ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಚಿತ್ರವಾಗಿದೆ.

Jackie
ಜಾಕಿ ಚಿತ್ರದಲ್ಲಿ ನಟ ಪುನೀತ್ ರಾಜ್​ಕುಮಾರ್​​​

ಪುನೀತ್ ಸಿನಿ ಜರ್ನಿಯಲ್ಲಿ ಮಿಲನ ಸಿನಿಮಾ ಮೆಗಾ ಹಿಟ್ ಎಂದು ಕರೆಯಿಸಿಕೊಂಡಿದೆ. ಪುನೀತ್ ಈ ಹಿಂದಿನ ಸಿನಿಮಾಗಳಿಗಿಂತ ಮತ್ತಷ್ಟು ಸ್ಟೈಲಿಷ್ ಆಗಿ ರೇಡಿಯೋ ಜಾಕಿಯಾಗಿ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಿದ್ದರು. ಪ್ರಕಾಶ್ ನಿರ್ದೇಶನ ಮಾಡಿದ್ದ ಮಿಲನ ಬರೋಬ್ಬರಿ ಒಂದು ವರ್ಷ ಪ್ರದರ್ಶನಗೊಂಡಿತ್ತು.

2009ರಲ್ಲಿ ಪುನೀತ್ ರಾಜ್ ಕುಮಾರ್ ಸೂಪರ್ ಹಿಟ್ ಕೊಟ್ಟ ಸಿನಿಮಾ ರಾಮ್. ಫ್ಯಾಮಿಲಿ ಕಥೆ ಆಧರಿಸಿ ಬಂದ ಈ ಚಿತ್ರದಲ್ಲಿ ಪುನೀತ್ ಹಾಗೂ ಪ್ರಿಯಾಮಣಿ ಜೋಡಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು. ನಿರ್ಮಾಪಕ ಆದಿತ್ಯಾ ಬಾಬು ಆ ಕಾಲದಲ್ಲಿ 9 ಕೋಟಿ ಖರ್ಚು ಮಾಡಿ ಈ ಸಿನಿಮಾ ಮಾಡಿದ್ರು.

ಇನ್ನು ಲವರ್ ಬಾಯ್ ಹಾಗೂ ಫ್ಯಾಮಿಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಪವರ್ ಸ್ಟಾರ್ ಫಸ್ಟ್ ಟೈಮ್ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿನಿಮಾ ಪೃಥ್ವಿ. ಗಣಿಗಾರಿಕೆ ಬಗ್ಗೆ ಕಥೆ ಆಧರಿಸಿ ಬಂದ ಈ ಸಿನಿಮಾವನ್ನು ನಿರ್ಮಾಪಕ ಎನ್ಎಸ್ ರಾಜಕುಮಾರ್ 10 ಕೋಟಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಿದ್ದರು.

arasu
ಅರಸು ಚಿತ್ರದಲ್ಲಿ ನಟ ಪುನೀತ್​

ಪೃಥ್ವಿ ನಂತರ ಪುನೀತ್ ಜಾಕಿಯಂತಹ ಮತ್ತೊಂದು ಬ್ಲಾಕ್ ಬ್ಲಸ್ಟರ್ ಸಿನಿಮಾ ಕೊಟ್ಟರು. ಮಾಸ್ ಎಲಿಮೆಂಟ್ಸ್ ಇದ್ದರೂ ಹೆಣ್ಣು ಮಕ್ಕಳ ಮಾರಾಟ ಮಾಡುವ ಕಥೆ ಆಧರಿಸಿ ಬಂದ ಸಿನಿಮಾದಲ್ಲಿ, ಪವರ್ ಸ್ಟಾರ್ ಪಕ್ಕಾ ಲೋಕಲ್ ಕ್ಯಾರೆಕ್ಟರ್ ಮಾಡಿದ್ದರು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ನಟಿ ಭಾವನಾ ಅಭಿನಹಿಸಿದ್ದರು.

ರಾಜಕುಮಾರ್​ ಸಿನಿಮಾ ಪುನೀತ್​ ಸಿನಿಮಾ ಕೆರಿಯರ್​​​ನಲ್ಲಿ ಆಲ್ ಟೈಮ್ ರೆಕಾರ್ಡ್ ಸಿನಿಮಾವಾಗಿದೆ. ಈ ಚಿತ್ರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ 25 ಕೋಟಿ ಬಜೆಟ್​​​ನಲ್ಲಿ ನಿರ್ಮಾಣದಲ್ಲಿ ಮೂಡಿ ಬಂದಿತ್ತು.

ಈ ಸಿನಿಮಾ ನಂತರ ಬಾಕ್ಸ್ ಆಫೀಸ್​​​ನಲ್ಲಿ ಲೂಟಿ ಮಾಡಿದ ಚಿತ್ರ ಯುವರತ್ನ. ಎರಡು ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದ ಪುನೀತ್, ಮಾಸ್ ಅಂಡ್ ಕ್ಲಾಸ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದರು. ಈ ಸಿನಿಮಾವನ್ನು ಕೂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.