ETV Bharat / sitara

ನಿಖಿಲ್ ಕುಮಾರಸ್ವಾಮಿ​​ ಅಭಿನಯದ 'ರೈಡರ್' ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

author img

By

Published : Nov 22, 2021, 9:13 PM IST

Rider kannada movie
ರೈಡರ್​ ಕನ್ನಡ ಸಿನಿಮಾ

ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್​ ಕುಮಾರಸ್ವಾಮಿ ಅಭಿನಯದ ರೈಡರ್​ ಸಿನಿಮಾ ಡಿಸೆಂಬರ್​ 22ಕ್ಕೆ ಬಿಡುಗಡೆಗೊಳ್ಳಲಿದೆ.

ರೈಡರ್​​ ಸಿನಿಮಾ ತನ್ನ ಟೀಸರ್​, ಹಾಡುಗಳಿಂದ ಸುದ್ದಿಯಲ್ಲಿದ್ದು, ಕನ್ನಡ ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Rider kannada movie

ಜಾಗ್ವಾರ್ ಹಾಗೂ ಸೀತಾರಾಮ ಕಲ್ಯಾಣ ಚಿತ್ರಗಳ ಬಳಿಕ ನಿಖಿಲ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಸಿನಿಮಾದಲ್ಲಿ ನಿಖಿಲ್​ ಬಾಸ್ಕೆಟ್ ಬಾಲ್​ ಪ್ಲೇಯರ್​​ ಆಗಿ ಕಾಣಿಸಿಕೊಂಡಿದ್ದಾರೆ.

ನಿಖಿಲ್‌ಗೆ ನಟಿಯರಾಗಿ ಕಶ್ಮೀರಾ ಪರ್ದೇಸಿ ಹಾಗೂ ಅನುಷಾ ರೈ ಅಭಿನಯಿಸಿದ್ದಾರೆ. ಚಿತ್ರಕ್ಕೆ ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನವಿದೆ. ದತ್ತಣ್ಣ, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್ ಕೆಆರ್ ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗವನ್ನು ಸಿನಿಮಾ ಒಳಗೊಂಡಿದೆ.

rider film team

ರೈಡರ್​ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆ.ಎಮ್.ಪ್ರಕಾಶ್ ಸಂಕಲನ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೋಗ್ರಫಿ, ಡಾ.ರವಿವರ್ಮ ಸಾಹಸವಿದೆ. ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಮಾಡಿದ್ದು, ಚಂದ್ರ ಮನೋಹರನ್ ಹಾಗೂ ಸುನೀಲ್ ಗೌಡ ಜಂಟಿಯಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: 'ಅಮೀರ್ ಖಾನ್ 3ನೇ ಮದುವೆ ವದಂತಿ ಸಂಪೂರ್ಣ ಸುಳ್ಳು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.