ETV Bharat / sitara

20 ವರ್ಷ ಹಿಂದಿನ ರಂಗೀಲಾ ಚಿತ್ರದ ವಿವಾದ ನೆನಪಿಸಿಕೊಂಡ ರಾಮ್ ಗೋಪಾಲ್ ವರ್ಮಾ

author img

By

Published : May 14, 2021, 5:08 PM IST

RGV admits 'betraying' Aamir as he recalls over two decades old Rangeela controversy
RGV admits 'betraying' Aamir as he recalls over two decades old Rangeela controversy

ಎರಡು ದಶಕಗಳ ಹಿಂದಿನ ರಂಗೀಲಾ ಚಿತ್ರದ ವಿವಾದಲ್ಲಿ ತಪ್ಪು ನನ್ನದೇ ಎಂದು ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಒಪ್ಪಿಕೊಂಡಿದ್ದಾರೆ.

ಹೈದರಾಬಾದ್: ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಎರಡು ದಶಕಗಳ ಹಿಂದಿನ ರಂಗೀಲಾ ಚಿತ್ರದ ವಿವಾದದ ಕುರಿತು ಮಾತನಾಡಿದ್ದಾರೆ.

ಈ ವಿವಾದದಲ್ಲಿ ತಪ್ಪು ನನ್ನದೇ ಎಂದು ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಒಪ್ಪಿಕೊಂಡಿದ್ದಾರೆ. ರಂಗೀಲಾ ಚಿತ್ರದ ನಂತರ ಅವರು ಮತ್ತು ಅಮೀರ್ ಖಾನ್​ ಎಂದಿಗೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ.

20 ವರ್ಷಗಳ ಹಿಂದೆ ಚಿತ್ರ ಬಿಡುಗಡೆಯ ಬಳಿಕ ಸಂದರ್ಶನವೊಂದರಲ್ಲಿ ರಾಮ್​​​ಗೋಪಾಲ್ ವರ್ಮಾ, ಚಿತ್ರದ ಸೀನ್ ಒಂದರಲ್ಲಿ ಅಮೀರ್ ಖಾನ್ ನಟನೆಯ ಕುರಿತು ನೆಗೆಟಿವ್ ಕಮೆಂಟ್ ನೀಡಿದ್ದರು. ಇದು ಅಮೀರ್ ಖಾನ್​ ಹಾಗೂ ರಾಮ್ ಗೋಪಾಲ್ ವರ್ಮಾ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು.

ಅಮೀರ್ ಮತ್ತು ರಾಮ್ ಗೋಪಾಲ್ ವರ್ಮಾ ನಡುವೆ ಬಿರುಕು ಉಂಟುಮಾಡಿದ ದೃಶ್ಯ ಇಲ್ಲಿದೆ:

  • " class="align-text-top noRightClick twitterSection" data="">

1995ರಲ್ಲಿ ಅಮೀರ್ ಖಾನ್, ಊರ್ಮಿಳಾ ಮಾತೋಂಡ್ಕರ್ ಮತ್ತು ಜಾಕಿ ಶ್ರಾಫ್ ನಟಿಸಿದ ರಂಗೀಲಾ ಚಿತ್ರ ಬಿಡುಗಡೆಯಾದ ರಾಮ್ ಗೋಪಾಲ್ ವರ್ಮಾ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಈ ಚಿತ್ರವು ಸೂಪರ್ ಹಿಟ್ ಆಗಿತ್ತು ಮತ್ತು ಎ. ಆರ್. ರೆಹಮಾನ್ ಅವರ ಸಂಗೀತವೂ ಇದಕ್ಕೆ ಕಾರಣವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.