ETV Bharat / sitara

ಟೈಗರ್​-3: ಸಲ್ಮಾನ್​ ವಿರುದ್ಧ ISI ಏಜೆಂಟ್​ ಆಗಿ ಕಿಸ್ಸಿಂಗ್​ ಸ್ಟಾರ್​ ಕಾದಾಟ

author img

By

Published : May 24, 2021, 2:19 PM IST

Pakistani Tiger vs Indian Tiger, Pakistani Tiger vs Indian Tiger news,  ISI Agent Emraan Hashmi play role, Salman Khan in Tiger 3, Tiger 3 movie, Tiger 3 movie news, ಇಂಡಿಯಾ ಟೈಗರ್​ ವಿರುದ್ಧ ಪಾಕಿಸ್ತಾನ್​ ಟೈಗರ್​ ಫೈಟ್​, ಟೈಗರ್​ 3 ಚಿತ್ರದಲ್ಲಿ ಐಎಸ್​ಐ ಏಜೆಂಟ ಆದ ಇಮ್ರಾನ್​ ಹಶ್ಮಿ, ಟೈಗರ್​ 3 ಚಿತ್ರದಲ್ಲಿ ಸಲ್ಮಾನ್​ ಖಾನ್​, ಟೈಗರ್​ 3 ಚಿತ್ರ, ಟೈಗರ್​ 3 ಚಿತ್ರ ಸುದ್ದಿ,
ಸಲ್ಮಾನ್​ ವಿರುದ್ಧ ಐಎಸ್​ಐ ಏಂಜೆಟ್​ ಆಗಿ ಕಿಸ್ಸಿಂಗ್​ ಸ್ಟಾರ್​ ಕಾದಾಟ

ಟೈಗರ್​-3 ಚಿತ್ರದ ಶೂಟಿಂಗ್​ ನಡೆಯುತ್ತಿದ್ದು, ಚಿತ್ರತಂಡ ಕಾಪಾಡಿಕೊಂಡು ಬಂದಿದ್ದ ರಹಸ್ಯ ಈಗ ಬಯಲಾಗಿದೆ. ಚಿತ್ರದಲ್ಲಿ ಸಲ್ಮಾನ್​ ವಿರುದ್ಧ ಕಿಸ್ಸಿಂಗ್​ ಸ್ಟಾರ್​ ಇಮ್ರಾನ್​ ಹಶ್ಮಿ ಕಾದಾಟ ನಡೆಸಲಿದ್ದಾರೆ.

ಮುಂಬೈನಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್-3 ಚಿತ್ರದ ಚಿತ್ರೀಕರಣ ಮಾರ್ಚ್​ನಲ್ಲಿ ಪ್ರಾರಂಭವಾಗಿತ್ತು. ಯಶ್​ ರಾಜ್ ಸ್ಟುಡಿಯೋಸ್​ನಲ್ಲಿ ವಿಶೇಷ ಸೆಟ್ ನಿರ್ಮಿಸಿ ಹಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಆದರೆ, ಏನು ಚಿತ್ರೀಕರಿಸಿದ್ರು ಅಂತಾ ಯಾರಿಗೂ ಗೊತ್ತಿರಲಿಲ್ಲ. ಏಕೆಂದರೆ, ಚಿತ್ರೀಕರಿಸಲಾದ ಕೆಲವು ಮಹತ್ವದ ದೃಶ್ಯಗಳ ಬಹಿರಂಗಪಡಿಸಿದರೆ ಕಥೆ ಗೊತ್ತಾಗುತ್ತೆ ಎಂದು ಚಿತ್ರತಂಡಕ್ಕೆ ಭಯ ಕಾಡಿತ್ತು. ಹೀಗಾಗಿ ಸೂಕ್ತ ಭದ್ರತೆಯೊಂದಿಗೆ ಮಹತ್ವದ ದೃಶ್ಯಗಳ ಚಿತ್ರೀಕರಿಸಲಾಗಿದೆ.

ಚಿತ್ರತಂಡ ಕಾಪಾಡಿಕೊಂಡ ರಹಸ್ಯ ಕೊನೆಗೂ ಬಯಲಾಗಿದೆ. ಪ್ರಮುಖವಾಗಿ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಮೂಲಗಳ ಪ್ರಕಾರ, ಇಮ್ರಾನ್ ಈ ಚಿತ್ರದಲ್ಲಿ ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಭಾಗದ ಮಹತ್ವದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆಯಂತೆ.

ಇಮ್ರಾನ್ ಇಲ್ಲಿ ಬರೀ ಐಎಸ್ಐ ಏಜೆಂಟ್ ಅಷ್ಟೇ ಅಲ್ಲ, ಪಾಕಿಸ್ತಾನದ ಟೈಗರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದರೆ, ಸಲ್ಮಾನ್ ಖಾನ್ ಹೇಗೆ ಈ ಸರಣಿಯ ಚಿತ್ರಗಳಲ್ಲಿ ಭಾರತದ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೋ, ಹಾಗೆಯೇ ಇಮ್ರಾನ್ ಸಹ ಪಾಕಿಸ್ತಾನದ ಟಾಪ್ ಏಜೆಂಟ್ ಆಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಡೀ ಚಿತ್ರವು ಭಾರತದ ಟೈಗರ್ ಮತ್ತು ಪಾಕಿಸ್ತಾನದ ಟೈಗರ್ ಸುತ್ತ ಸುತ್ತುತ್ತದಂತೆ. ಅವರಿಬ್ಬರ ನಡುವಿನ ಹೋರಾಟದಲ್ಲಿ ಯಾರು ಮತ್ತು ಹೇಗೆ ಗೆಲ್ಲುತ್ತಾರೆ ಎಂಬುದೇ ಚಿತ್ರದ ಕಥೆ.

ಟೈಗರ್-3 ಚಿತ್ರವನ್ನು ಮನೀಷ್ ಶರ್ಮ ನಿರ್ದೇಶಿಸುತ್ತಿದ್ದು, ಸಲ್ಮಾನ್ ಖಾನ್, ಕತ್ರೀನಾ ಕೈಫ್, ರಣವೀರ್ ಶೌರಿ ಮುಂತಾದವರು ನಟಿಸುತ್ತಿದ್ದಾರೆ. ಹಿಂದಿ ಸಿನಿಮಾಗಳಲ್ಲೇ ಅತ್ಯಂತ ಕಾಸ್ಟ್ಲಿಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟೈಗರ್-3ಗೆ ಬರೋಬ್ಬರಿ 350 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.