ETV Bharat / sitara

ಹಿಂದಿ ಬಿಗ್‌ಬಾಸ್ ಮನೆಯಲ್ಲಿ 'ಅದೂ' ಕೂಡಾ ನಡೆಯುತ್ತಂತೆ! ಸ್ಪರ್ಧಿಯೇ ಹೇಳಿದ್ದಾರೆ ನೋಡಿ..

author img

By

Published : Aug 23, 2021, 12:58 PM IST

Updated : Aug 23, 2021, 1:04 PM IST

Shocking! Eliminated contestant Urfi Javed says Bigg Boss OTT ke ghar mein sex ho chuka hai on camera - watch video
ಶಾಕಿಂಗ್‌; ಹಿಂದಿಯ ಬಿಗ್‌ಬಾಸ್ ಮನೆಯಲ್ಲಿ 'ಅದು' ನಡೆಯುತ್ತಂತೆ..; ಸ್ಪರ್ಧಿಯೇ ಹೀಗೆ ಹೇಳಿದ್ದು...

ಹಿಂದಿ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಸ್ಪರ್ಧೆಯಿಂದ ಹೊರಬಿದ್ದಿರುವ ಉರ್ಫಿ ಜಾವೇದ್ ಗಂಭೀರ ಆರೋಪ ಮಾಡಿದ್ದಾರೆ.

ಮುಂಬೈ: ಹಿಂದಿ ಆವೃತ್ತಿಯ ಬಿಗ್‌ಬಾಸ್‌ ಸ್ಪರ್ಧಿಗಳು ತಮ್ಮ ಕಚ್ಚಾಟದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ದೊಡ್ಡ ಮನೆಯಿಂದ ಹೊರಬಂದಿರುವ ಸ್ಪರ್ಧಿ ಉರ್ಫಿ ಜಾವೇದ್, ಅಲ್ಲಿ ನಡೆಯುತ್ತಿದ್ದ ಘಟನಾವಳಿಗಳ ಬಗ್ಗೆ ಟೀಕೆಗಳ ಸುರಿಮಳೆಗೈದಿದ್ದಾರೆ.

'ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಮರಾ ಮುಂದೆಯೇ ಸೆಕ್ಸ್‌ ನಡೆಯುತ್ತಿದೆ' ಎಂದು ಮನೆಯಿಂದ ಹೊರ ಬಂದಿರುವ ಉರ್ಫಿ ಜಾವೇದ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

'ಬಿಗ್ ಬಾಸ್ ಒಟಿಟಿ ಕೆ ಘರ್ ಮೇ ಸೆಕ್ಸ್ ಹೋ ಚುಕಾ ಹೈ ಕ್ಯಾಮೆರಾ' ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಇತರೆ ಸ್ಪರ್ಧಿಗಳು ನೀನು ಏನು ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಿರುವುದನ್ನು ಬಿಗ್‌ಬಾಸ್‌ ಮನೆಯ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಕಾಣಬಹುದು.

ಬಿಗ್‌ಬಾಸ್‌ ಮನೆಯಲ್ಲಿ ಸಂಭೋಗ ನಡೆಯುತ್ತದೆ ಎಂದು ಆಕೆ ಪುನರಾವರ್ತಿಸಿದ ನಂತರ ಇದನ್ನು ಕೇಳಿ ಆಘಾತಕ್ಕೊಳಗಾದ ಮತ್ತೋರ್ವ ಸ್ಪರ್ಧಿ ಪ್ರತೀಕ್ ಸೆಹಜ್ಪಾಲ್, ಏನು ಮಾತನಾಡುತ್ತಿದ್ದೀರಿ? ಎಂದು ಉರ್ಫಿಯನ್ನು ಕೇಳಿದರು. ಆಗ, 'ಪ್ರತೀಕ್ ಸೋ ರಹೇ ಕ್ಯಾ? ಜಬ್ ಸೆಕ್ಸ್ ಹೋ ರಹಾ ಥಾ ಕ್ಯಾಮರಾ' ಎಂದು ಪ್ರಶ್ನಿಸಿದ್ದಾರೆ.

ಉರ್ಫಿ ತನ್ನ ತಮಾಷೆಯ ನಟನೆ ಮತ್ತು ಜನರನ್ನು ಅನುಕರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿದ್ದರು. ಆದರೂ ಮೊದಲ ವಾರದಲ್ಲಿ ಕಡಿಮೆ ಮತಗಳನ್ನು ಪಡೆದಿದ್ದು ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದರು.

Last Updated :Aug 23, 2021, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.