ETV Bharat / science-and-technology

Zuck vs Musk fight: ಜುಕರ್​ಬರ್ಗ್​ ವಿರುದ್ಧ ಕೇಜ್​ ಫೈಟ್​​ ಟ್ವಿಟರ್​ನಲ್ಲಿ ನೇರಪ್ರಸಾರ; ಮಸ್ಕ್​​ ಘೋಷಣೆ

author img

By

Published : Aug 6, 2023, 4:57 PM IST

Elon Musk Mark Zuckerberg cage fight watch
Elon Musk Mark Zuckerberg cage fight watch

Zuck vs Musk fight: ಟೆಸ್ಲಾ ಮತ್ತು ಮೆಟಾ ಮುಖ್ಯಸ್ಥರ ಮಧ್ಯೆ ಕೇಜ್ ಫೈಟ್​ ನಡೆಯಲು ವೇದಿಕೆ ಸಿದ್ಧವಾಗುತ್ತಿದೆ. ಇಬ್ಬರ ಮಧ್ಯೆ ನಡೆಯುವ ಫೈಟ್​ ಅನ್ನು ಟ್ವಿಟರ್​​ನಲ್ಲಿ ನೇರಪ್ರಸಾರ ಮಾಡುವುದಾಗಿ ಎಲೋನ್ ಮಸ್ಕ್ ಘೋಷಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಯಾಲಿಫೋರ್ನಿಯಾ (ಅಮೆರಿಕ) : ಮಾರ್ಕ್ ಜುಕರ್ ಬರ್ಗ್ ಅವರೊಂದಿಗೆ ನಡೆಯಲಿರುವ ಕೇಜ್ ಫೈಟ್​ ಕುಸ್ತಿ ಸೆಣಸಾಟವನ್ನು ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ಎಕ್ಸ್​ (X) ನಲ್ಲಿ ನೇರಪ್ರಸಾರ ಮಾಡುವುದಾಗಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾನುವಾರ ಘೋಷಿಸಿದ್ದಾರೆ. ಈ ಫೈಟ್​ನ ನೇರಪ್ರಸಾರದಿಂದ ಬರುವ ಎಲ್ಲ ಆದಾಯವನ್ನು ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರಿಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಮಸ್ಕ್ ಮತ್ತು ಜುಕರ್ ಬರ್ಗ್​​ ಮಧ್ಯೆ ಲಾಸ್ ವೇಗಾಸ್​ನಲ್ಲಿ ಕೇಜ್ ಫೈಟ್​ ನಡೆಯಲಿದೆ ಎಂದು ಹೇಳಲಾಗಿದೆ.

"ಜುಕ್ ವರ್ಸಸ್ ಮಸ್ಕ್ ಫೈಟ್ ಅನ್ನು ಎಕ್ಸ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದರಿಂದ ಬರುವ ಎಲ್ಲಾ ಆದಾಯವನ್ನು ಹಿರಿಯರಿಗಾಗಿ ಚಾರಿಟಿಗೆ ನೀಡಲಾಗುವುದು" ಎಂದು ಮಸ್ಕ್ ಭಾನುವಾರ ಬೆಳಿಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಮಸ್ಕ್ ಈ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ.

  • Zuck v Musk fight will be live-streamed on 𝕏.

    All proceeds will go to charity for veterans.

    — Elon Musk (@elonmusk) August 6, 2023 " class="align-text-top noRightClick twitterSection" data=" ">

ಜಗತ್ತಿನ ಎರಡು ದೈತ್ಯ ಕಂಪನಿಗಳ ಮುಖ್ಯಸ್ಥರಾಗಿರುವ ಜುಕರ್​ ಬರ್ಗ್ ಮತ್ತು ಎಲೋನ್ ಮಸ್ಕ್​ ತಾವಿಬ್ಬರೂ ಕೇಜ್ ಫೈಟ್ ಆಡಲಿದ್ದೇವೆ ಎಂದು ಕಳೆದ ಜೂನ್​ನಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಜುಕರ್​ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಮಸ್ಕ್​ ಜೂನ್​ನಲ್ಲಿ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಫೇಸ್​ಬುಕ್ ಮುಖ್ಯಸ್ಥ ಜುಕರ್​ ಬರ್ಗ್, ಮಸ್ಕ್​ ಅವರ ಪೋಸ್ಟ್​ನ ಸ್ಕ್ರೀನ್ ಶಾಟ್​ ಶೇರ್​ ಮಾಡಿ, ಫೈಟ್​ ಎಲ್ಲಿ ಮಾಡೋಣ ಲೊಕೇಶನ್ ಕಳುಹಿಸು ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಮಸ್ಕ್, "ವೇಗಾಸ್ ಆಕ್ಟಾಗಾನ್​" ಎಂದು ಪೋಸ್ಟ್ ಮಾಡಿದ್ದರು. ಜುಲೈನಲ್ಲಿ ಜುಕರ್​ ಬರ್ಗ್​ ಯುಎಫ್​ಸಿ ಚಾಂಪಿಯನ್​ಗಳಾದ ಇಸ್ರೇಲ್ ಅಡೆಸಾನ್ಯಾ ಮತ್ತು ಅಲೆಕ್ಸಾಂಡರ್ ವೊಲ್ಕನೋವ್​ಸ್ಕಿ ಅವರೊಂದಿಗೆ ಮಿಕ್ಸೆಡ್ ಮಾರ್ಶಲ್ ಆರ್ಟ್​​ಗಳ ಸಮರ ಕಲೆಗಳಲ್ಲಿ (ಎಂಎಂಎ) ತರಬೇತಿ ಪಡೆಯಲು ಪ್ರಾರಂಭಿಸಿದ್ದು ಕುತೂಹಲ ಮೂಡಿಸಿದೆ.

ಭಾನುವಾರ ಕೂಡ ಮಸ್ಕ್​ ಕೇಜ್ ಫೈಟ್​ ಬಗ್ಗೆ ತಮ್ಮ ಎಕ್ಸ್​​ (ಟ್ವಿಟರ್​) ನಲ್ಲಿ ಪೋಸ್ಟ್​ ಮಾಡಿ, ನಾನಿವಾಗ ಪ್ರತಿದಿನ ಭಾರ ಎತ್ತುವ ಅಭ್ಯಾಸ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ಕೆಲಸದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ, ಹೀಗಾಗಿ ವ್ಯಾಯಾಮ ಉಪಕರಣಗಳನ್ನು ಆಫೀಸಿಗೂ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದಿದ್ದರು.

ಇಬ್ಬರ ಫೈಟ್​​ನ ಉದ್ದೇಶವಾದರೂ ಏನು ಎಂದು ಎಕ್ಸ್​ ಬಳಕೆದಾರರೊಬ್ಬರು ಮಸ್ಕ್​ಗೆ ಕೇಳಿದ್ದರು. ಇದಕ್ಕೆ ರಿಪ್ಲೈ ಮಾಡಿದ್ದ ಮಸ್ಕ್​, ಇದೊಂದು ಯುದ್ಧದ ಸುಸಂಸ್ಕೃತ ರೂಪವಾಗಿದೆ. ಪುರುಷರು ಯುದ್ಧವನ್ನು ಪ್ರೀತಿಸುತ್ತಾರೆ ಎಂದಿದ್ದರು. ನಾನು ನಿಮ್ಮೊಂದಿಗೆ ಕೇಜ್​ ಫೈಟ್​ ಆಡಲು ಸಿದ್ಧನಿದ್ದೇನೆ ಎಂದು ಕಳೆದ ಜೂನ್ 20 ರಂದು ಎಲೋನ್ ಮಸ್ಕ್​ ಟ್ವೀಟ್​ ಮಾಡಿದ ನಂತರ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ. ನಿಜವಾಗಿಯೂ ಇಬ್ಬರ ಮಧ್ಯೆ ಅಂಥದೊಂದು ಫೈಟ್​ ನಡೆಯುತ್ತದೆಯಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದನ್ನೂ ಓದಿ : China Taiwan conflict: ತೈವಾನ್​ ಮೇಲೆ ಆತ್ಮಹತ್ಯಾ ದಾಳಿಗೆ ಸಿದ್ಧ; ಚೀನಾ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.