ETV Bharat / science-and-technology

WhatsApp: ಇನ್ಮುಂದೆ ನೀವು ಒಂದೇ ಡಿವೈಸ್​ನಲ್ಲಿ ಅನೇಕ ಖಾತೆ ಪಡೀಬಹುದು: ಬರಲಿದೆ ಹೊಸ ವೈಶಿಷ್ಟ್ಯ

author img

By

Published : Jun 16, 2023, 1:08 PM IST

WhatsApp working on multi-account feature on Android
WhatsApp working on multi-account feature on Android

ಇನ್ನು ಮುಂದೆ ಒಂದೇ ವಾಟ್ಸ್​ ಆ್ಯಪ್ ಅಪ್ಲಿಕೇಶನ್​ನಲ್ಲಿ ಅನೇಕ ವಾಟ್ಸ್​ ಆ್ಯಪ್ ಖಾತೆಗಳನ್ನು ಲಾಗಿನ್ ಮಾಡಬಹುದಾದ ವೈಶಿಷ್ಟ್ಯ ಬರಲಿದೆ. ವಾಟ್ಸ್​ ಆ್ಯಪ್ ಈ ವೈಶಿಷ್ಟ್ಯ ತಯಾರಿಸುವಲ್ಲಿ ನಿರತವಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ : ಒಂದೇ ಡಿವೈಸ್​ನಲ್ಲಿ ಒಂದಕ್ಕಿಂತ ಹೆಚ್ಚು ವಾಟ್ಸ್​ ಆ್ಯಪ್ ಖಾತೆಗಳನ್ನು ಲಾಗಿನ ಮಾಡಬಹುದಾದ ಮಲ್ಟಿ ಅಕೌಂಟ್ ವೈಶಿಷ್ಟ್ಯವನ್ನು ತಯಾರಿಸಲು ವಾಟ್ಸ್​ ಆ್ಯಪ್ ಕೆಲಸ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ. ಬಳಕೆದಾರರು ಯಾವ ಖಾತೆಗೆ ಲಾಗ್ ಇನ್ ಮಾಡಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುವ ಮೆನು ಒಂದನ್ನು ಅಳವಡಿಸುವಲ್ಲಿ ಕಂಪನಿ ಕಾರ್ಯೋನ್ಮುಖವಾಗಿದೆ ಎಂದು ವರದಿ ಹೇಳಿದೆ.

ಬಳಕೆದಾರರು ಮೊದಲ ಬಾರಿಗೆ ಹೆಚ್ಚುವರಿ ಖಾತೆಯೊಂದನ್ನು ರಚಿಸಿದಾಗ, ಅವರು ಅದರಿಂದ ಲಾಗ್ ಔಟ್ ಮಾಡಲು ನಿರ್ಧರಿಸುವವರೆಗೆ ಅದನ್ನು ಅವರ ಡಿವೈಸ್​ನಲ್ಲಿ ಸೇವ್ ಮಾಡಲಾಗುತ್ತದೆ. ಅವರು ಬಯಸಿದಾಗ ಅದನ್ನು ಬದಲಾಯಿಸಲು ಅವಕಾಶವಿರುತ್ತದೆ.

ಬಹು ಖಾತೆಗಳನ್ನು ಒಂದೇ ಡಿವೈಸ್​ನಲ್ಲಿ ಇಟ್ಟುಕೊಳ್ಳುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಭಾಷಣೆಗಳು, ಕೆಲಸ ಸಂಬಂಧಿತ ಚರ್ಚೆಗಳು ಮತ್ತು ಇತರ ಸಾಮಾಜಿಕ ಸಂವಹನಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗೆಯೇ ಗೌಪ್ಯತೆ ಕಾಪಾಡಿಕೊಳ್ಳಲು, ಅಧಿಸೂಚನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಮಾನಾಂತರ ಅಪ್ಲಿಕೇಶನ್‌ಗಳ ಅಗತ್ಯವಿಲ್ಲದೆ ವಿವಿಧ ಖಾತೆಗಳ ನಡುವೆ ಸ್ವಿಚ್ ಮಾಡಲು ಸಾಧ್ಯವಾಗುತ್ತದೆ.

ಬಹು ಖಾತೆ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು ಇದನ್ನು ಅಪ್ಲಿಕೇಶನ್‌ನ ಭವಿಷ್ಯದ ಅಪ್ಡೇಟ್​ನಲ್ಲಿ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುವುದು ಎಂದು ವರದಿ ಹೇಳಿದೆ. ಏತನ್ಮಧ್ಯೆ iOS ಮತ್ತು Android ನಲ್ಲಿ ಕೆಲವು ಬೀಟಾ ಪರೀಕ್ಷಕರಿಗೆ ವಾಟ್ಸ್​ ಆ್ಯಪ್ ಹೊಸ ವೀಡಿಯೊ ಸಂದೇಶಗಳ ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಹೊಸ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ವಿಡಿಯೊ ಸಂದೇಶಗಳನ್ನು ರೆಕಾರ್ಡ್ ಮಾಡುವ ಮತ್ತು ಕಳುಹಿಸುವ ಸೌಲಭ್ಯವನ್ನು ನೀಡಲಿದೆ. ಬಳಕೆದಾರರು ಯಾವುದೇ ಸಂಭಾಷಣೆಯಲ್ಲಿ ಚಾಟ್ ಬಾರ್‌ನಲ್ಲಿ ಮೈಕ್ರೊಫೋನ್ ಬಟನ್ ಅನ್ನು ಹಿಡಿದಾಗ, ಅದು ವಿಡಿಯೋ ಕ್ಯಾಮರಾ ಬಟನ್ ಆಗಿ ಬದಲಾಗುತ್ತದೆ.

ವಾಟ್ಸ್​ ಆ್ಯಪ್ ಮೆಸೆಂಜರ್ ಎಂಬುದು Android ಮತ್ತು iPhone ಎರಡರಲ್ಲೂ ಲಭ್ಯವಿರುವ ಉಚಿತ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಇದರ ಮೂಲಕ ಇತರ ಬಳಕೆದಾರರಿಗೆ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಪಠ್ಯ ಸಂದೇಶಗಳನ್ನು ಕಳುಹಿಸಬಹುದು. ಮುಖ್ಯವಾಗಿ ವಾಟ್ಸ್​ ಆ್ಯಪ್ ಚಾಟ್‌ಗಳು ಇಂಟರ್ನೆಟ್‌ ಮೂಲಕ ಕಳುಹಿಸಲ್ಪಡುತ್ತವೆ. ಇದು ನಿಮ್ಮ ಫೋನ್ ನಲ್ಲಿನ ಎಸ್ಸೆಮ್ಮೆಸ್ ಸೇವೆಗಿಂತ ವಿಭಿನ್ನವಾಗಿದೆ.

ಚಾಟ್‌ಗಳ ಒಳಗೆ, ಫೋಟೋಗಳನ್ನು ಕಳುಹಿಸಲು, ನಿಮ್ಮ ಲೊಕೇಶನ್ ಹಂಚಿಕೊಳ್ಳಲು, GIF ಗಳನ್ನು ಹುಡುಕಲು ಮತ್ತು ಕಳುಹಿಸಲು ಮತ್ತು ಅಂತಹುದೇ ಆಯ್ಕೆಯನ್ನು ಒಳಗೊಂಡಂತೆ ಆಧುನಿಕ ಸಂದೇಶ ಕಳುಹಿಸುವ ಅಪ್ಲಿಕೇಶನ್‌ನಿಂದ ನೀವು ನಿರೀಕ್ಷಿಸುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್​ ಆ್ಯಪ್ ಹೊಂದಿದೆ. ವಾಟ್ಸ್​ ಆ್ಯಪ್​ ಅನ್ನು 2009 ರಲ್ಲಿ ಇಬ್ಬರು ಮಾಜಿ ಯಾಹೂ ನೌಕರರು ಸ್ಥಾಪಿಸಿದರು. 2014 ರಲ್ಲಿ ಫೇಸ್‌ಬುಕ್ ಇದನ್ನು ಖರೀದಿಸಿತು ಮತ್ತು ಅಂದಿನಿಂದ ಇದು ಫೇಸ್‌ಬುಕ್ ಕಂಪನಿಯ ಒಡೆತನದಲ್ಲಿದೆ.

ಇದನ್ನೂ ಓದಿ : AI Effect: 8 ಲಕ್ಷ ಉದ್ಯೋಗ ಕಸಿಯಲಿದೆ ಕೃತಕ ಬುದ್ಧಿಮತ್ತೆ: ಹಾಂ​ಕಾಂಗ್​ ಉದ್ಯೋಗಿಗಳಲ್ಲಿ ಆತಂಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.