ETV Bharat / science-and-technology

ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ ಸೌದಿ ಮಹಿಳೆ!

author img

By

Published : May 22, 2023, 1:23 PM IST

Axiom Space's private astronauts headed to ISS with 1st Saudi woman
Axiom Space's private astronauts headed to ISS with 1st Saudi woman

ಆಕ್ಸಿಯಮ್ ಮಿಷನ್ 2 (Ax-2) ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ.

ವಾಷಿಂಗ್ಟನ್ : ಅಮೆರಿಕದ ಖಾಸಗಿ ಬಾಹ್ಯಾಕಾಶ ಆವಾಸಸ್ಥಾನ ಕಂಪನಿ ಆಕ್ಸಿಯಮ್ ಸ್ಪೇಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತನ್ನ ಎರಡನೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿತು. ಈ ಬಾಹ್ಯಾಕಾಶ ನೌಕೆಯಲ್ಲಿ ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿರುವುದು ವಿಶೇಷ. ಆಕ್ಸಿಯಮ್ ಮಿಷನ್ 2 (Ax-2) ನೌಕೆಯು 5:37 pm EDT ಭಾನುವಾರ (ಸೋಮವಾರ ಬೆಳಗ್ಗೆ 3:07 IST) ಸಮಯದಲ್ಲಿ ನಾಸಾದ ಫ್ಲೊರಿಡಾದ ಕೆನೆಡಿ ಸ್ಪೇಸ್ ಸೆಂಟರ್‌ನಲ್ಲಿನ ಲಾಂಚ್ ಕಾಂಪ್ಲೆಕ್ಸ್​ನಿಂದ ಸ್ಪೇಸ್​ ಎಕ್ಸ್​ 9 ರಾಕೆಟ್​ ಮೂಲಕ ಉಡಾವಣೆಗೊಂಡಿತು.

Ax-2 ಮಿಷನ್ ಖಾಸಗಿ ಗಗನಯಾತ್ರಿಗಳು ಮತ್ತು ವಿದೇಶಿ ಸರ್ಕಾರಗಳನ್ನು ಪ್ರತಿನಿಧಿಸುವ ಗಗನಯಾತ್ರಿಗಳನ್ನು ಒಳಗೊಂಡಿರುವ ಮೊದಲ ವಾಣಿಜ್ಯ ಮಾನವ ಬಾಹ್ಯಾಕಾಶ ಯಾನವಾಗಿದೆ. ಜೊತೆಗೆ ಮಹಿಳೆಯ ನೇತೃತ್ವದಲ್ಲಿ ಮೊದಲ ಖಾಸಗಿ ಮಿಷನ್ ಆಗಿದೆ. ಆಕ್ಸಿಯಮ್ ಸ್ಪೇಸ್‌ನ ಹ್ಯೂಮನ್ ಸ್ಪೇಸ್‌ಫ್ಲೈಟ್‌ನ ನಿರ್ದೇಶಕ ಪೆಗ್ಗಿ ವಿಟ್ಸನ್, ಮಾಜಿ NASA ಗಗನಯಾತ್ರಿ ಮತ್ತು ISS ಕಮಾಂಡರ್ ಈ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ ಮತ್ತು ಏವಿಯೇಟರ್ ಜಾನ್ ಶಾಫ್ನರ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸೌದಿ ಅರೇಬಿಯಾದ ಅಲಿ ಅಲ್ಕರ್ನಿ ಮತ್ತು ರಯಾನಾ ಬರ್ನಾವಿ ಈ ಇಬ್ಬರು ಮಿಷನ್ ತಜ್ಞರಾಗಿದ್ದಾರೆ.

Axiom, SpaceX, ಮತ್ತು Axiom ಮಿಷನ್ 2 ಸಿಬ್ಬಂದಿಗೆ ಯಶಸ್ವಿ ಉಡಾವಣೆಗಾಗಿ ಅಭಿನಂದನೆಗಳು! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ Ax-2 ಗಗನಯಾತ್ರಿಗಳು 20 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶ ವಿಕಿರಣ, ಹವಾಮಾನ, ಕಡಿಮೆ ಗುರುತ್ವಾಕರ್ಷಣೆಯ ಪರಿಸ್ಥಿತಿಗಳು ಮತ್ತು ಇನ್ನಷ್ಟು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರು ನಮಗೆ ಸಹಾಯ ಮಾಡಲಿದ್ದಾರೆ ಎಂದು NASA ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.

ಒಂದು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ನಂತರ ಗಗನಯಾತ್ರಿಗಳು ಕಕ್ಷೆಯಲ್ಲಿರುವ ಪ್ರಯೋಗಾಲಯದಲ್ಲಿ ವಿಜ್ಞಾನ, ಪ್ರಭಾವ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಒಳಗೊಂಡಿರುವ ಸಂಪೂರ್ಣ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲು ಕೆಲಸ ಮಾಡಲಿದ್ದಾರೆ. Ax-2 ರ ಬಹುರಾಷ್ಟ್ರೀಯ ಗಗನಯಾತ್ರಿ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣದಲ್ಲಿ 20 ಕ್ಕೂ ಹೆಚ್ಚು ವಿಭಿನ್ನ ಪ್ರಯೋಗಗಳನ್ನು ನಡೆಸುತ್ತಾರೆ.

ಬಾಹ್ಯಾಕಾಶಕ್ಕೆ ತೆರಳುವ ಸಮಯದಲ್ಲಿ ಸಂಗ್ರಹಿಸಲಾಗುವ ಮಾಹಿತಿಯು ಭೂಮಿಯ ಮೇಲೆ ಹಾಗೂ ಬಾಹ್ಯಾಕಾಶದಲ್ಲಿ ಮಾನವ ಶರೀರವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡಲಿದೆ. ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳ ಮೂಲಕ ಮತ್ತು ಭವಿಷ್ಯದಲ್ಲಿ ಆಕ್ಸಿಯಮ್ ನಿಲ್ದಾಣದಲ್ಲಿ ಅತ್ಯಾಕರ್ಷಕ ಮತ್ತು ಪ್ರಭಾವಶಾಲಿ ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ಉತ್ಪಾದನೆಗಳನ್ನು ಕೂಡ ಆಕ್ಸಿಯಮ್ ಸ್ಪೇಸ್ ಸುಗಮಗೊಳಿಸುತ್ತಿದೆ.

ಆರೋಗ್ಯ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗಾರಿಕಾ ಪ್ರಗತಿಯನ್ನು ಸಕ್ರಿಯಗೊಳಿಸುವಂತಹ ಕ್ಷೇತ್ರಗಳಲ್ಲಿ ಭೂಮಿಯ ಮೇಲಿನ ಜೀವನಕ್ಕೆ ಪ್ರಯೋಜನವಾಗುವಂತೆ ಜ್ಞಾನವನ್ನು ವಿಸ್ತರಿಸಲು ಈ ಕಾರ್ಯಾಚರಣೆಗಳು ಸಹಾಯ ಮಾಡಲಿವೆ. ಆಕ್ಸಿಯಮ್ ಸ್ಪೇಸ್​ ಗಗನಯಾತ್ರಿಗಳು ಮೇ 30 ರಂದು ಭೂಮಿಗೆ ಮರಳಲು ತಮ್ಮ ಪ್ರಯಾಣವನ್ನು ಆರಂಭಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ಖಾಲಿಯಾಗುತ್ತಿವೆ ಸರೋವರಗಳು; 200 ಕೋಟಿ ಜನರಿಗೆ ನೀರಿನ ಕೊರತೆ ಸಂಭವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.