ETV Bharat / science-and-technology

ವಿಶ್ವದ ಯಾವುದೇ ಭಾಗಕ್ಕೆ ಮೊಬೈಲ್ ಸಂಪರ್ಕ; 21 ಉಪಗ್ರಹ ಹಾರಿಸಿದ ಸ್ಪೇಸ್​ಎಕ್ಸ್​

author img

By ETV Bharat Karnataka Team

Published : Jan 3, 2024, 4:53 PM IST

SpaceX launches 1st batch of satellites
SpaceX launches 1st batch of satellites

ವಿಶ್ವದ ಯಾವುದೇ ಭಾಗಕ್ಕಾದರೂ ಮೊಬೈಲ್ ಸಂಪರ್ಕ ಕಲ್ಪಿಸುವ ಡೈರೆಕ್ಟ್ ಟು ಸೆಲ್ ಯೋಜನೆಯ ಅಂಗವಾಗಿ ಸ್ಪೇಸ್​ ಎಕ್ಸ್​ ಮೊದ ಹಂತದ ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ನವದೆಹಲಿ : ವಿಶ್ವದ ಯಾವುದೇ ಮೂಲೆಯಲ್ಲಿರುವ ಮೊಬೈಲ್ ಫೋನ್ ಬಳಕೆದಾರರನ್ನು ಪರಸ್ಪರ ಸಂಪರ್ಕಿಸಲು ಸಾಧ್ಯವಾಗಿಸುವ ಮೊದಲ ಬ್ಯಾಚಿನ ಉಪಗ್ರಹಗಳನ್ನು ಎಲೋನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದೆ. ಈಗ ಉಡಾವಣೆಗೊಂಡ 21 ಹೊಸ ಸ್ಟಾರ್​ಲಿಂಕ್ ಉಪಗ್ರಹಗಳ ಪೈಕಿ ಆರು 2022 ರಲ್ಲಿ ಕಂಪನಿ ಘೋಷಿಸಿದ ಹೊಸ 'ಡೈರೆಕ್ಟ್ ಟು ಸೆಲ್' (Direct to Cell) ಸೇವೆಯನ್ನು ಬೆಂಬಲಿಸಲಿವೆ.

'ಡೈರೆಕ್ಟ್ ಟು ಸೆಲ್' ಸಾಮರ್ಥ್ಯದೊಂದಿಗೆ ಈ ಮಿಷನ್​​ನಲ್ಲಿರುವ ಆರು ಸ್ಟಾರ್​ಲಿಂಕ್ ಉಪಗ್ರಹಗಳು ಜಾಗತಿಕ ಸಂಪರ್ಕವನ್ನು ಮತ್ತಷ್ಟು ಉತ್ತಮಗೊಳಿಸಲಿವೆ ಮತ್ತು ಸಂಪರ್ಕ ರಹಿತ (ಡೆಡ್ ಝೋನ್) ವಲಯಗಳ ನಿವಾರಣೆಗೆ ಸಹಾಯ ಮಾಡುತ್ತವೆ ಎಂದು ಕಂಪನಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಅಮೆರಿಕದ ಟಿ-ಮೊಬೈಲ್ ನ 4G LTE ಕಂಪ್ಯಾಟಿಬಲ್​ ಫೋನ್​ಗಳ ಮೇಲೆ 'ಡೈರೆಕ್ಟ್ ಟು ಸೆಲ್' ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಸ್ಪೇಸ್​ ಎಕ್ಸ್​ಗೆ ಈ ಉಪಗ್ರಹಗಳು ಸಹಾಯ ಮಾಡಲಿವೆ. ಮುಂದಿನ ವರ್ಷ ಕೆಲ ದೇಶಗಳಲ್ಲಿ ಟೆಕ್ಸ್ಟ್​ ಮೆಸೇಜ್ ಸೇವೆಯನ್ನು ಆರಂಭಿಸುವ ಮುನ್ನ ಈ ಪರೀಕ್ಷೆ ಅಗತ್ಯವಾಗಿದೆ.

ಹೆಚ್ಚಿನ ಡಿ 2 ಸಿ ಉಪಗ್ರಹಗಳು ಆನ್ ಲೈನ್​ಗೆ ಬರುತ್ತಿದ್ದಂತೆಯೇ ಸ್ಪೇಸ್ ಎಕ್ಸ್ ಈ ಯೋಜನೆಗೆ 2025 ರ ನಂತರ ಧ್ವನಿ ಮತ್ತು ಡೇಟಾವನ್ನು (ಮತ್ತು ಐಒಟಿ ಸಾಧನಗಳನ್ನು) ಸೇರಿಸಲಿದೆ. "ಇದು ಭೂಮಿಯ ಮೇಲೆ ಯಾವುದೇ ಪ್ರದೇಶದಲ್ಲಾದರೂ ಮೊಬೈಲ್ ಫೋನ್ ಸಂಪರ್ಕಕ್ಕೆ ಅನುವು ಮಾಡಿಕೊಡುತ್ತದೆ" ಎಂದು ಎಲೋನ್ ಮಸ್ಕ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಗಮನಿಸಿ, ಇದು ಪ್ರತಿ ಬೀಮ್​ಗೆ 7 ಎಂಎಂ ಅನ್ನು ಮಾತ್ರ ಬೆಂಬಲಿಸುತ್ತದೆ ಮತ್ತು ಬೀಮ್​ಗಳು ತುಂಬಾ ದೊಡ್ಡದಾಗಿರುತ್ತವೆ. ಆದ್ದರಿಂದ ಸೆಲ್ಯುಲಾರ್ ಸಂಪರ್ಕವಿಲ್ಲದ ಸ್ಥಳಗಳಿಗೆ ಇದು ಉತ್ತಮ ಪರಿಹಾರವಾಗಿದ್ದರೂ, ಅಸ್ತಿತ್ವದಲ್ಲಿರುವ ಟೆರೆಸ್ಟ್ರಿಯಲ್ ಸೆಲ್ಯುಲಾರ್ ನೆಟ್​ವರ್ಕ್​ಗಳೊಂದಿಗೆ ಇದು ಅರ್ಥಪೂರ್ಣವಾಗಿ ಸ್ಪರ್ಧಾತ್ಮಕವಾಗಿಲ್ಲ" ಎಂದು ಮಸ್ಕ್​ ಹೇಳಿದ್ದಾರೆ.

ಡೈರೆಕ್ಟ್ ಟು ಸೆಲ್ ಸಾಮರ್ಥ್ಯಗಳನ್ನು ಹೊಂದಿರುವ ಸ್ಟಾರ್ ಲಿಂಕ್ ಉಪಗ್ರಹಗಳು ಭೂಮಿ, ಸರೋವರಗಳು ಅಥವಾ ಕರಾವಳಿ ನೀರಿನಲ್ಲಿ ನೀವು ಎಲ್ಲಿದ್ದರೂ ಪಠ್ಯ, ಕರೆ ಮತ್ತು ಬ್ರೌಸಿಂಗ್​​ನ ಸೇವೆ ಬಳಸುವ ಸ್ವಾತಂತ್ರ್ಯ ನೀಡುತ್ತವೆ. ಡೈರೆಕ್ಟ್ ಟು ಸೆಲ್ ಐಒಟಿ ಸಾಧನಗಳನ್ನು ಸಾಮಾನ್ಯ ಎಲ್​ಟಿಇ ಮಾನದಂಡಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಜಿಸ್ಯಾಟ್-20 ಉಡಾವಣೆಗೆ ಸ್ಪೇಸ್​ಎಕ್ಸ್​ನ ಫಾಲ್ಕನ್ ರಾಕೆಟ್​ ಬಳಸಲಿದೆ ಇಸ್ರೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.